“ನಮ್ಮ ಪವರ್‌ ರನ್‌” ಆಯೋಜನೆಗೆ ಚಾಲನೆ ನೀಡಲಿದ್ದಾರೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

ಡೊಡ್ಮನೆ ಹುಡುಗ ಪುನೀತ್‌ ರಾಜ್‌ಕುಮಾರ್‌ ಅವರ ಫಿಟ್ನೆಸ್‌ ನೋಡಿ ಮಾರು ಹೋಗದವರೇ ಇಲ್ಲ. ನಟ ಪುನೀತ್‌ ಉತ್ತಮ ಆರೋಗ್ಯಕ್ಕಾಗಿ ಪ್ರತಿನಿತ್ಯ ವರ್ಕ್‌ಔಟ್‌ ಮಾಡುತ್ತಿದ್ದರು. ಹೀಗಾಗಿ ಪುನೀತ್‌ ತಮ್ಮ ಜೀವನದಲ್ಲಿ ಫಿಟ್ನೆಸ್‌ಗೆ ಸಾಕಷ್ಟು ಪ್ರಾಮುಖ್ಯತೆ ನೀಡಿದ್ದಾರೆ. ಇವರ ವರ್ಕ್‌ಔಟ್‌ ನೋಡಿ ಅದೆಷ್ಟೋ ಜನ ಸ್ಟಾರ್‌ ನಟರು ಅಭಿಮಾನಿಗಳು ತಮ್ಮ ದೇಹವನ್ನು ದಂಡಿಸಲು ಮುಂದಾಗಿದ್ದಾರೆ. ಸದ್ಯ ನಟ ಪುನೀತ್‌ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಅವರ ನೆನಪಿಗಾಗಿ ಅಭಿಮಾನಿಗಳು ಒಂದಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಿದ್ದಾರೆ. ಅದರಂತೆ ಅಪ್ಪುಗೆ ಗೌರವ ಸೂಚಿಸುವ ಸಲುವಾಗಿ “ನಮ್ಮ ಪವರ್‌ ರನ್‌”ನ್ನು (Our power run) ಆಯೋಜನೆ ಮಾಡಲಾಗಿದ್ದು, ಇದಕ್ಕೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಚಾಲನೆ ನೀಡಲಿದ್ದಾರೆ.

ಹೌದು ಪುನೀತ್‌ ರಾಜ್‌ಕುಮಾರ್‌ ಬದುಕಿದ್ದಷ್ಟು ದಿನ, ನಾವು ಆರೋಗ್ಯವಾಗಿದ್ದರೆ ನಮ್ಮವರನ್ನು ಚೆನ್ನಾಗಿ ನೋಡಿಕೊಳ್ಳಬಹುದು ಅನ್ನುವುದನ್ನು ಹೇಳುತ್ತಾ ಬಂದಿದ್ದಾರೆ. ಅದಕ್ಕಾಗಿ ಫಿಟ್‌ ಆಗಿರಲು ಸಖತ್‌ ವರ್ಕ್‌ಔಟ್‌ ಮಾಡುತ್ತಿದ್ದರು. ಇದೇ ಬರುವ ಮಾರ್ಚ್ 19ರಂದು ಪುನೀತ್ ರಾಜ್‌ಕುಮಾರ್ ಬೆಂಗಳೂರಿನ ಹೊಸಕೆರೆ ಹಳ್ಳಿಯ ನೈಸ್ ರಸ್ತೆಯಿಂದ ಇವರ ಸಂಬಂಧಿ ದೀಪ್ತಿ ಬಾಬು ಅವರ ಸೂತ್ರ ಫಿಟ್ನೆಸ್ ಸಂಸ್ಥೆಯಿಂದ ‘ನಮ್ಮ ಪವರ್ ರನ್’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದನ್ನು ಕಳೆದ ವರ್ಷ ಜುಲೈ ತಿಂಗಳಲ್ಲಿಯೇ ಅಶ್ವಿನಿ ಪುನೀತ್ ರಾಜ್‌ಕುಮಾರ್ ಲಾಂಚ್ ಮಾಡಿದ್ದಾರೆ.

ಇದನ್ನೂ ಓದಿ : ನಟ ವಿಜಯರಾಘವೇಂದ್ರ ಅಭಿನಯದ “ಕಾಸಿನ ಸರ” ರಿಲೀಸ್‌ಗೆ ರೆಡಿ

ಇದನ್ನೂ ಓದಿ : ಸ್ಯಾಂಡಲ್‌ವುಡ್‌ “ಕಬ್ಜ” ಸಿನಿಮಾದ ಟ್ರೈಲರ್‌ ಲಾಂಚ್‌ ಡೇಟ್‌ ಫಿಕ್ಸ್‌

ಇದನ್ನೂ ಓದಿ : Shilpa Shetty : ಸ್ಯಾಂಡಲ್‌ವುಡ್‌ಗೆ ಮತ್ತೆ ಬರಲಿದ್ದಾರೆ ಶಿಲ್ಪಾ ಶೆಟ್ಟಿ : ಯಾವ ಸಿನಿಮಾಕ್ಕಾಗಿ ಗೊತ್ತಾ ?

“ಅಪ್ಪು ಮಾಮನನ್ನು ನೋಡಿ ಪ್ರೇರಣೆ ಹೊಂದಿದವರು ಎಷ್ಟೋ ಮಂದಿ ಇದ್ದಾರೆ. ಹಾಗಂತ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ. ವಿದೇಶದಲ್ಲಿ ಇರುವವರು ನನಗೆ ಫೋನ್ ಮಾಡಿ ಪುನೀತ್ ಅವರಿಂದ ನನ್ನ ಬದುಕೇ ಬದಲಾಗಿದೆ ಎಂದು ಹೇಳುತ್ತಿದ್ದಾರೆ. ಅಪ್ಪು ಮಾಮಾ ಇದ್ದಾಗ ಅದೆಷ್ಟೋ ಮ್ಯಾರಥಾನ್‌ಗಳಲ್ಲಿ ರನ್ ಮಾಡಿದ್ದಾರೆ. ಇದು ಹಲವರಿಗೆ ಪ್ರೇರಣೆಯಾಗಿದೆ. ಹೀಗಾಗಿ ಯುವಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವಂತೆ ನಮ್ಮ ಪವರ್ ರನ್ ಅನ್ನು ಆಯೋಜನೆ ಮಾಡಿದ್ದೇವೆ. ಈ ಮೂಲಕ ಯುವಕರು ಶಿಸ್ತಿನ ಜೀವನ ನಡೆಸುವುದಕ್ಕೆ ಅನುಕೂಲವಾಗಲಿದೆ.” ಎಂದು ನಮ್ಮ ಪವರ್ ರನ್ ಆಯೋಜಕರು ಹಾಗೂ ಪುನೀತ್ ಸಂಬಂಧಿಯೂ ಆಗಿರುವ ದೀಪ್ತಿ ಬಾಬು ಮಾಧ್ಯಮದವರಿಗೆ ತಿಳಿಸಿದ್ದಾರೆ.

Ashwini Puneeth Rajkumar will launch our power run project.

Comments are closed.