ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬ ಸಂಭ್ರಮ : ಅಪ್ಪು ನೆನೆದು ಭಾವುಕರಾದ ಫ್ಯಾನ್ಸ್‌

ಸ್ಯಾಂಡಲ್‌ವುಡ್‌ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಧರ್ಮಪತ್ನಿ ಅಶ್ವಿನಿ ಅವರಿಗೆ ಹುಟ್ಟುಹಬ್ಬ (Ashwini Puneeth Rajkumar’s birthday) ಸಂಭ್ರಮ. ನಟ ಪುನೀತ್‌ ಅವರು ಜೀವಂತ ಇರುವಾಗಲೂ ತಮ್ಮ ಕುಟುಂಬಕ್ಕೆ ಹೆಚ್ಚಿನ ಪ್ರಾಶಸ್ತ್ಯ ಹಾಗೂ ಸಮಯವನ್ನು ಕೊಡುತ್ತಿದ್ದರು. ತಮ್ಮ ಬಿಡುವಿನ ಸಮಯದಲ್ಲಿ ಹೆಂಡತಿ, ಮಕ್ಕಳು ಹಾಗೂ ಕುಟುಂಬದವರ ಜೊತೆ ಇರುತ್ತಿದ್ದರು. ಈಗ ಅವರಿಲ್ಲದ ನೋವು ದೊಡ್ಮನೆ ಕುಟುಂಬದವರಿಗೆ ತುಂಬಲು ಅಸಾಧ್ಯವಾಗಿದೆ. ಇಂದು (ಮಾರ್ಚ್‌ 14)ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬಕ್ಕೆ ಕುಟುಂಬದವರು, ಸಿನಿತಾರೆಯರು, ಅಭಿಮಾನಿಗಳು ಸೇರಿದಂತೆ ಅನೇಕರು ಶುಭಾಶಯವನ್ನು ಕೋರಿದ್ದಾರೆ. ನಟ ಪುನೀತ್‌ ರಾಜ್‌ಕುಮಾರ್‌ ಬದುಕಿದ್ದಿದ್ದರೆ ಪತ್ನಿಯ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಿದ್ದರು ಎನ್ನುವುದನ್ನು ನೆನೆದು ಅಭಿಮಾನಿಗಳು ತಮ್ಮ ಬೇಸರವನ್ನು ತೋಡಿಕೊಂಡಿದ್ದಾರೆ.

ಅಶ್ವಿನಿಯವರು ಕನ್ನಡದ ಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕ ಪುನೀತ್ ರಾಜಕುಮಾರ್ ರವರ ಧರ್ಮಪತ್ನಿ. ಪತಿ ಪುನೀತ್ ಜೊತೆ ಸೇರಿ ಪಿ.ಆರ್.ಕೆ ಪ್ರೊಡಕ್ಷನ್ಸ್ ಮೂಲಕ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಸ್ನೇಹಿತರ ಮೂಲಕ ಪರಿಚಯವಾದ ಅಶ್ವಿನಿವರಿಗೆ ಪುನೀತ್ ಎಂಟು ತಿಂಗಳ ನಂತರ ತಮ್ಮ ಪ್ರೇಮ ನಿವೇದನೆಯನ್ನು ಮಾಡಿಕೊಂಡಿದ್ದಾರೆ. ಮೂಲತಃ ಚಿಕ್ಕಮಗಳೂರಿನವರಾದ ಇವರು ಪುನೀತ್ ಜೊತೆ ಡಿಸೆಂಬರ್ 1, 1999 ರಂದು ಹಸೆಮಣೆಯೇರಿದ್ದಾರೆ. ಈ ದಂಪತಿಗಳಿಗೆ ಧೃತಿ ಮತ್ತು ವಂದಿತಾ ಎಂಬ ಇಬ್ಬರು ಪುತ್ರಿಯರಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ಪತಿ ಪುನೀತ್‌ ರಾಜ್‌ಕುಮಾರ್‌ ಅವರನ್ನು ಕಳೆದುಕೊಂಡ ನೋವಿನಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ದುಃಖದಲ್ಲೇ ಕೈ ತೊಳೆದಿದ್ದಾರೆ. ಅಂತಹ ದುಃಖದ ಸಮಯದಲ್ಲೂ ಸಮಯೋಚಿತವಾಗಿ ತಮ್ಮ ಕರ್ತವ್ಯ ಹಾಗೂ ಜವಬ್ದಾರಿಗಳನ್ನು ನಿಭಾಯಿಸಿಕೊಂಡು, ಅಪ್ಪು ಅಭಿಮಾನಿಗಳನ್ನು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ನಟ ಪುನೀತ್‌ ಅವರ ಅಗಲಿಕೆ ನಂತರವು ಜೇಮ್ಸ್‌ ಹಾಗೂ ಗಂಧದಗುಡಿ ಸಿನಿಮಾವನ್ನು ಅಭಿಮಾನಿಗಳ ಮುಂದೆ ತರಲು ಅದ್ದೂರು ಕಾರ್ಯಕ್ರಮವನ್ನು ಆಯೋಜಿಸಿ ಬಿಡುಗಡೆ ಮಾಡಿ ಅಪ್ಪು ಫ್ಯಾನ್ಸ್‌ಗಳ ಖುಷಿಗೆ ಕಾರಣರಾಗಿದ್ದಾರೆ.

ಇದನ್ನೂ ಓದಿ : Puneeth Rajkumar’s life success story: ದೇವತಾಮನುಷ್ಯನಾದ ಪುನೀತ್‌ ರಾಜ್‌ ಕುಮಾರ್‌ ಅವರ ಜೀವನ ಯಶೋಗಾಥೆ

ಇದನ್ನೂ ಓದಿ : Uppi avatar-video viral: ಕಬ್ಜದಲ್ಲಿ ಉಪ್ಪಿ ಅವತಾರ: ವೈರಲ್ ಆಯ್ತು ಪ್ರಿಯಾಂಕಾ ಶೇರ್ ಮಾಡಿದ ವಿಡಿಯೋ

ಇದನ್ನೂ ಓದಿ : ನಟ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ದಿನವೇ “ಕಬ್ಜ” ರಿಲೀಸ್‌ : ಕಾರಣ ತಿಳಿಸಿದ ಆರ್‌ ಚಂದ್ರು

Ashwini Puneeth Rajkumar’s birthday : ಮಾರ್ಚ್‌ 17ಕ್ಕೆ ಪುನೀತ್‌ ಹುಟ್ಟುಹಬ್ಬ :

ಇದೇ ಮಾರ್ಚ್‌ 17ಕ್ಕೆ ನಟ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬವಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಅಗಲಿಕೆಯ ನಂತರವು ಅದ್ದೂರಿಯಾಗಿ ಆಚರಿಸಲು ಅಭಿಮಾನಿಗಳು ಭರ್ಜರಿ ತಯಾರಿ ನಡೆಸಿದ್ದಾರೆ. ಇದರೊಂದಿಗೆ ಹಲವಾರು ಸಾಮಾಜಿಕ ಕೆಲಸಗಳನ್ನು ಕೂಡ ಹಮ್ಮಿಕೊಂಡಿದ್ದಾರೆ. ಇನ್ನು ಇದೇ ದಿನ ರಿಯಾಲ್‌ ಸ್ಟಾರ್‌ ಉಪೇಂದ್ರ ಹಾಗೂ ಆರ್‌ ಚಂದ್ರು ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಪ್ಯಾನ್‌ ಇಂಡಿಯಾ ಸಿನಿಮಾ “ಕಬ್ಜ” ಬಿಡುಗಡೆಯಾಗುತ್ತಿರುವುದು ವಿಶೇಷವಾಗಿದೆ.

Ashwini Puneeth Rajkumar’s birthday celebration: Fans get emotional remembering Puneeth Rajkumar

Comments are closed.