Avatar-the way of water: ಅವತಾರ್ ಅದ್ದೂರಿ ಬಿಡುಗಡೆ : ಟಿಕೆಟ್ ಬುಕ್ಕಿಂಗ್ ನಲ್ಲಿ ಕೆಜಿಎಫ್ ಸಿನಿಮಾದ್ದೇ ಮೇಲುಗೈ

(Avatar-the way of water) ಜೇಮ್ಸ್‌ ಕ್ಯಾಮರಾನ್‌ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ‘ಅವತಾರ್‌ 2’ ಶುಕ್ರವಾರ ರಾಜ್ಯದ 227 ಚಿತ್ರಮಂದಿರಗಳು ಸೇರಿದಂತೆ ಜಗತ್ತಿನಾದ್ಯಂತ 55 ಸಾವಿರ ಪರದೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದೆ. ರಾಜ್ಯದಲ್ಲಿ ಮೊದಲ ದಿನವೇ ಅವತಾರ್‌ 2 ಚಿತ್ರ ಒಂದು ಸಾವಿರ ಪ್ರದರ್ಶನಗಳನ್ನು ಕಾಣುತ್ತಿದ್ದು, ಬಹುತೇಕ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಪ್ರದರ್ಶನ ಆರಂಭವಾಗಿದೆ.

ಕನ್ನಡ ಸೇರಿದಂತೆ 20ಕ್ಕೂ ಹೆಚ್ಚು ಭಾಷೆಗಳಲ್ಲಿ ‘ಅವತಾರ್‌ 2’ (Avatar-the way of water) ತೆರೆಗೆ ಬರುತ್ತಿದ್ದು, ಕರ್ನಾಟಕ ಸೇರಿದಂತೆ ದೇಶದಾದ್ಯಂತ ಮೊದಲ ದಿನವೇ 10 ಲಕ್ಷ ಟಿಕೆಟ್‌ಗಳು ಮಾರಾಟಗೊಂಡಿವೆ. ಈ ಪೈಕಿ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳದಲ್ಲಿ 7.50 ಲಕ್ಷ ಟಿಕೆಟ್‌ಗಳು ಮಾರಾಟಗೊಂಡಿದ್ದು, 4.5 ಲಕ್ಷ ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌ ಟಿಕೆಟ್‌ಗಳು ಚಿತ್ರದ ರಿಲೀಸ್‌ ಗೂ ಮುನ್ನವೇ ಮಾರಾಟಗೊಂಡಿವೆ.

ಮೊದಲ ದಿನದ ಟಿಕೆಟ್‌ ಬುಕ್ಕಿಂಗ್‌ ನಲ್ಲಿ ಕೆಜಿಎಫ್‌ ನದ್ದೇ ಮೇಲುಗೈ
ಅವತಾರ್‌ 2 ಚಿತ್ರ ದೇಶದಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಂಡಿದ್ದು, ಐವತ್ತೆರಡು ಸಾವಿರಕ್ಕೂ ಹೆಚ್ಚಿನ ಪರದೆಯಲ್ಲಿ ಪ್ರದರ್ಶನಗೊಳ್ಳಲಿದೆ. ಭಾರತದಲ್ಲೂ ಕೂಡ ಈ ಚಿತ್ರದ ಮೊದಲ ದಿನದ ಬುಕ್ಕಿಂಗ್‌ ಭರ್ಜರಿಯಾಗೆ ನಡೆಯುತ್ತಿದೆ. ಆದರೆ ಕನ್ನಡದ ಮೇರು ನಟ ಯಶ್‌ ಚಿತ್ರ ಕೆಜಿಎಫ್‌ ಚಿತ್ರದ ಮೊದಲ ದಿನದ ಕಲೆಕ್ಷನ್‌ ಅನ್ನು ಹಿಂದಿಕ್ಕಲು ಈ ಚಿತ್ರಕ್ಕೆ ಸಾಧ್ಯವಾಗಿಲ್ಲ.

2022ರ ಏಪ್ರಿಲ್​ 14ರಂದು ಬಿಡುಗಡೆಯಾದ ಈ ಚಿತ್ರ ಕನ್ನಡ, ತಮಿಳು, ಹಿಂದಿ, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ತೆರೆಕಂಡಿದ್ದು, ಮೊದಲ ದಿನವೇ ಬರೋಬ್ಬರಿ 80 ಕೋಟಿ ಮೌಲ್ಯದ ಟಿಕೆಟ್​ ಬುಕಿಂಗ್​ ಆಗಿತ್ತು. ಆದರೆ ಅವತಾರ್‌ 2 ಚಿತ್ರ ಮೊದಲ ದಿನದಲ್ಲಿ ಇಪ್ಪತ್ತು ಕೋಟಿ ಮೌಲ್ಯದ ಟಿಕೆಟ್‌ ಕಲೆಕ್ಷನ್‌ ಮಾಡಿದ್ದು, ಕೆಜಿಎಫ್‌ ಚಿತ್ರದ ಕಲೆಕ್ಷನ್‌ ಹಿಂದಿಕ್ಕಲು ಸಾಧ್ಯವಾಗಿಲ್ಲ. ಆದರೆ ಅವತಾರ್‌ 2 ಚಿತ್ರ ಜಾಗತೀಕ ಮಾರುಕಟ್ಟೆಯಲ್ಲಿ ಬೇರೆ ಚಿತ್ರಗಳ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದೆ.

ಇದನ್ನೂ ಓದಿ : ದುನಿಯಾ ವಿಜಯ್‌ – ಪಾನಿಪುರಿ ಕಿಟ್ಟಿ ಹಲ್ಲೆ ಪ್ರಕರಣ : ದುನಿಯಾ ವಿಜಿಗೆ ನೋಟಿಸ್‌

ಚಿತ್ರಕ್ಕೆ ಮೊದಲ ದಿನವೇ ಪೈರಸಿ ಕಾಟ:
ಅವತಾರ್‌ 2 ಚಿತ್ರ ಬಿಡುಗಡೆಗೊಳ್ಳುತ್ತಿದ್ದಂತೆ ಪೈರಸಿ ಕಾಟ ಆರಂಭವಾಗಿದೆ. ಕೆಲವು ಪೈರಸಿ ವೆಬ್‌ ಸೈಟ್‌ ಗಳಲ್ಲಿ ಚಿತ್ರದ ಪ್ರತಿ ಲಭ್ಯವಾಗಿದ್ದು, ಇದು 3ಡಿ ಚಿತ್ರವಾದ ಕಾರಣ ಇದನ್ನು ಚಿತ್ರಮಂದಿರದಲ್ಲಿ ನೋಡುವುದರಿಂದ ಮಾತ್ರವೇ ಇದರ ನಿಜವಾದ ಅನುಭವ ಪಡೆಯಲು ಸಾದ್ಯ ಎಂದು ಸಿನಿಪ್ರೇಕ್ಷಕರು ನಕಲಿ ಪ್ರತಿ ಕಡೆ ಗಮನ ಕೊಡದೆ ಚಿತ್ರಮಂದಿರಗಳತ್ತ ಮುಖಮಾಡಿದ್ದಾರೆ.

(Avatar-the way of water) The much awaited movie ‘Avatar 2’ directed by James Cameron is being released on Friday in 55 thousand screens across the world including 227 theaters in the state. On the first day itself in the state, Avatar 2 is seeing one thousand screenings and most of the theaters have started screening from 6 am.

Comments are closed.