Beetroot Cutlet: ವಿಶಿಷ್ಟ ಬಣ್ಣದ, ಗರಿಗರಿಯಾದ ಬೀಟ್‌ರೂಟ್‌ ಕಟ್ಲೆಟ್‌ ಸವಿದಿದ್ದೀರಾ; ಇದು ತೂಕ ಇಳಿಕೆಗೂ ಉತ್ತಮವಾಗಿದೆ

ಬೀಟ್‌ರೂಟ್‌(Beetroot) , ಇದು ಚಳಿಗಾಲ (Winter) ದಲ್ಲಿ ಸುಲಭವಾಗಿ ಸಿಗುವ ತರಕಾರಿಗಳಲ್ಲಿ ಒಂದು. ಕೆಂಪಗಿನ ಈ ಗಡ್ಡೆ ಅಗಾಧ ಪೋಷಕಾಂಶಗಳನ್ನು ಒಳಗೊಂಡಿದೆ. ಚಳಿಗಾಲದಲ್ಲಿ ಇದನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳೂ ಇವೆ. ಬೀಟ್‌ರೂಟ್‌ನಿಂದ ಅನೇಕ ಬಗೆಯ ಅಡುಗೆಗಳನ್ನು ಮಾಡುತ್ತಾರೆ. ಬೀಟ್‌ರೂಟ್‌ ಪಲ್ಯ, ಗೊಜ್ಜು, ಹುಳಿ, ಮೊಸರುಬಜ್ಜಿ, ಹಲ್ವ, ಹೀಗೆ ಮುಂತಾದವುಗಳಲ್ಲಿ ಇದನ್ನು ಬಳಸುತ್ತಾರೆ. ಬೀಟ್‌ರೂಟ್‌ನಿಂದ ಕಟ್ಲೆಟ್‌ (Beetroot Cutlet) ಕೂಡ ತಯಾರಿಸಬಹುದು. ಇದು ರುಚಿಯಾಗಿ ಮತ್ತು ಗರಿಗರಿಯಾಗಿ ಇರುತ್ತದೆ. ಬೀಟ್‌ರೂಟ್‌ ಕಟ್ಲೆಟ್‌ ಬರೀ ರುಚಿಯಾದ ತಿಂಡಿಯಾಗಿ ಅಷ್ಟೇ ಅಲ್ಲ, ತೂಕ ಇಳಿಕೆಯ ಪ್ರತ್ನದಲ್ಲಿಯೂ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಏಕೆಂದರೆ ಇದು ಅನೇಕ ಪೋಷಕಾಂಶಗಳನ್ನು ಹೊಂದಿದೆ.

ಬೀಟ್‌ರೂಟ್‌ನ ಆರೋಗ್ಯ ಪ್ರಯೋಜನಗಳು :

  • ಬೀಟ್‌ರೂಟ್‌ ರಕ್ತದೊತ್ತಡನ್ನು ನಿಯಂತ್ರಿಸುತ್ತದೆ.
  • ಇದು ರಕ್ತ ಕಣಗಳನ್ನು ಹೆಚ್ಚಿಸುತ್ತದೆ.
  • ದೈಹಿಕ ಬೆಳವಣಿಗೆಗೆ ಅನುಕೂಲವಾಗಿದೆ.
  • ಕರುಳಿನ ಆರೋಗ್ಯ ಸುಧಾರಿಸುತ್ತದೆ.
  • ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
  • ಇದು ಕ್ಯಾನ್ಸರ್‌ ವಿರೋಧಿ ಗುಣವನ್ನು ಹೊಂದಿದೆ.

ಬೀಟ್‌ರೂಟ್‌ ಕಟ್ಲೆಟ್‌ ಮಾಡುವುದು ಹೇಗೆ?

ಬೀಟ್‌ರೂಟ್‌ ಕಟ್ಲೆಟ್‌ ತಯಾರಿಸಲು ಬೇಕಾಗುವ ಸಾಮಗ್ರಿಗಳು :

1 ಕಪ್‌ ತುರಿದ ಬೀಟ್‌ರೂಟ್‌
2 ಚಮಚ ಹುರಿದು ಪುಡಿ ಮಾಡಿದ ಶೇಂಗಾ
1 ಚಿಕ್ಕದಾದ ಬೇಯಿಸಿದ ಅಲೂಗಡ್ಡೆ
ಅರ್ಧ ಚಮಚ ಅಚ್ಚಖಾರದ ಪುಡಿ
ಕಾಲು ಚಮಚ ಗರಂ ಮಸಾಲ
ಅರ್ಧ ಚಮಚ ಜೀರಿಗೆ ಮತ್ತು ಕೊತ್ತೊಂಬರಿ ಪುಡಿ
ಅರ್ಧ ಚಮಚ ಆಮ್‌ಚೂರ್‌ ಪುಡಿ
2 ಚಮಚ ತುಪ್ಪ
2 ಚಮ ಸಣ್ಣಗೆ ಹೆಚ್ಚಿದ ಕೊತ್ತೊಂಬರಿಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು

ವಿಧಾನ :
ಮೊದಲಿಗೆ ಬೀಟ್‌ರೂಟ್‌ ತುರಿಯಿಂದ ನೀರು ಹೊರ ತೆಗೆಯಿರಿ. ಒಂದು ಪಾತ್ರೆಗೆ ಬೀಟ್‌ರೂಟ್‌, ಪುಡಿ ಮಾಡಿದ ಆಲೂಗಡ್ಡೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಆ ಮಿಶ್ರಣಕ್ಕೆ ಆಮ್‌ಚೂರ್‌ ಪುಡಿ, ಕೊತ್ತಂಬರಿ, ಜೀರಿಗೆ, ಗರಂ ಮಸಾಲಾ, ಅಚ್ಚಖಾರದ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ. ನಂತರ ಕೊತ್ತಂಬರಿ ಸೊಪ್ಪು ಮತ್ತು ಶೇಂಗಾವನ್ನು ಮೇಲಿನಿಂದ ಸೇರಿಸಿ. ನಂತರ ಉಂಡೆಗಳನ್ನು ಮಾಡಿ, ಅಂಗೈ ಅಗಲಕ್ಕೆ ತಟ್ಟಿ, ಮೇಲಿನಿಂದ ತುಪ್ಪ ಸವರಿ. ನಾನ್‌ ಸ್ಟಿಕ್‌ ಪ್ಯಾನ್‌ನಲ್ಲಿ ಸ್ವಲ್ಪ ತುಪ್ಪ ಸವರಿ, ಗರಿಗರಿಯಾಗುವವರೆಗೆ ರೋಸ್ಟ್‌ ಮಾಡಿ. ಈಗ ಗರಿಗರಿಯಾದ ಬೀಟ್‌ರೂಟ್‌ ಕಟ್ಲೆಟ್‌ ರೆಡಿ. ಇದನ್ನು ಪುದಿನಾ ಚಟ್ನಿಯೊಂದಿಗೆ ಸವಿಯಿರಿ.

ಇದನ್ನೂ ಓದಿ : ದಿಢೀರ್ ಅಂತಾ ಟೊಮ್ಯೋಟೋ ಉಪ್ಪಿನಕಾಯಿ ಮಾಡೋದು ಹೇಗೆ ?

ಇದನ್ನೂ ಓದಿ : Winter And Sesame Seeds : ಚಳಿಗಾಲದಲ್ಲಿ ಎಳ್ಳನ್ನು ಬಳಸುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ…

(Crispy and flavorful Beetroot Cutlet for weight loss journey)

Comments are closed.