Baahubali-3 : ಪ್ರಭಾಸ್, ರಾಜಮೌಳಿ ಕಾಂಬಿನೇಷನ್‌ನಲ್ಲಿ ತೆರೆಗೆ ಬರಲಿದೆ ಬಾಹುಬಲಿ -3

ಟಾಲಿವುಡ್ ಗೆ ವಿಶ್ವ ಮಟ್ಟದಲ್ಲಿ ಸಿನಿಮಾ ಕಾರಣಕ್ಕೆ ಹೆಸರು ತಂದುಕೊಟ್ಟಿದ್ದು ಬಾಹುಬಲಿ. ಪ್ರಭಾಸ್ ಗೆ ಪ್ಯಾನ್ ಇಂಡಿಯಾ ಸ್ಟಾರ್ ತಂದುಕೊಟ್ಟ ಈ ಸಿನಿಮಾ ಎರಡು ಪಾರ್ಟ್ ಗಳಾಗಿ ತೆರೆಗೆ ಬಂದು ಸಿನಿ ಪ್ರೇಮಿಗಳನ್ನು ರಂಜಿಸಿದೆ. ಮಾತ್ರವಲ್ಲ ಬಾಹುಬಲಿ ಸಿಕ್ವೇನ್ಸ್ ಮೂರು ತೆರೆಗೆ ಬರಲಿ ಎಂಬ ಆಸೆಯೂ ಚಿತ್ರಪ್ರೇಮಿಗಳಿಂದ ಹೊರಬಂದಿತ್ತು. ಆಗ ಈ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡದ ನಿರ್ದೇಶಕ ರಾಜಮೌಳಿ ಈಗ ಬಾಹುಬಲಿ (Baahubali-3) ಬಗ್ಗೆ ಮೌನ ಮುರಿದಿದ್ದು ಸಿನಿಪ್ರಿಯರಿಗೆ ಸಪ್ರೈಸ್ ನೀಡಿದ್ದಾರೆ.

ಬಾಹುಬಲಿ ಹಾಗೂ ಬಾಹುಬಲಿ -2 ಭಾರತ ಚಿತ್ರ ಇತಿಹಾಸದಲ್ಲೇ ಹಲವು ದಾಖಲೆ‌ಬರೆದ ಸಿನಿಮಾ.‌ಬಾಹುಬಲಿ ಸಿನಿಮಾ ತೆರೆಗೆ ಬಂದ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಈಗ ಬಾಹುಬಲಿ-3 ಸಿನಿಮಾ ವಿಚಾರ ಚರ್ಚೆಗೆ ಬಂದಿದೆ. ಇತ್ತೀಚಿಗೆ ತೆರೆಕಂಡ ರಾದೇ ಶ್ಯಾಮ್ ಸಿನಿಮಾದ ಪ್ರಚಾರ ಹಾಗೂ ಫ್ರೀ ರಿಲೀಸ್ ಇವೆಂಟ್ ವೇಳೆ ಬಾಹುಬಲಿ-3 (Baahubali-3) ವಿಚಾರಕ್ಕೆ ನಿರ್ದೇಶಕ ಬಾಹುಬಲಿ ಜೀವ ತುಂಬಿದ್ದು ಈಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಬಾಹುಬಲಿ 3 (Baahubali-3) ಕುರಿತು ಕೇಳಲಾದ ಪ್ರಶ್ನೆಗೆ ನಟ ಪ್ರಭಾಸ್, ನನಗೆ ಸ್ವಲ್ಪ ಸಮಯ ಬೇಕು.‌ಕೆಲಕಾಲದ ನಂತರ ಅದು ಸಾಧ್ಯವಾಗಬಹುದು. ಅಲ್ಲದೇ ಎಲ್ಲ‌ಚಿತ್ರಗಳು ಬಾಹುಬಲಿ ಯಾಗೋದಿಲ್ಲ. ಅಂತಹ ಚಿತ್ರಕ್ಕೊಂದು ಮ್ಯಾಜಿಕ್ ಬೇಕು. ರಾಜಮೌಳಿ ಮತ್ತೊಮ್ಮೆ ಅಂತಹ ಮ್ಯಾಜಿಕ್ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಇನ್ನು ಮಾಧ್ಯಮದವರ ಪ್ರಶ್ನೆ ಹಾಗೂ ನಟ ಪ್ರಭಾಸ್ ಉತ್ತರಕ್ಕೆ ಪೂರಕವಾಗಿ ಮತ್ತಷ್ಟು ಮಾಹಿತಿ ನೀಡಿದ ನಿರ್ದೇಶಕ ರಾಜಮೌಳಿ, ಬಾಹುಬಲಿ-3ಯನ್ನು ಖಂಡಿತಾ ನೀರಿಕ್ಷಿಸಬಹುದು ಎಂದಿದ್ದಾರೆ. ಮಾತ್ರವಲ್ಲ ಈ ಭಾರಿ ಸಿನಿಮಾ ಬಾಹುಬಲಿ ಸುತ್ತವೇ ಸಿದ್ಧಗೊಳ್ಳಲಿದೆ ಎಂಬ ವಿವರಣೆಯನ್ನು ನೀಡಿದ್ದಾರೆ.

ಅಲ್ಲದೇ ಬಾಹುಬಲಿ-3 ಗೆ ನಿರ್ಮಾಪಕ ಶೋಭು ಯರ್ಲಗುಡ್ಡ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದಿದ್ದಾರೆ. ಈ ಭಾರಿ ಸಿನಿಮಾದ ಕತೆ ಸೇರಿದಂತೆ ಎಲ್ಲವೂ ಸಮಯ ತೆಗೆದುಕೊಳ್ಳುತ್ತಿದೆ. ನಿಧಾನವಾಗಿ ಕತೆ ಸಿದ್ಧವಾಗುತ್ತಿದೆ‌ . ಅಲ್ಲದೇ ಈ ಭಾರಿ ನಿಮಗೆ ಮಾಹಿಷ್ಮತಿ ಸಾಮ್ರಾಜ್ಯದ ಬಗ್ಗೆಯೂ ಇಂಟ್ರಸ್ಟಿಂಗ್ ಸಂಗತಿಗಳು ಸಿನಿಮಾದಲ್ಲಿ ಕಾಣಸಿಗಲಿದೆ ಎಂದಿದ್ದಾರೆ. ಬಾಹುಬಲಿ ಬಳಿಕ ಅಭಿಮಾನಿಗಳಿಗೆ ಪ್ರಭಾಸ್ ಮೇಲಿನ ನೀರಿಕ್ಷೆಗಳು ಮತ್ತಷ್ಟು ಹೆಚ್ಚಿದ್ದು, ಸಲಾರ್ ಸಿನಿಮಾದ ಮೇಲೂ ಅಭಿಮಾನಿಗಳ ನೀರಿಕ್ಷೆ ದುಪ್ಪಟ್ಟಾಗಿದೆ. ಈಗ ಬಾಹುಬಲಿ 3 (Baahubali-3) ಬರೋ ಸಂಗತಿ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ.

ಇದನ್ನೂ ಓದಿ : ನನ್ನ ಪ್ರಾಣಕ್ಕೆ ಆತಂಕವಿದೆ : ಗನ್ ಮ್ಯಾನ್ ಕೊಡಿ ಸರ್ಕಾರಕ್ಕೆ ನಟ ಚೇತಬ್ ಮನವಿ

ಇದನ್ನೂ ಓದಿ : ನಟನೆ ಬಳಿಕ ಧಾರಾವಾಹಿ ನಿರ್ಮಾಣ : ಮೇಘಾ ಶೆಟ್ಟಿ ಕಂಡು ಹುಬ್ಬೇರಿಸಿದ ಅಭಿಮಾನಿಗಳು

( Baahubali-3 is coming to Prabhas, Rajamouli Combination)

Comments are closed.