ACB Raid : ಎಸಿಬಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ, ಕರ್ನಾಟಕದ 78 ಕಡೆ ಎಸಿಬಿ ದಾಳಿ

ಬೆಂಗಳೂರು : ಕರ್ನಾಟಕದಲ್ಲಿ ಬೆಳ್ಳಂಬೆಳಗ್ಗೆಯೇ ಎಸಿಬಿ (ACB Raid ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಜ್ಯದ 78 ಕಡೆಗಳಲ್ಲಿ ಸುಮಾರು 200 ಕ್ಕೂ ಅಧಿಕಾರಿಗಳ ತಂಡ ಏಕಕಾಲದಲ್ಲಿ ಈ ದಾಳಿ ನಡೆಸಿದೆ. ಬೆಂಗಳೂರು, ಮಂಗಳೂರು, ಯಾದಗಿರಿ, ರಾಮನಗರ, ಮೈಸೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿಯನ್ನು ನಡೆಸಿದ್ದಾರೆ. ಸುಮಾರು 18 ಅಧಿಕಾರಿಗಳ ವಿರುದ್ದ ಆದಾಯಕ್ಕಿಂತಲೂ ಮೀರಿ ಆಸ್ತಿ ಸಂಪಾದನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆದಿದೆ ಎನ್ನಲಾಗುತ್ತಿದೆ.

ಬೆಳ್ಳಂಬೆಳಗ್ಗೆಯೇ ಎಬಿಸಿ ಅಧಿಕಾರಿಗಳು ದಾಳಿ ನಡೆಸಿದ್ದು, ಅಧಿಕಾರಿಗಳ ಮನೆ, ಕಚೇರಿಗಳ ಮೇಲೆಯೂ ದಾಳಿ ನಡೆಸಲಾಗಿದೆ. ಅಧಿಕಾರಿಗಳ ಮನೆಯಲ್ಲಿ ಕೋಟ್ಯಾಂತರ ಮೌಲ್ಯದ ನಗದು, ಚಿನ್ನಾಭರಣಗಳು ಪತ್ತೆಯಾಗಿದೆ. ಸುಮಾರು ಮೂರು ಗಂಟೆಯಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಭ್ರಷ್ಟ ಅಧಿಕಾರಿಗಳ ಅಕ್ರಮ ಸಂಪತ್ತನ್ನು ಕಂಡು ಖುದ್ದು ಎಬಿಸಿ ಅಧಿಕಾರಿಗಳೇ ಶಾಕ್‌ ಆಗಿದ್ದಾರೆ.

ಕರ್ನಾಟಕದಲ್ಲಿ ( ACB Raid ) ದಾಳಿ ನಡೆದಿರುವ ಅಧಿಕಾರಿಗಳ ವಿವರ

  • ದಯಾ ಸುಂದರ್‌ ರಾಜು ( ಎಇಇ ಕೆಪಿಟಿಸಿಎಲ್‌ ) ದಕ್ಷಿಣ ಕನ್ನಡ
  • ಜ್ಞಾನೇಂದ್ರ ಕುಮಾರ್‌ ಹೆಚ್ಚುವರಿ ಆಯುಕ್ತರು ಸಾರಿಗೆ ಮತ್ತು ಸುರಕ್ಷತೆ ಬೆಂಗಳೂರು
  • ರಮೇಶ್‌ ಕಣಕಟ್ಟೆ ಆರ್‌ಎಫ್‌ ಓ ಸಾಮಾಜಿಕ ಅರಣ್ಯ ಬೆಂಗಳೂರು
  • ರಾಕೇಶ್‌ ಕುಮಾರ್‌ ಬಿಡಿಎ ಪಟ್ಟಣ ಯೋಜನೆ
  • ಬಸವ ಕುಮಾರ್‌ ಎಸ್.‌ ಅಣ್ಣಿಗೇರಿ ಶಿರಸ್ತೆದಾರ್‌, ಡಿಸಿ ಕಚೇರಿ ಗದಗ
  • ಶಿವಾನಂದ ಪಿ. ಶರಣಪ್ಪ ಖೇಡಗಿ ಆರ್‌ಎಫ್‌ಒ ಬಾದಾಮಿ
  • ಅಶೋಕ್‌ ರೆಡ್ಡಿ ಪಾಟೀಲ್‌ ಎಇಇ ಕೃಷ್ಣಭಾಗ್ಯ ಜಲ ನಿಗಮ ಲಿ. ದೇವದುರ್ಗ ರಾಯಚೂರು
  • ಬಾಲಕೃಷ್ಣ ಎಚ್.‌ ಎನ್.‌ ಪೊಲೀಸ್‌ ಇನ್‌ಸ್ಪೆಕ್ಟರ್‌ ವಿಜಯಪುರ ಪೊಲೀಸ್‌ ಠಾಣೆ ಮೈಸೂರು
  • ಗವಿರಂಗಪ್ಪ ಎಇಇ ಪಿಡಬ್ಲ್ಯೂಡಿ ಇಲಾಖೆ ಚಿಕ್ಕಮಗಳೂರು
  • ಬಸವರಾಜ ಶೇಖರ ರೆಡ್ಡಿ ಪಾಟೀಲ್‌ ಕಾರ್ಯನಿರ್ವಾಹಕ ಅಭಿಯಂತರ ಕೌಜಲಗಿ ವಿಭಾಗ ಗೋಕಾಕ
  • ಗಪಿನಾಥ್‌ ಸಾ ಎನ್‌ ಮಾಳಗಿ ಪ್ರಾಜೆಕ್ಟ್‌ ಮ್ಯಾನೇಜರ್‌ ನಿರ್ಮಿತಿ ಕೇಂದ್ರ ವಿಜಯಪುರ
  • ಮಂಜುನಾಥ್‌, ಸಹಾಯಕ ಆಯುಕ್ತರು ರಾಮನಗರ
  • ಬಿ.ಕೆ.ಶಿವಕುಮಾರ್‌ ಇಂಡಸ್ಟ್ರೀಸ್‌ ಮತ್ತು ಕಾಮರ್ಸ್‌ ಬೆಂಗಳೂರು
  • ಶ್ರೀನಿವಾಸ್‌, ಜನರಲ್‌ ಮ್ಯಾನೇಜರ್‌ ಸಮಾಜ ಕಲ್ಯಾಣ ಇಲಾಖೆ
  • ಮಹೇಶ್ವರಪ್ಪ ಜಿಲ್ಲಾ ಪರಿಸರ ಅಧಿಕಾರಿ ದಾವಣಗೆರೆ
  • ಕೃಷ್ಣನ್‌ ಎಇ ಎಪಿಎಂಸಿ ಹಾವೇರಿ
  • ಚಲುವರಾಜ್‌ ಅಬಕಾರಿ ನಿರೀಕ್ಷಕರು ಗುಂಡ್ಲುಪೇಟೆ
  • ಗಿರೀಶ್‌ ಸಹಾಯ ಇಂಜಿನಿಯರ್‌ ರಾಷ್ಟ್ರೀಯ ಹೆದ್ದಾರಿ ಸುವಿ ವಿಭಾಗ

ಇದನ್ನೂ ಓದಿ : ನೀರು, ವಿದ್ಯುತ್, ಶಿಕ್ಷಣ ಉಚಿತ : ಕರ್ನಾಟಕದಲ್ಲಿ ಆಧಿಕಾರಕ್ಕೇರಲು ಆಪ್ ಪ್ರಣಾಳಿಕೆ

ಇದನ್ನೂ ಓದಿ : ಗುಂಡಿಕ್ಕಿ ಭಾರತದ ಖ್ಯಾತ ಅಂತರಾಷ್ಟ್ರೀಯ ಕಬ್ಬಡಿ ಆಟಗಾರ ಸಂದೀಪ್ ನಂಗಲ್‌ ಹತ್ಯೆ

( ACB Raid 18 Govt Officers 78 Places 200 ACB Officials in Karnataka)

Comments are closed.