Bad Manners Release Date : ಸೂರಿ‌ – ಅಭಿಷೇಕ್‌ ಕಾಂಬಿನೇಶನ್‌ “ಬ್ಯಾಡ್‌ ಮ್ಯಾನರ್ಸ್‌” ಶೂಟಿಂಗ್‌ ಕಂಪ್ಲೀಟ್‌ : ರಿಲೀಸ್‌ ಡೇಟ್‌ ಫಿಕ್ಸ್

ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ದುನಿಯಾ ಸೂರಿ “ಪಾಪ್‌ ಕಾರ್ನ್‌ ಮಂಕಿಟೈಗರ್’ ಸಿನಿಮಾ ನಂತರ ಸೈಲೆಂಟ್ ಆಗಿದ್ದರು. ಆದೆರ ಈಗ ಸದ್ದಿಲ್ಲದೇ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ. (Bad Manners Release Date) ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಸೂರಿ ಮಾತನಾಡುವ ಸಮಯ ಬಂದಿದೆ. ದುನಿಯಾ ಸೂರಿ ಸದಾ ಮಾತು ಕಡಿಮೆ ಕೆಲಸ ಜಾಸ್ತಿ ಎನ್ನುವ ಜಾಯಮಾನದವರು. ‘ಟಗರು’ ರೀತಿಯ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ ಕೊಟ್ಟ ಸೂರಿ ನಂತರ ಮೌನಕ್ಕೆ ಜಾರಿದ್ದರು. ನಂತರ ‘ಪಾಪ್‌ ಕಾರ್ನ್‌ ಮಂಕಿಟೈಗರ್’ ಸಿನಿಮಾ ಸಿದ್ಧವಾದ ಮೇಲೆ ಮಾಧ್ಯಮಗಳ ಮುಂದೆ ಹಾಜರಾಗಿದ್ದರು. ಕಳೆದ 2 ವರ್ಷಗಳಿಂದ ಸೂರಿ ‘ಬ್ಯಾಡ್ ಮ್ಯಾನರ್ಸ್’ ಚಿತ್ರೀಕರಣದಲ್ಲಿ ತೊಡಗಿದರು. ‘ಅಮರ್’ ಸಿನಿಮಾಕ್ಕಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಅಭಿಷೇಕ್ ಅಂಬರೀಶ್‌ಗೆ ಈ ಸಿನಿಮಾದ ಮೂಲಕ ದೊಡ್ಡ ಬ್ರೇಕ್ ಕೊಡುವ ನಿರೀಕ್ಷೆ ಇದೆ.

ಅಭಿಷೇಕ್ ಅಂಬರೀಶ್ “ಬ್ಯಾಡ್ ಮ್ಯಾನರ್ಸ್” ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಮಿಂಚಿದ್ದಾರೆ. ರಚಿತಾ ರಾಮ್ ಹಾಗೂ ಪ್ರಿಯಾಂಕಾ ಕುಮಾರ್ ಅಭಿಷೇಕ್‌ ಜೊತೆಯಲಿ ನಟಿಸಿದ್ದಾರೆ. ಈ ಸಿನಿತಂಡವೂ ಅಭಿಷೇಕ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾದ ಟೀಸರ್ ರಿಲೀಸ್ ಆಗಿ ಸಖತ್‌ ಸದ್ದು ಮಾಡಿತ್ತು.ಕಳೆದ ವರ್ಷ ಸಂಕ್ರಾಂತಿ ವೇಳೆಯಲ್ಲಿ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಮುಹೂರ್ತವು ಚಾಮುಂಡಿ ಬೆಟ್ಟದಲ್ಲಿ ನೆರವೇರಿತ್ತು.

ಆ ಸಂದರ್ಭದಲ್ಲಿ ಅಭಿಷೇಕ್ ತಾಯಿ ಹಿರಿಯ ನಟಿ ಸುಮಲತಾ ಅಂಬರೀಶ್ ಮುಹೂರ್ತ ಸಮಾರಂಭಕ್ಕೆ ಹಾಜರಾಗಿ ಶುಭ ಕೋರಿದ್ದರು. ಈ ಸಿನಿಮಾದ ಚಿತ್ರೀಕರಣ ಮೊದಲು ಮಂಡ್ಯದಲ್ಲಿ ಶುರುವಾಗಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಸೆಟ್‌ಗೆ ಭೇಟಿ ನೀಡಿ ಶುಭ ಹಾರೈಸಿದ್ದಾರೆ. ಇದೀಗ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಚಿತ್ರೀಕರಣ ಮುಗಿದಿದ್ದು, ಕೇಕ್ ಕತ್ತರಿಸಿ ಸಿನಿಮಾತಂಡ ಸಂಭ್ರಮಿಸಿದೆ.

“ಬ್ಯಾಡ್ ಮ್ಯಾನರ್ಸ್” ಪಕ್ಕಾ ಸೂರಿ ಸ್ಟೈಲ್ ಪೊಲೀಸ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ. ಇದೀಗ ಶೂಟಿಂಗ್ ಮುಗಿಸಿರುವ ಸಿನಿತಂಡ ಪೋಸ್ಟ್ ಪ್ರೊಡಕ್ಷನ್ ವರ್ಕ್‌ಗೆ ಚಾಲನೆ ಕೊಟ್ಟಿದೆ. ಮುಂದಿನ ವರ್ಷ ಫೆಬ್ರವರಿ 16ಕ್ಕೆ ಸಿನಿಮಾವನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಸಿನಿಮಾ ಟೈಟಲ್‌ನಿಂದಲೇ ಸಿನಿಪ್ರೇಕ್ಷಕರಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾಕ್ಕೆ ಸೂರಿ ಕಥೆ, ಚಿತ್ರಕಥೆ ಬರೆದಿದ್ದು, ಮಾಸ್ತಿ ಸಂಭಾಷಣೆಯನ್ನು ಬರೆದಿದ್ದಾರೆ.

ಈ ಸಿನಿಮಾದ ಟೀಸರ್‌ನ್ನು ನೋಡಿದರೆ ಇದು ಡ್ರಗ್ಸ್ ಮಾಫಿಯಾ ಸುತ್ತಾ ಹಣೆದಿರುವ ಕಥೆ ಎನ್ನುವ ಸುಳಿವನ್ನು ನೀಡುತ್ತದೆ. ಸಿನಿಮಾದಲ್ಲಿ ರುದ್ರ ಎನ್ನುವ ಖಡಕ್ ಪೊಲೀಸ್ ಆಫೀಸರ್ ಆಗಿ ಅಭಿಷೇಕ್ ಅಂಬರೀಶ್ ಮಿಂಚಿದ್ದಾರೆ. ಸುಧೀರ್ ಕೆ. ಎಂ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ತಾರಾ, ದತ್ತಣ್ಣ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್ ಸೇರಿದಂತೆ ಸಾಕಷ್ಟು ಅನುಭವಿ ಕಲಾವಿದ ತಾರಾಗಣವಿದೆ.

ಇದನ್ನೂ ಓದಿ : Rajinikanth movie re-release : ತನ್ನ 72ನೇ ಬರ್ತ್ ಡೇಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಲಿದ್ದಾರೆ ತಲೈವಾ..!

ಇದನ್ನೂ ಓದಿ : Kantara v/s Tumbbad: ಕಾಂತಾರದ ಬಗ್ಗೆ ಅಪಸ್ವರ ಎತ್ತಿದ ಬಾಲಿವುಡ್ ನಿರ್ಮಾಪಕ; ಅಭಿಮಾನಿಗಳು ಗರಂ

ಇದನ್ನೂ ಓದಿ : Pathan Movie : ಒಂದೇ ಸಿನಿಮಾ ಎಂಟು ದೇಶದಲ್ಲಿ ಚಿತ್ರೀಕರಿಸಿದ ಶಾರುಖ್‌ : ಟೀಸರ್‌ ಶ್ರೀಘ್ರದಲ್ಲೇ

ಈ ಸಿನಿಮಾಕ್ಕೆ ಚರಣ್‌ ರಾಜ್‌ ಮ್ಯೂಸಿಕ್‌ ಮತ್ತೊಂದು ಹೈಲೆಟ್‌ ಆಗಿದೆ. ನಿರ್ದೇಶಕ ಸೂರಿ ರಾ ಮೇಕಿಂಗ್‌, ಶಾಡೋ ಶಾಟ್ಸ್‌ ಮಾಸ್‌ ಸಿನಿ ಪ್ರೇಕ್ಷಕರಿಗೆ ಸಖತ್‌ ಕಿಕ್‌ ಕೊಡಲಿದೆ. ಈ ಸಿನಿಮಾದಲ್ಲಿ ಸೂರಿ ಚಿತ್ರ ವಿಚಿತ್ರ ಹೆಸರುಗಳನ್ನಿಟ್ಟು ವಿಭಿನ್ನ ಪಾತ್ರಗಳನ್ನು ತೋರಿಸಲಿದ್ದಾರೆ. “ಬ್ಯಾಡ್‌ ಮ್ಯಾನರ್ಸ್‌” ಸಿನಿಮಾದ ಅಸಲಿ ಕಹಾನಿ ಫೆಬ್ರವರಿ 16ಕ್ಕೆ ರಿವೀಲ್‌ ಆಗಲಿದೆ.

Bad Manners Release Date : Suri-Abhishek Combination “Bad Manners” Shooting Complete : Release Date Fix

Comments are closed.