Ganga Aarti : ಗಂಗಾ ಆರತಿಗೆ ಸಾಕ್ಷಿಯಾದ ಪ್ರಧಾನಿ ಮೋದಿ : ಕಾಶಿ ವಿಶ್ವನಾಥನಿಗೆ ವಿಶೇಷ ಪೂಜೆ

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ಕಾರಿಡಾರ್​ ಉದ್ಘಾಟಿಸಿದ ಪ್ರಧಾನಿ ಮೋದಿ ಗಂಗಾ ಆರತಿ ಕಾರ್ಯಕ್ರಮ ನೆರವೇರಿಸಿದ್ದಾರೆ. ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಕೈಗೊಂಡು ವಿಶ್ವನಾಥ ಮಂದಿರದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ ಗಂಗಾ ಆರತಿ (Ganga Aarti) ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಗಂಗಾ ಆರತಿ ಹಿನ್ನೆಲೆಯಲ್ಲಿ ಪವಿತ್ರ ನದಿಯನ್ನು ಹಬ್ಬದ ರೀತಿಯಲ್ಲಿ ಸಿಂಗರಿಸಲಾಗಿದೆ. ಪ್ರಧಾನಿ ಮೋದಿ ವಾರಣಾಸಿಯ ಗಂಗಾ ಘಾಟ್​ನಲ್ಲಿ ಲೇಸರ್​ ಲೈಟ್​ ಶೋ ವೀಕ್ಷಿಸಿದರು.

ಗಂಗಾ ಆರತಿಯ ಮೂಲಕ ದಿವ್ಯ ಕಾಶಿ, ಭವ್ಯ ಕಾಶಿ ಎಂಬ ಮಾತು ಪ್ರಜ್ವಲಿಸಿತು. ಶಿವ ದೀಪಾವಳಿ ಎಂದು ಕರೆಯಲ್ಪಡುವ ದೀಪೋತ್ಸವ ಗಂಗಾ ನದಿಯನ್ನು ಬೆಳಗಿಸಿತು ಹಾಗೂ ಪುಷ್ಪಗಳ ಪರಿಮಳ ಗಂಗಾ ನದಿಯನ್ನೇ ಸುಂಗಧಭರಿತವಾಗಿಸಿತ್ತು. ಗಂಗಾ ನದಿಯಲ್ಲಿ ಪವಿತ್ರ ಸ್ನಾ ಕೈಗೊಳ್ಳುವ ಮುನ್ನ ಪ್ರಧಾನಿ ಮೋದಿ ಕಾಲ ಭೈರವ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಗಂಗಾ ನದಿಯಲ್ಲಿ ಮೂರು ಬಾರಿ ಮಿಂದೆದ್ದರು. ಇದಾದ ಬಳಿಕ ಕಾಶಿ ವಿಶ್ವನಾಥನ ಮಂದಿರಕ್ಕೆ ತೆರಳಿದ ನಮೋ ಕ್ಷೀರಾಭಿಷೇಕ ನೆರವೇರಿಸಿದರು.

ಕಾಶಿ ವಿಶ್ವನಾಥ ಮಂದಿರದಲ್ಲಿ ಬರೋಬ್ಬರಿ 339 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಶಿ ವಿಶ್ವನಾಥ ಕಾರಿಡಾರ್​ ನಿರ್ಮಿಸಲಾಗಿದೆ.ಕಾಶಿ ವಿಶ್ವನಾಥ ಕಾರಿಡಾರ್​​ ಪ್ರಧಾನಿ ಮೋದಿಯ ಕನಸಿನ ಯೋಜನೆಯಾಗಿದೆ. ಈ ಮೂಲಕ ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿ ಮೂರನೇ ಬಹುಕೋಟಿ ಯೋಜನೆಗೆ ಚಾಲನೆ ನೀಡಿದಂತಾಗಿದೆ.

ಏನಿದು ಕಾಶಿ ವಿಶ್ವನಾಥ ಕಾರಿಡಾರ್ ? ಮೋದಿ ಕನಸಿನ ಯೋಜನೆಯ ವಿವರಗಳು ಇಲ್ಲಿವೆ

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ “ಕಾಶಿ ವಿಶ್ವನಾಥ ಕಾರಿಡಾರ್” ನಿರ್ಮಾಣಗೊಂಡಿದೆ. 900 ಕೋಟಿ ವೆಚ್ಚದಲ್ಲಿ ನಿರ್ಮಿತವಾದ ಕಾರಿಡಾರ್‌, ಹಳೆಯ ಕಾಶಿಯನ್ನು “ಹೊಸ ಕಾಶಿ”ಯನ್ನಾಗಿ ಮಾಡುವ ಯೋಜನೆ ಇದಾಗಿದೆ. ವಾರಾಣಸಿಯಲ್ಲಿ ಉದ್ಘಾಟನೆಗೊಳ್ಳಲಿರುವ ಈ ಅದ್ದೂರಿ ಗತ ವೈಭವವನ್ನು ಮಕರ ಸಂಕ್ರಾಂತಿಯ ತನಕ ಆಚರಿಸಲು ಪ್ಲಾನ್ ಮಾಡಲಾಗಿದೆ. 2019ರ ಮಾರ್ಚ್ 8ರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಇದು ಲೋಕಾರ್ಪಣೆಗೊಳ್ಳುತ್ತಿದೆ.

ದೇಶದ ಪ್ರಮುಖ ವಾಸ್ತು ಶಿಲ್ಪಿಗಳಲ್ಲಿ ಒಬ್ಬರಾದ ಭೀಮಲ್ ಪಟೇಲ್ ಈ ಪ್ರಾಜೆಕ್ಟ್ ಅನ್ನು ವಿನ್ಯಾಸ ಮಾಡಿದ್ದಾರೆ. ಇವರು ಸೆಂಟ್ರಲ್ ವಿಸ್ತಾ ಯೋಜನೆಯ ಶಿಲ್ಪಿಯೂ ಹೌದು. ಈ ಪ್ರಾಜೆಕ್ಟ್ ವೇಳೆ ಶತಮಾನಗಳ ಹಿಂದಿನ ಸಾಕಷ್ಟು ವಿಗ್ರಹಗಳು ದೊರೆತಿದ್ದು, ಅವುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಪ್ರಧಾನಿ ಮೋದಿ ಇಂದು ಉದ್ಘಾಟಿಸಲಿರುವ ಯೋಜನೆಯ ಮೊದಲ ಹಂತದ ವೆಚ್ಚ 339 ಕೋಟಿ ಆಗಿದೆ. ಆದರೆ ಯೋಜನೆಯ ಒಟ್ಟು ಮೊತ್ತ 900ಕೋಟಿಯಾಗಲಿದೆ. ಕಾರಿಡಾರ್ ಕಾಶಿ ವಿಶ್ವನಾಥ ದೇವಸ್ಥಾನದ ಬಳಿ ಇದ್ದು, ಗಂಗಾ ನದಿಯ ಎರಡು ಘಾಟ್‌ಗಳೊಂದಿಗೆ ಸಂಪರ್ಕ ಸಾಧಿಸಲಿದೆ. ಯಾತ್ರಾರ್ಥಿಗಳು ಇನ್ನು ಮುಂದೆ ಇಕ್ಕಟ್ಟಾದ ಲೇನ್‌ಗಳ ಮೂಲಕ ನಡೆಯಬೇಕಾಗಿಲ್ಲ. ಇದರಿಂದಾಗಿ ಉಂಟಾಗುವ ಜನಸಂದಣಿಯನೂ ತಪ್ಪಿಸುತ್ತದೆ.

ಮೋದಿ ಕನಸಿನ ಯೋಜನೆ 5000 ಹೆಕ್ಟೇರ್ ಜಾಗದಲ್ಲಿ ನಿರ್ಮಾಣವಾಗಿದೆ. ಈ ಹಿಂದೆ 2000 ಹೆಕ್ಟೇರ್ ಗಳಷ್ಟು ಇದ್ದ ಈ ಪ್ರಾಜೆಕ್ಟ್ ಈಗ ಜನರ ಅನುಕೂಲಕ್ಕಾಗಿ ಇನ್ನಷ್ಟು ವಿಸ್ತರಣೆ ಮಾಡಲಾಗಿದೆ. ಮೋದಿ ಡ್ರಿಮ್ ಪ್ರಾಜೆಕ್ಟ್ ನಲ್ಲಿ ಒಟ್ಟು 23 ಕಟ್ಟಡಗಳಿದ್ದು, ಇವುಗಳನ್ನು ಯಾತ್ರಿಕರಿಗೆ ಸಹಾಯ ಆಗುವಂತೆ ಹಲವು ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಯಾತ್ರಿ ಸುವಿಧ ಕೇಂದ್ರ, ಮ್ಯೂಸಿಯಂ, ಫುಡ್ ಕೋರ್ಟ್, ವೇದಿಕ್ ಕೇಂದ್ರ ಮುಂತಾದ ಸೇವೆಗಳು ದೊರೆಯಲಿವೆ. ಇಂದಿನ ಈ ಕಾರ್ಯಕ್ರಮಕ್ಕೆ ರಾಜಕೀಯ, ಅಧ್ಯಾತ್ಮ, ಕಲೆಗೆ ಸಂಬಂಧಿಸಿದಂತೆ 3000 ಜನರ ಆಗಮನದ ನಿರೀಕ್ಷೆ ಇದೆ. ಈ ಪ್ರಾಜೆಕ್ಟ್ ಸಂದರ್ಭ ಸುಮಾರು ಮುನ್ನೂರು ಆಸ್ತಿಯನ್ನು ಖರೀದಿ ಮಾಡಲಾಗಿದೆ. ಹಾಗೆ ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಸುಮಾರು 40ಕ್ಕೂ ಹೆಚ್ಚು ಪುರಾತನ ದೇವಾಲಯಗಳನ್ನು ಉತ್ಖನನದ ವೇಳೆ ಪತ್ತೆ ಮಾಡಲಾಗಿದೆ. ಕಾಶಿ ವಿಶ್ವನಾಥ ವೆಬ್ಸೈಟ್ ನಲ್ಲಿ ಈ ಸ್ಥಳವನ್ನು”ಗೋಲ್ಡನ್ ಟೆಂಪಲ್” ಎಂದು ಹೆಸರಿಸಲಾಗಿದೆ.

ಈ ಮುನ್ನ 3000 ಚದರ ಅಡಿಗಳಷ್ಟು ಮಾತ್ರ ಈ ಪ್ರದೇಶ ವ್ಯಾಪ್ತಿ ಹೊಂದಿತ್ತು. ಅದನ್ನು ಬೃಹತ್ ಪ್ರಮಾಣದಲ್ಲಿ ವಿಸ್ತರಿಸಿ 5 ಲಕ್ಷ ಚದರ ಅಡಿಯಷ್ಟು ಜಾಗವನ್ನು ಅಭಿವೃದ್ಧಿ ಪಡಿಸಲಾಗಿದೆ. ಕಾಶಿ ಕಾರಿಡಾರ್ ರುದ್ರಾಕ್ಷ, ಪಾರಿಜಾತ, ನೆಲ್ಲಿ, ಅಶೋಕ ಸೇರಿದಂತೆ ಹಲವು ಮರಗಳನ್ನು ಬೆಳೆಸಲಾಗಿದೆ. ದೇವಸ್ಥಾನದ ಆವರಣದ ಸುತ್ತ ಹಾಗೂ ಮಂದಿರ ಚೌಕಗಳುದ್ದಕ್ಕೂ ಮರಗಳನ್ನು ಬೆಳೆಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಇದನ್ನು ಓದಿ: World first digital country Dubai : ವಿಶ್ವದ ಮೊದಲ ಸಂಪೂರ್ಣ ಡಿಜಿಟಲ್ ದೇಶವಾದ ದುಬೈ

ಇದನ್ನೂ ಓದಿ: Kashi Corridor Varanasi : ಏನಿದು ಕಾಶಿ ವಿಶ್ವನಾಥ ಕಾರಿಡಾರ್? ಮೋದಿ ಕನಸಿನ ಯೋಜನೆಯ ವಿವರಗಳು ಇಲ್ಲಿವೆ

Watch video: PM Narendra Modi witnesses ‘Ganga Aarti’ in Varanasi, attends laser light show

Comments are closed.