ಮಂಗಳವಾರ, ಜೂನ್ 17, 2025
HomeBreakingಬಿಗ್ ಬಾಸ್ ಚೈತ್ರಾ ಕೊಟ್ಟೂರು ಆತ್ಮಹತ್ಯೆ ಯತ್ನ..!!

ಬಿಗ್ ಬಾಸ್ ಚೈತ್ರಾ ಕೊಟ್ಟೂರು ಆತ್ಮಹತ್ಯೆ ಯತ್ನ..!!

- Advertisement -

ಬೆಂಗಳೂರು : ಬಿಗ್ ಬಾಸ್ ಖ್ಯಾತಿಯ ನಟಿ ಚೈತ್ರಾ ಕೊಟ್ಟೂರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

Images 35 1

ಮಾರ್ಚ್ 28 ರಂದು ಮಂಡ್ಯ ಮೂಲದ ನಾಗಾರ್ಜುನ್ ಎಂಬವರ ಜೊತೆಗೆ ಚೈತ್ರಾ ಕೊಟ್ಟೂರು  ವಿವಾಹವಾಗಿದ್ದರು. ಆದರೆ ಮದುವೆಯ ದಿನವೇ  ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಗಾರ್ಜುನ್ ನನಗೆ ಈ ವಿವಾಹ ಇಷ್ಟವಿಲ್ಲ ಎಂದು ಹೇಳಿದ್ದರು. ಆದರೆ ಚೈತ್ರಾ ಕೊಟ್ಟೂರು ಮಾತ್ರ ನನಗೆ ನಾಗಾರ್ಜುನ್ ತುಂಬಾ ಇಷ್ಟ. ಅವರ ಜೊತೆಯೇ ಹೋಗುತ್ತೇನೆ ಎಂದು ಪಟ್ಟು ಹಿಡಿದ್ದರು.

Chaitra Kotturs Wedding Controversy

ನಾಗಾರ್ಜುನ್ ಗೆ ಚೈತ್ರಾ ಜೊತೆ ಮದುವೆಯಾಗುವುದು ಇಷ್ಟವಿರಲಿಲ್ಲ. ಸಂಘಟನೆಗಳ ಜೊತೆಗೂಡಿ ಬಲವಂತವಾಗಿ ನಾಗಾರ್ಜುನ್ ರನ್ನ ಕೂಡಿ ಹಾಕಿ ದೇಗುಲದಲ್ಲಿ ವಿವಾಹ ಮಾಡಿಸಲಾಗಿದೆ.

Images 37

ಇದೀಗ ಚೈತ್ರಾ ಕೊಟ್ಟೂರು ಕೋಲಾರದ ಕುರುಬರ ಪೇಟೆ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು, ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಮದುವೆ ವಿಚಾರಕ್ಕೆ ಎದುರಾದ ವಿವಾದದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

Images 36

ಸಂಘಟನೆಗಳ ಬೆದರಿಕೆ‌‌ ಹೆದರಿ ನಾಗಾರ್ಜುನ್, ಬಲವಂತವಾಗಿ ಚೈತ್ರಾಗೆ ತಾಳಿ ಕಟ್ಟಿದ್ದರು. ಚೈತ್ರಾ ಮದುವೆಯಾಗಲು ನಾಗಾರ್ಜುನ್ ಹಾಗೂ ಮನೆಯವರಿಗೆ ಇಷ್ಟವಿರಲಿಲ್ಲ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ  ನಾಗಾರ್ಜುನ ಮನೆಯವರು ಚೈತ್ರಾ ಮನೆಗೆ ಬಂದು ತಗಾದೆ ತೆಗೆದಿದ್ದರೆಂಬ ಆರೋಪ ಕೇಳಿಬಂದಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular