108 ದಿನಗಳ ನಂತರ ಬಿಗ್ ಬಾಸ್ ಲೈವ್ ಬಂದ್! ಫಿನಾಲೆ ಕುತೂಹಲಕ್ಕೆ ಬ್ರೇಕ್
Bigg Boss Kannada 12 Live: ಬಿಗ್ ಬಾಸ್ ಕನ್ನಡ ಸೀಸನ್ 12ರ ಮಹಾ ಸಮರ ಅಂತ್ಯಗೊಳ್ಳಲು ಇನ್ನು ಕೇವಲ 24 ಗಂಟೆಗಳು ಬಾಕಿ ಇರುವಾಗಲೇ, ಅಭಿಮಾನಿಗಳಿಗೆ ನಿರಾಸೆಯ ಸುದ್ದಿಯೊಂದು ಎದುರಾಗಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದ್ದ ನಿರಂತರ ‘ಲೈವ್ ಫೀಡ್’ ಅನ್ನು ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ.
ಸುಮಾರು 108 ದಿನಗಳ ಕಾಲ ಸತತವಾಗಿ ಮನೆಯ ಒಳಗಿನ ಕ್ಷಣಕ್ಷಣದ ಮಾಹಿತಿಯನ್ನು ವೀಕ್ಷಕರಿಗೆ ತಲುಪಿಸುತ್ತಿದ್ದ ಲೈವ್ ಸ್ಟ್ರೀಮಿಂಗ್ ಅನ್ನು ಫಿನಾಲೆಗೂ ಮುನ್ನ ನಿಲ್ಲಿಸಿರುವುದು ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ:
ಗೌಪ್ಯತೆ ಕಾಪಾಡುವುದು: ಫಿನಾಲೆ ವಾರದಲ್ಲಿ ಸ್ಪರ್ಧಿಗಳ ನಡುವೆ ನಡೆಯುವ ಕೊನೆಯ ಹಂತದ ಮಾತುಕತೆಗಳು ಮತ್ತು ಫಿನಾಲೆ ಸಿದ್ಧತೆಗಳ ಮಾಹಿತಿ ಹೊರಗಿನ ಪ್ರಪಂಚಕ್ಕೆ ಸೋರಿಕೆಯಾಗದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಫಿನಾಲೆ ಕುತೂಹಲ: ವಿಜೇತರು ಯಾರಾಗಲಿದ್ದಾರೆ ಎಂಬ ಕುತೂಹಲವನ್ನು ಕೊನೆಯ ಕ್ಷಣದವರೆಗೂ ಕಾಯ್ದಿರಿಸಲು ವಾಹಿನಿ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.
ಕನ್ನಡ ಬಿಗ್‌ಬಾಸ್ ಹವಾ: ರಕ್ಷಿತಾ ಶೆಟ್ಟಿಗೆ ವೋಟ್ ಮಾಡಿದವರಿಗೆ ಉಚಿತ ಬ್ಯೂಟಿ ಸೇವೆ ಘೋಷಣೆ
ಫಿನಾಲೆಗೆ ಕ್ಷಣಗಣನೆ
ಲೈವ್ ಪ್ರಸಾರ ನಿಂತಿದ್ದರೂ, ಮನೆಯಲ್ಲಿರುವ ಅಂತಿಮ ಆರು ಸ್ಪರ್ಧಿಗಳು ಈಗ ವಿಜೇತರ ಪಟ್ಟಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಸೀಸನ್ ಆರಂಭದಿಂದಲೂ ಜಗಳ, ತಮಾಷೆ ಹಾಗೂ ಟಾಸ್ಕ್‌ಗಳ ಮೂಲಕ ಜನರ ಗಮನ ಸೆಳೆದಿದ್ದ ಲೈವ್ ಫೀಡ್, ಶೋ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಈ ಶನಿವಾರ ಮತ್ತು ಭಾನುವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಸೀಸನ್ 12ರ ಕಿರೀಟ ಯಾರ ಮುಡಿಗೇರಲಿದೆ ಎಂಬ ಸಸ್ಪೆನ್ಸ್ ಶೀಘ್ರವೇ ಬಿಚ್ಚಿಕೊಳ್ಳಲಿದೆ.



