Big Boss Kannada : ಬಿಗ್‌ಬಾಸ್‌ ಮನೆಯಿಂದ ಹೊರ ಬಿದ್ದ ಶುಭಾ ಪೂಂಜಾ

ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್‌ಬಾಸ್‌ ಈಗಾಗಲೇ ಕುತೂಹಲದ ಘಟ್ಟ ತಲುಪಿದೆ. ಬಿಗ್ ಬಾಸ್ ಸೀಸನ್ 8 ಫಿನಾಲೆ ಹಂತಕ್ಕೆ ಯಾರೆಲ್ಲಾ ತಲುಪುತ್ತಾರೆ ಅನ್ನೋ ಲೆಕ್ಕಾಚಾರವೂ ನಡೆಯುತ್ತಿದೆ. ಈ ನಡುವಲ್ಲೇ ಕರಾವಳಿ ಬೆಡಗಿ ಶುಭಾ ಪೂಂಜಾ ಮನೆಯಿಂದ ಹೊರ ಬಿದ್ದಿದ್ದಾರೆ.

ಇನ್ನು ಒಂದು ವಾರ ಕಳೆದ್ರೆ ಕನ್ನಡ ಬಿಗ್ ಬಾಸ್ ಸೀಸನ್ 8 ಫೈನಲ್‌ ನಡೆಯಲಿದೆ. ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಅರ್ಧಕ್ಕೆ ನಿಂತಿದ್ದ ಶೋ ಇದೀಗ ಪುನರ್‌ ಆರಂಭ ಗೊಂಡು, ಭರ್ಜರಿ ಟಿಆರ್‌ಪಿ ಪಡೆದುಕೊಂಡಿದೆ. ಈ ನಡುವಲ್ಲೇ ಕಿತ್ತಾಟ, ಕಣ್ಣೀರಿನಿಂದಲೇ ಈ ಬಾರಿಯ ಶೋ ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿತ್ತು. ಈ ವಾರ ಮಹಾಮನೆಯಿಂದ ಮೂವರು ಹೊರ ನಡೆಯೋದು ಗ್ಯಾರಂಟಿ.

ಈಗಾಗಲೇ ಮಂಜು ಪಾವಗಡ, ಅರವಿಂದ್ ಕೆಪಿ, ಶಮಂತ್ ಬ್ರೋಗೌಡ, ಪ್ರಶಾಂತ್ ಸಂಬರಗಿ, ವೈಷ್ಣವಿ ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್ ನಾಮಿನೇಟ್ ಆಗಿದ್ದರು. ಈ ಪೈಕಿ ದಿವ್ಯಾ ಉರುಡುಗ ಕ್ಯಾಪ್ಟನ್ ಆಗಿರೋ ಕಾರಣಕ್ಕೆ ನಾಮಿನೇಷನ್‌ ನಿಂದ ರಿಲೀಫ್‌ ಪಡೆದುಕೊಂಡಿದ್ದಾರೆ.

ಫೈನಲ್‌ ಹಂತಕ್ಕೆ ಬಿಗ್‌ಬಾಸ್‌ ಮನೆಯಲ್ಲಿ ಒಟ್ಟು 5 ಮಂದಿ ಇರ್ತಾರೆ. ಆ ಮೂವರು ಯಾರೂ ಅನ್ನೋ ಬಗ್ಗೆ ಪ್ರೇಕ್ಷಕರ ವಲಯದಲ್ಲಿ ಚರ್ಚೆ ಶುರುವಾಗಿದೆ. ಅಲ್ಲದೇ ಅಂತಿಮವಾಗಿ ಇಬ್ಬರು ಮಾತ್ರವೇ ಫೈನಲ್‌ ವೇದಿಕೆ ಏರಲಿದ್ದಾರೆ. ಶನಿವಾರದ ವೀಕೆಂಡ್‌ ಶೋ ನಲ್ಲಿ ಈಗಾಗಲೇ ನಟಿ ಶುಭಾ ಪೂಂಜಾ ಬಿಗ್‌ಬಾಸ್‌ ಮನೆಯಿಂದ ಹೊರ ಬಿದ್ದು, ಭಾನುವಾರ ಮತ್ತೊಬ್ಬರು ಹೊರ ನಡೆಯಲಿದ್ದಾರೆ.

ಇದನ್ನೂ ಓದಿ : ಬಿಗ್ ಬಾಸ್ ಶೋ ಗ್ರ್ಯಾಂಡ್ ಫಿನಾಲೆಗೆ ದಿನಗಣನೆ….! ವಿನ್ನರ್ ಯಾರು? ಇಲ್ಲಿದೆ ಡಿಟೇಲ್ಸ್…!!

ಹೀಗಾಗಿ ಭಾನುವಾರದ ಶೋನಲ್ಲಿ ಶಮಂತ್‌ ಹೊರ ನಡೆಯುವ ಸಾಧ್ಯತೆಯಿದೆ. ಆದರೆ ಶಮಂತ್‌ ಬದಲು ಬೇರೆಯವರು ಹೊರ ಹೋದ್ರು ಅಚ್ಚರಿಯಿಲ್ಲ. ಈಗಾಗಲೇ ವೀಕೆಂಡ್‌ ಮಧ್ಯದಲ್ಲಿಯೇ ಚಕ್ರವರ್ತಿಯನ್ನು ಹೊರಕಳುಹಿಸಿದ್ದ ಬಿಗ್‌ಬಾಸ್‌, ಈ ವಾರ ಅದ್ಯಾವ ಮೈಂಡ್‌ ಗೇಮ್‌ ಆಡ್ತಾರೆ ಅನ್ನೋದನ್ನು ಕಾದುನೋಡಬೇಕಾಗಿದೆ.

Comments are closed.