Auto LPG Rate : ಆಟೋ ಚಾಲಕರಿಗೆ ಬಿಗ್‌ ಶಾಕ್‌ : ಆಟೋ ಎಲ್‌ಪಿಜಿ ದರ ಏರಿಕೆ

ನವದೆಹಲಿ : ಕೊರೊನಾ ಸಂಕಷ್ಟದಿಂದ ಆಟೋ ಚಾಲಕರು ತತ್ತರಿಸಿದ್ದಾರೆ. ಈ ನಡುವಲ್ಲೇ ಎಲ್‌ಪಿಜಿ ಗ್ಯಾಸ್‌ ದರದಲ್ಲಿ ಭಾರೀ ಏರಿಕೆ ಕಂಡಿದೆ. ಈ ಮೂಲಕ ಎಲ್‌ಪಿಜಿ ಗ್ಯಾಸ್‌ ಆಟೋ ಚಾಲಕರಿಗೆ ಶಾಕ್‌ ಕೊಟ್ಟಿದೆ.

ಕಳೆದ ಎರಡು ವರ್ಷಗಳಿಂದಲೂ ದೇಶದಲ್ಲಿ ಕೊರೊನಾ ಹೆಮ್ಮಾರಿಯ ಆರ್ಭಟದ ಹಿನ್ನೆಲೆಯಲ್ಲಿ ಹೇರಿಕೆಯಾಗಿದ್ದ ಲಾಕ್‌ಡೌನ್‌ ಆಟೋ ಚಾಲಕರನ್ನು ಹಿಂಡಿ ಹಿಪ್ಪೆಯನ್ನಾಗಿಸಿತ್ತು. ಒಂದೆಡೆ ಆಟೋಗಳನ್ನು ರಸ್ತೆಗೆ ಇಳಿಸದೆ, ಇನ್ನೊಂದೆಡೆ ಸಾಲದ ಹೊರೆಯ ನಡುವಲ್ಲೇ ಕಳೆದೊಂದು ತಿಂಗಳಿನಿಂದ ಚಾಲಕರು ದುಡಿಮೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕೇಂದ್ರ ಸರಕಾರ ಶಾಕ್‌ ಕೊಟ್ಟಿದೆ.

ಆಟೋ ಎಲ್‌ಪಿಜಿ ದರದಲ್ಲಿ ಒಂದು ಲೀಟರ್‌ಗೆ 5 ರೂಪಾಯಿ 41 ಪೈಸೆ ಏರಿಕೆಯಾಗಿದೆ. ಈ ಹಿಂದೆ ಆಟೋ ಎಲ್‌ಪಿಜಿ ದರ 50 ರೂಪಾಯಿ 47 ಪೈಸೆ ಇದ್ದು, ಇದೀಗ 55 ರೂಪಾಯಿ 88 ಪೈಸೆಗೆ ಏರಿಕೆ ಕಂಡಿದೆ. ಆಟೋ ಎಲ್‌ಪಿಜಿ ದರ ಏರಿಕೆ ಇದೀಗ ಆಟೋ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

Comments are closed.