Heart Attack in Gym : ಹೃದಯಾಘಾತದ ಹಿಂದೆ ಇರುವ ಅಪಾಯಕಾರಿ ಅಂಶಗಳ ಬಗ್ಗೆ ನಿಮಗೆ ಗೊತ್ತಾ

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ (Heart Attack), ಹಠಾತ್‌ ಹೃದಯ ಸ್ತಂಭನ (Sudden Cardiac Arrest) ಗಳು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ (Heart Attack in Gym). ಅತಿ ಒತ್ತಡ, ಕೆಲಸದ ಧಾವಂತ, ಅನಾರೋಗ್ಯಕರ ಜೀವನಶೈಲಿ, ನಿದ್ರೆಯ ಕೊರತೆ ಮುಂತಾದವುಗಳು ಇದಕ್ಕೆ ಕಾರಣವೆಂದು ಹೇಳುತ್ತಾರೆ. ಈಗೀಗ ಫಿಟ್‌ ಆಗಿರಬೇಕು ಎಂದು ಜಿಮ್‌ಗೆ ಸೇರಿಕೊಳ್ಳುತ್ತಾರೆ. ಅಲ್ಲಿ ವರ್ಕೌಟ್‌ ಏನೋ ಮಾಡುತ್ತಾರೆ ಆದರೆ, ಅದರ ಜೊತೆಗೆ ಉತ್ತಮ ಜೀವನಶೈಲಿಯನ್ನು ಪಾಲಿಸುವುದೇ ಇಲ್ಲ. ದಿನವೊಂದಕ್ಕೆ ಒಬ್ಬರು ಎಷ್ಟು ವ್ಯಾಯಾಮ ಮಾಡಬೇಕು ಮತ್ತು ಎಷ್ಟು ಪೋಷಕಾಂಶಗಳನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಳುವುದೇ ಇಲ್ಲ.

ವ್ಯಾಯಾಮದ ಸಮಯದಲ್ಲಿ ಹೃದಯಾಘಾತ (Heart Attack in Gym) :

ಇತ್ತೀಚಿನ ದಿನಗಳಲ್ಲಿ ಜಿಮ್‌ಗೆ ಹೋಗುವುದು ಒಂದು ಫ್ಯಾಷನ್‌ ಆಗಿದೆ. ಅದು ಅಗತ್ಯವಿದೆಯೋ ಇಲ್ಲವೋ ಎಂದು ತಿಳಿಕೊಳ್ಳದೇ ಜಿಮ್‌ಗೆ ಸೇರಿಕೊಳ್ಳುತ್ತಾರೆ. ಮೊದಲನೆಯದಾಗಿ ಫಿಟ್ ಆಗಿ ಕಾಣುವುದು ಅಥವಾ ಜಿಮ್‌ಗೆ ಹೋಗುವುದು ಎಂದರೆ ನೀವು ಆರೋಗ್ಯವಂತರಾಗಿದ್ದೀರಿ ಅಥವಾ ಆರೋಗ್ಯಕರ ಜೀವನಶೈಲಿಯನ್ನು ನಡೆಸುತ್ತಿದ್ದೀರಿ ಎಂದರ್ಥವಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ಇತ್ತೀಚಿನ ದಿನಗಳಲ್ಲಿ ಅನೇಕ ಯುವ ವಯಸ್ಕರು ಸಾಮಾನ್ಯವಾಗಿ ಅನಾರೋಗ್ಯಕರ ಜೀವನಶೈಲಿಯನ್ನು ಪಾಲಿಸುತ್ತಾರೆ. ಉದಾಹರಣೆಗೆ, ಅತಿಯಾದ ಒತ್ತಡ, ನಿದ್ರೆಯ ಕೊರತೆ, ಆಲ್ಕೋಹಾಲ್ ಸೇವನೆ, ಧೂಮಪಾನ, ಮಾದಕ ವಸ್ತುಗಳ ಸೇವನೆ, ಅನಗತ್ಯ ಮತ್ತು ಅಸುರಕ್ಷಿತ ಸಪ್ಲಿಮೆಂಟ್‌ಗಳು, ಸ್ಲಿಮ್ಮಿಂಗ್ ಮಾತ್ರೆಗಳು ಮತ್ತು ಅತಿಯಾದ ವ್ಯಾಯಾಮ.

ಕಠಿಣ ವ್ಯಾಯಮ ಮಾಡುವ ಮೊದಲು ನಿಮ್ಮ ಆರೋಗ್ಯವನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದು ಅತಿ ಮುಖ್ಯ. ದೇಹಕ್ಕೆ ಒಗ್ಗದ ವ್ಯಾಯಾಮಗಳಿಂದ ದೂರವಿರುವುದೇ ಉತ್ತಮ. ಆರೋಗ್ಯಕರ ಜೀವನಶೈಲಿ ಮತ್ತು ಉತ್ತಮ ಡಯಟ್‌ ಪಾಲಿಸುತ್ತಿದ್ದೀರಿ ಎಂಬುದನ್ನು ಖಚಿತ ಪಡಿಸಿಕೊಳ್ಳಿ.

ವ್ಯಾಯಾಮ ಮಾಡುವಾಗ ಸಂಭವಿಸುವ ಹೃದಯಾಘಾತಕ್ಕೆ ಈ ಕೆಳಗಿನ ಅಂಶಗಳೇ ಕಾರಣಗಳು:

ತೀವ್ರ ರಕ್ತದೊತ್ತಡ
ಮಧುಮೇಹ
ಧೂಮಪಾನ
ಅಲ್ಕೋಹಾಲ್‌ ಸೇವನೆ
ಮಾದಕ ವಸ್ತುಗಳ ಸೇವನೆ
ಕಳಪೆ ಆಹಾರ
ಅನಾರೋಗ್ಯಕರ ಜೀವನಶೈಲಿ

ವರ್ಕೌಟ್‌ ಮಾಡುವಾಗ ಅನಗತ್ಯ ಸಪ್ಲಿಮೆಂಟ್‌ಗಳನ್ನು ತೆಗೆದೆಕೊಳ್ಳಬೇಡಿ. ಇದರಿಂದ ದೇಹದಲ್ಲಿರುವ ಅಗತ್ಯ ಪೋಷಕಾಂಶಗಳು ಕಡಿಮೆಯಾಗಬಹುದು. ಮತ್ತು ಕೆಲವು ಅಂಗಗಳು ಸರಿಯಾಗಿ ಕೆಲಸ ನಿರ್ವಹಿಸದೇ ಇರಬಹುದು. ಅತಿಯಾಗಿ ಜಿಮ್‌ಗೆ ಅವಲಂಬಿಸುವ ಬದಲು ಯೋಗ, ಧ್ಯಾನ ಇವುಗಳನ್ನು ಆರಿಸಿಕೊಳ್ಳಬಹುದು. ಇದು ನಿಮ್ಮ ದೇಹ ಮತ್ತು ಮನಸ್ಸನ್ನು ಸದೃಢಗೊಳುಸಬಲ್ಲದು.

ಇದನ್ನೂ ಓದಿ : Comedian Raju Srivastava Passes Away :ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ್​ ವಿಧಿವಶ

ಇದನ್ನೂ ಓದಿ : healthy lifestyle :ಅತ್ಯುತ್ತಮ ಜೀವನಶೈಲಿಗಾಗಿ ಅನುಸರಿಸಿ ಈ ಪಂಚ ಸೂತ್ರ..!

(Heart Attack in Gym, do you know the risk factors behind the heart attack)

Comments are closed.