Bipasha Basu :ಹೆಣ್ಣುಮಗುವಿಗೆ ಜನ್ಮ ನೀಡಿದ 43ರ ಹರೆಯದ ಬಾಲಿವುಡ್ ನಟಿ ಬಿಪಾಶಾ ಬಸು

ಮುಂಬೈ: Bipasha Basu :ಬಾಲಿವುಡ್ ಖ್ಯಾತ ನಟಿ ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ಇಂದು 43ರ ಹರೆಯದ ನಟಿ ಬಿಪಾಶಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

https://www.instagram.com/p/Ck25DKZNmAo/?igshid=YmMyMTA2M2Y=

ಬಾಲಿವುಡ್ ನ ಈ ಜೋಡಿ ಕಳೆದ 6 ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ 6 ವರ್ಷಗಳು ಕಳೆದ ಬಳಿಕ ಇವರ ಬದುಕಿನಲ್ಲಿ ಪುಟ್ಟ ಅತಿಥಿಯ ಆಗಮನವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುವ ಈ ಜೋಡಿ ಕಳೆದ ಆಗಸ್ಟ್ ನಲ್ಲಿ ಪ್ರೆಗ್ನೆನ್ಸಿ ವಿಚಾರವನ್ನು ರಿವೀಲ್ ಮಾಡಿದ್ದರು. ಅಂದಿನಿಂದಲೂ ಬಿಪಾಶಾ ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಬಂದಿದ್ದರು.

ಕೆಲ ದಿನಗಳ ಹಿಂದಷ್ಟೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದ ನಟಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿದ್ದರು. ಅಲ್ಲದೇ ಹೊಸ ಸಮಯ.. ಹೊಸ ಹಂತ.. ನಮ್ಮ ಬದುಕಿಗೆ ಹೊಸ ಛಾಯೆಯನ್ನು ಸೇರಿದುತ್ತಿದ್ದೇವೆ.. ಹಿಂದೆಂದಿಗಿಂತಲೂ ಈಗ ನಾವು ಸಂಪೂರ್ಣರಾಗಿದ್ದೇವೆ. ಈ ಜೀವನವನ್ನು ನಾವು ಪ್ರತ್ಯೇಕವಾಗಿ ಆರಂಭಿಸಿದ್ವಿ. ಬಳಿಕ ಒಬ್ಬರನ್ನೊಬ್ಬರು ಭೇಟಿಯಾದ್ವಿ. ಇಬ್ಬರಾಗಿದ್ದ ನಾವು ಈಗ ಮೂವರಾಗುತ್ತಿದ್ದೇವೆ. ನಮ್ಮ ಪ್ರೀತಿಯಿಂದಾದ ಸೃಷ್ಟಿ ನಮ್ಮ ಮಗು ಅತಿ ಶೀಘ್ರದಲ್ಲೇ ನಮ್ಮನ್ನು ಸೇರುತ್ತೆ. ಇದರಿಂದ ನಮ್ಮ ಸಂತೋಷ ಇನ್ನಷ್ಟು ಹೆಚ್ಚುತ್ತೆ. ಎಲ್ಲರಿಗೂ ಧನ್ಯವಾದಗಳು.. ನಿಮ್ಮ ಬೇಷರತ್ತು ಪ್ರೀತಿ, ಶುಭಹಾರೈಕೆ, ಪ್ರಾರ್ಥನೆಗಳು ಸದಾ ನಮ್ಮೊಂದಿಗಿರಲಿ ಎಂದು ಬರೆದುಕೊಂಡಿದ್ದರು. ಆದರೆ ಇವರ ಬೇಬಿ ಬಂಪ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಇದನ್ನೂ ಓದಿ: Kantara Movie Controversy : ದಲಿತರ ಅವಹೇಳನ ಆರೋಪ : ಕಾಂತಾರ ಪ್ರದರ್ಶನ ಸ್ಥಗಿತಕ್ಕೆ ಒತ್ತಾಯ

ಸದ್ಯ ಹೆಣ್ಣುಮಗುವನ್ನು ಬರಮಾಡಿಕೊಂಡಿರುವ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಕೆಲ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಇನ್ನೂ ಕೆಲವರು ಮಗುವಿನ ಫೋಟೋ ರಿವೀಲ್ ಮಾಡುವಂತೆ ಒತ್ತಾಯಿಸಿದ್ದಾರೆ. ಅಂದಹಾಗೆ, ಕಳೆದ 2016ರಲ್ಲಿ ಈ ಜೋಡಿ ಬಂಗಾಳಿ ಸಂಪ್ರದಾಯದಂತೆ ಹಸೆಮಣೆ ಏರಿತ್ತು. 2015ರಲ್ಲಿ ರಿಲೀಸ್ ಆಗಿದ್ದ ಅಲೋನ್ ಸಿನಿಮಾದ ಶೂಟಿಂಗ್ ವೇಳೆ ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾಗಿದ್ದರು. ಈ ಹಿಂದೆ ನಟಿ ಬಿಪಾಶಾ ಮಗುವಿನ ಬಗ್ಗೆ ಪ್ರಸ್ತಾಪಿಸುತ್ತಾ ನಮಗೆ ಇನ್ನೂ ಮಕ್ಕಳಾಗಿಲ್ಲ.. ಆದರೂ ಚಿಂತೆಯಿಲ್ಲ ಮಕ್ಕಳನ್ನು ದತ್ತು ಪಡೆಯುವುದಾಗಿ ಹೇಳಿದ್ದರು. ಇದೀಗ ಅವರು ಹೆಣ್ಣುಮಗುವಿಗೆ ಜನ್ಮ ನೀಡಿರುವುದನ್ನು ಖುಷಿಯಿಂದ ಹಂಚಿಕೊಂಡಿದ್ದಾರೆ.

2001ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದ ಬಿಪಾಶಾ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ಹೆಚ್ಚಿನ ಚಿತ್ರಗಳಲ್ಲಿ ಬೋಲ್ಡ್ ಪಾತ್ರವನ್ನೇ ಮಾಡುತ್ತಿದ್ದ ಬಿಪಾಶಾ ಬಾಲಿವುಡ್ ನ ಮಾದಕ ನಟಿ ಎಂದೇ ಫೇಮಸ್ ಆಗಿದ್ದರು. ಆದರೆ 2015ರಲ್ಲಿ ಕರಣ್ ಸಿಂಗ್ ಗ್ರೋವರ್ ಜೊತೆ ಅಲೋನ್ ಸಿನಿಮಾದಲ್ಲಿ ನಟಿಸಿದ ಬಳಿಕ ಆಕೆ ವೈವಾಹಿಕ ಜೀವನಕ್ಕೆ ಪ್ರಾಶಸ್ತ್ಯ ನೀಡುತ್ತಾ ಬಂದಿದ್ದು, ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ: Varaha Roopam: ಕಾಪಿರೈಟ್ಸ್ ವಿವಾದ: ಯೂಟ್ಯೂಬ್ ನಿಂದ ಕಾಂತಾರದ ‘ವರಾಹ ರೂಪಂ’ ಸಾಂಗ್ ಡಿಲೀಟ್

ಅಂದಹಾಗೆ ಬಿಪಾಶಾ ಬಸು ಕರಣ್ ಸಿಂಗ್ ಗ್ರೋವರ್ ನ ಮೂರನೇ ಪತ್ನಿಯಾಗಿದ್ದಾರೆ. ಇವರಿಬ್ಬರ ಮದುವೆಗೂ ಮುನ್ನ ಹಿಂದೆ 2012ರಲ್ಲಿ ಕಿರುತೆರೆ ನಟಿ ಜೆನಿಫರ್ ವಿಂಗೆಟ್ ಜೊತೆ ಕರಣ್ ಮದುವೆ ಆಗಿದ್ದರು. 2014ರಲ್ಲಿ ಇವರಿಬ್ಬರೂ ವಿಚ್ಛೇದನ ಪಡೆದಿದ್ದರು. ಅದಕ್ಕೂ ಮುನ್ನ 2008ರಲ್ಲಿ ಶೃದ್ಧಾ ನಿಗಮ್ ಜೊತೆ ಕರಣ್ ವಿವಾಹವಾಗಿದ್ದರು. ಕೇವಲ 10 ತಿಂಗಳಲ್ಲೇ ದಾಂಪತ್ಯದಲ್ಲಿ ಬಿರುಕು ಮೂಡಿ ದೂರವಾಗಿದ್ದರು. 43 ವರ್ಷದ ನಟಿ ಬಿಪಾಶಾಗಿಂತ ಕರಣ್ ಸಿಂಗ್ ಗ್ರೋವರ್ 3 ವರ್ಷ ಚಿಕ್ಕವರು.

Bipasha Basu: 43-year-old Bollywood actress Bipasha Basu gave birth to a baby girl

Comments are closed.