Youtube medicine: ಯೂಟ್ಯೂಬ್ ನೋಡಿ ಮನೆಯಲ್ಲೇ ಔಷಧಿ ಮಾಡಿ ಕುಡಿಯುವ ಮುನ್ನ ಈ ಸ್ಟೋರಿ ಓದಲೇಬೇಕು..

ಮಧ್ಯಪ್ರದೇಶ: Youtube medicine: ಮೊದಲೆಲ್ಲಾ ಮಕ್ಕಳಿಗೆ ಮೊದಲ ಗುರು ಅಂದ್ರೆ ಅಮ್ಮ. ಶಾಲೆಗೆ ಹೋದ ಮೇಲೆ ಪಾಠ ಹೇಳಿಕೊಡುವವರೇ ಟೀಚರ್ಸ್. ಆದರೆ ಈಗ ಹಾಗಲ್ಲ. ಗೂಗಲ್.. ಯೂಟ್ಯೂಬ್ ಗಳೇ ಜಗತ್ತಿಗೆ ಗುರು ಅನ್ನೋ ಮಟ್ಟಕ್ಕೆ ತಂತ್ರಜ್ಞಾನ ಮುಂದುವರಿದಿದೆ. ಯಾವ ವಿಷಯ ಗೊತ್ತಿಲ್ಲದಿದ್ದರೂ ಮೊದಲು ನೆನಪಾಗೋದೇ ಗೂಗಲ್, ಯೂಟ್ಯೂಬ್.. ಇವುಗಳಲ್ಲಿ ಸಿಗದ ವಿಚಾರಗಳೇ ಇಲ್ಲ. ಅಡುಗೆಯಿಂದ ಹಿಡಿದು ಫ್ಯಾಷನ್, ಕಲೆ, ಹೀಗೆ ಪ್ರತಿಯೊಂದು ವಿಷಯಗಳನ್ನು ಸುಲಭವಾಗಿ ಅರ್ಥೈಸಿ ಮನದಟ್ಟು ಮಾಡಿಕೊಡುವ ಸಾಧನಗಳಿವು. ಹೀಗೆ ಯೂಟ್ಯೂಬ್ ಮಾಹಿತಿಯನ್ನೇ ನಿಜವೆಂದು ನಂಬಿ ಇಲ್ಲೊಬ್ಬ ವ್ಯಕ್ತಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಇದನ್ನೂ ಓದಿ: The teacher committed suicide : ಆನ್ ಲೈನ್‌ ನಲ್ಲಿ ಹಣ ಕಳೆದುಕೊಂಡು ಶಿಕ್ಷಕಿ ಆತ್ಮಹತ್ಯೆಗೆ ಶರಣು

ಮಧ್ಯಪ್ರದೇಶದಲ್ಲಿ ಯೂಟ್ಯೂಬ್ ನೋಡಿ ತನ್ನ ಕೈನೋವಿಗೆ ಔಷಧಿ ಮಾಡಿಕೊಂಡು ಕುಡಿದ ವ್ಯಕ್ತಿಯೊಬ್ಬರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸ್ವರ್ಣಬಾಗ್ ಕಾಲೋನಿ ನಿವಾಸಿ 30 ವರ್ಷದ ಧರ್ಮೇಂದ್ರ ಕೊರೋಲೆ ಅವರು ಯೂಟ್ಯೂಬ್ ನೋಡಿ ಕಾಡಲ್ಲಿ ಸಿಗುವ ಸೋರೆಕಾಯಿ ರಸದ ಔಷಧಿ ಮಾಡಿಕೊಂಡು ಕುಡಿದು ತನ್ನ ಜೀವಕ್ಕೆ ತಾನೇ ಕುತ್ತು ತಂದಿದ್ದಾರೆ.

ಅಷ್ಟಕ್ಕೂ ಆಗಿದ್ದೇನು..?

ಖಾಂಡ್ವಾ ಮೂಲದ ಧಮೇಂದ್ರ ಕೊರೋಲೆ ಚಾಲಕ ವೃತ್ತಿಯನ್ನು ಮಾಡಿಕೊಂಡಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಸ್ವರ್ಣಬಾಗ್ ಕಾಲೊನಿಯಲ್ಲಿ ಕೆಲ ವರ್ಷಗಳಿಂದ ವಾಸ ಮಾಡಿಕೊಂಡಿದ್ದರು. ಕೆಲ ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಇವರ ಕೈಗೆ ಬಲವಾದ ಏಟು ಬಿದ್ದಿತ್ತು. ಹೀಗಾಗಿ ಅವರು ಸತತ ಕೈ ನೋವಿನಿಂದ ಬಳಲುತ್ತಿದ್ದರು. ಹಲವಾರು ಆಸ್ಪತ್ರೆಗಳನ್ನು ಸುತ್ತಿದರೂ ಇವರ ಕೈ ನೋವಿಗೆ ಯಾವುದೇ ಪರಿಹಾರ ಸಿಕ್ಕಿರಲಿಲ್ಲ. ಕೊನೆಗೆ ಯೂಟ್ಯೂಬ್ ನಲ್ಲಿ ಏನಾದರೂ ಪರಿಹಾರ ಸಿಗಬಹುದಾ ಎಂದು ಹುಡುಕಾಡಿದಾಗ ಅವರಿಗೆ ಸಿಕ್ಕಿದ್ದೇ ಕಾಡಿನಲ್ಲಿ ಬೆಳೆದ ಸೋರೆಕಾಯಿ ನೋವನ್ನು ಶಮನ ಮಾಡಬಲ್ಲದು ಎಂಬ ಮಾಹಿತಿ.

ಇದನ್ನೂ ಓದಿ: Suicide Case : ನಿನ್ನೆ ಎರಡನೇ ಮದುವೆ ಗಲಾಟೆ, ಇಂದು ಯೋಧ ಮೊದಲನೇ ಹೆಂಡತಿ ಜೊತೆ ಅತ್ಮಹತ್ಯೆ

ಇದನ್ನೇ ನಿಜವೆಂದು ನಂಬಿದ ಧಮೇಂದ್ರ ಅವರು ಕಾಡಿನಲ್ಲಿ ಸಿಗುವ ಸೋರೆಕಾಯಿ ಬಗ್ಗೆ ಮಾಹಿತಿ ಸಂಗ್ರಹಿಸಿ ಯಾವುದೋ ಮೂಲದಿಂದ ಅದನ್ನು ತರಿಸಿಕೊಂಡಿದ್ದಾರೆ. ಬಳಿಕ ಯೂಟ್ಯೂಬ್ ನಲ್ಲಿ ಹೇಳಿದ ಕ್ರಮದಲ್ಲೇ ಕಾಡಿನ ಸೋರೆಕಾಯಿ ಜ್ಯೂಸ್ ಮಾಡಿ ಕುಡಿದಿದ್ದಾರೆ. ಆ ಜ್ಯೂಸ್ ಕುಡಿದ ಬಳಿಕ ಅವರಿಗೆ ವಿಪರೀತ ವಾಂತಿಯಾಗಿದೆ. ಆ ಬಳಿಕ ಅವರು ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕುಟುಂಬಸ್ಥರ ಹೇಳಿಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಅಪಘಾತದಿಂದ ಬದುಕಿ ಬಂದರೂ ತನ್ನ ಜೀವವನ್ನು ತನ್ನ ಕೈಯ್ಯಾರೆ ತಾನೇ ತೆಗೆದುಕೊಂಡಿದ್ದಾರೆ.

Youtube medicine: You should read this story before taking medicine at home after watching YouTube.

Comments are closed.