Kirti Azad : ಗ್ರೆಗ್ ಚಾಪೆಲ್ ಕೋಚ್ ಆಗಿದ್ದಾಗ ನಾನು ಗಂಗೂಲಿಯ ಬೆಂಬಲಕ್ಕೆ ನಿಂತಿದ್ದೆ: ಮಾಜಿ ಆಯ್ಕೆದಾರ ಕೀರ್ತಿ ಆಝಾದ್

ಬೆಂಗಳೂರು: ವಿರಾಟ್‌ ಕೊಹ್ಲಿಯನ್ನು (Virat Kohli) ಏಕದಿನ ಕ್ರಿಕೆಟ್‌ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಸಿದ ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ವಿರಾಟ್‌ ಕೊಹ್ಲಿಯ ಹೇಳಿಕೆ-ಪ್ರತಿಹೇಳಿಕೆಗಳು ನಿಂತಿದ್ದರೂ ಆ ವಿಷಯದ ಬಗ್ಗೆ ಇತರರ ಹೇಳಿಕೆಗಳು ಮುಂದುವರೆದಿವೆ. ಇದೀಗ ಮಾಜಿ ಕ್ರಿಕೆಟ್ ಆಯ್ಕೆದಾರ ಕೀರ್ತಿ ಆಝಾದ್ (Kirti Azad) ಈ ವಿವಾದಕ್ಕೆ ದನಿಗೂಡಿಸಿದ್ದು ತಮ್ಮ ಸೇವಾವಧಿಯ ಘಟನೆಯನ್ನು ಮೆಲುಕು ಹಾಕಿದ್ದಾರೆ. “ಗ್ರೆಗ್ ಚಾಪೆಲ್ (Coach Greg Chappell) ಕೋಚ್ ಆಗಿದ್ದಾಗ ಇದೇ ರೀತಿ ಸೌರವ್ ಗಂಗೂಲಿಯವರನ್ನು ನಾಯಕತ್ವದಿಂದ ಕೆಳಗಿಳಿಯುವಂತೆ ಕೇಳಲಾಗಿತ್ತು. ಆಗ ಅವರಿಬ್ಬರ ಮಧ್ಯೆ ವಿವಾದ ಉಂಟಾದಾಗ ನಾನು ಸೌರವ್‌ ಗಂಗೂಲಿಯ (Sourav Ganguly) ಬೆಂಬಲಕ್ಕೆ ನಿಂತಿದ್ದೆ ಎಂದು ಕೀರ್ತಿ ನೆನಪಿಸಿಕೊಂಡರು.

ಏಕದಿನ ಕ್ರಿಕೆಟ್‌ ತಂಡದ ನಾಯಕತ್ವದಿಂದ ಕೆಳಗಿಳಿಸುವ ಕೇವಲ ಒಂದೂವರೆ ಘಂಟೆಯ ಮೊದಲು ನನಗೆ ವಿಷಯ ತಿಳಿಸಲಾಯಿತು ಎಂಬ ವಿರಾಟ್‌ ಹೇಳಿಕೆಯಿಂದ ಪ್ರಾರಂಭವಾದ ವಿವಾದ ಅವರ ಹಾಗೂ ರೋಹಿತ್ ಶರ್ಮ ನಡುವಿನ ವೈಮನಸ್ಸು ಎಂದೆಲ್ಲಾ ಎಳೆದಾಡಿದ ನಂತರ ಹಾಗೂ ಇದಕ್ಕೆ ವಿರಾಟ್‌ ಮತ್ತು ರೋಹಿತ್‌ರ ಸ್ಪಷ್ಟನೆಗಳ ನಂತರ ಇನ್ನೇನು ವಿವಾದ ಮುಗಿಯಿತು ಎಂದುಕೊಳ್ಳುವಷ್ಟರಲ್ಲಿ ಪ್ರಮುಖ ಮಾಜಿ ಕ್ರಿಕೆಟಿಗರ ಅಭಿಪ್ರಾಯಗಳು ಒಂದಾದ ನಂತರ ಒಂದು ಬರುತ್ತಿದ್ದು ಅದು ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.

ಇದಕ್ಕೂ ಮೊದಲು ಭಾರತ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ತಮ್ಮ ಹೇಳಿಕೆಯಲ್ಲಿ ವಿವಾದಕ್ಕೆ ತಕ್ಕ ಸ್ಪಷ್ಟನೆ ನೀಡುವಂತೆ ಸೌರವ್‌ರನ್ನು ಆಗ್ರಹಿಸಿದ್ದರು. ಇದರೊಂದಿಗೆ ಮತ್ತೊಬ್ಬ ನಾಯ ಮೊಹಮ್ಮದ್‌ ಅಜರುದ್ದೀನ್‌ ಸಹ ತಮ್ಮ ಟ್ವೀಟ್‌ನಲ್ಲಿ ಭಾರತೀಯ ಕ್ರಿಕೆಟ್‌ ತಂಡದಲ್ಲಿ ಎಲ್ಲವೂ ಸರಿಯಿಲ್ಲ, ಆಟಗಾರರ ಮಧ್ಯೆ ಭಿನ್ನಾಭಿಪ್ರಾಯಗಳಿರಬಹುದು ಎಂದಿದ್ದರು. ವಿರಾಟ್‌ ಕೊಹ್ಲಿ ಏಕದಿನ ಸರಣಿಗೆ ತಾವು ಲಭ್ಯರಿಲ್ಲ ಎಂದಿದ್ದರು ಹಾಗೂ ರೋಹಿತ್‌ ಶರ್ಮ ಪ್ರಥಮ ಟೆಸ್ಟ್‌ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದಾಗಿ ಆಡುತ್ತಿಲ್ಲ. ಸತತ ಪಂದ್ಯಾವಳಿಗಳ ನಡುವೆ ಆಟಗಾರರು ವಿರಾಮ ತೆಗೆದುಕೊಳ್ಳುವುದು ಸರ್ವೇಸಾಮಾನ್ಯ, ಆದರೆ ಅವರು ಆರಿಸಿಕೊಂಡಿರುವ ಸಮಯ ಅನುಮಾನ ಮೂಡಿಸುತ್ತಿದೆ ಎಂದಿದ್ದರು ಅಜರ್ ತಮ್ಮ ಟ್ವೀಟ್‌ನಲ್ಲಿ. ಇದನ್ನೇ ನೆನಪಿಸಿಕೊಂಡ ಕೀರ್ತಿ ಆಝಾದ್ ಸೌರವ್ ಗಂಗೂಲಿ ಅನುಭವಿಯಾಗದ್ದು ಹಾಗೂ ಮಂಡಳಿಯ ಅತ್ಯುನ್ನತ ಸ್ಥಾನದಲ್ಲಿದ್ದು ಈ ವಿವಾದವನ್ನು ಇನ್ನೂ ಪ್ರಬುದ್ಧತೆಯಿಂದ ಹಾಗೂ ವೃತ್ತಿಪರತೆಯಿಂದ ನಿರ್ವಹಿಸಬೇಕಾಗಿತ್ತು ಎಂದರು. ಇಂತಹ ವಿವಾದಗಳ ಬಗ್ಗೆ ತಾವು ಆಡುತ್ತಿದ್ದ ಅವಧಿಯಲ್ಲೇ ತಮ್ಮ ವಿಷಯದಲ್ಲೇ ಅನುಭವ ಹೊಂದಿದ್ದ ಸೌರವ್ ಇಂತಹ ವಿಷಯಗಳು ಸಾರ್ವಜನಿಕರ ಗಮನಕ್ಕೆ ಬರದಂತೆ ನೋಡಿಕೊಳ್ಳುವ ಜಾಣ್ಮೆ ಪ್ರದರ್ಶಿಸಬೇಕಿತ್ತು ಎಂದರು.

ಸೌರವ್‌ರ ನಿರ್ಧಾರಕ್ಕೆ ನನ್ನ ವಿರೋಧ ಇಲ್ಲವಾದರೂ ಅದನ್ನು ನಿರ್ವಹಿಸಿದ ರೀತಿ ಇನ್ನೂ ಉತ್ತಮವಾಗಿರಬೇಕಿತ್ತು ಹಾಗೂ ತಮ್ಮ ನಿರ್ಧಾರವನ್ನು ವಿರಾಟ್‌ ಕೊಹ್ಲಿಗೆ ಇನ್ನೂ ಹೆಚ್ಚು ಸಮಯವಿರುವಂತೆಯೇ ತಿಳಿಸಬೇಕಾಗಿತ್ತು ಎಂದರು. 

ಇದನ್ನೂ ಓದಿ: Ravindra Jadeja Retire : ರವೀಂದ್ರ ಜಡೇಜಾ ಕ್ರಿಕೆಟ್‌ಗೆ ಗುಡ್‌ ಬೈ : ನಿವೃತ್ತಿ ಹಿಂದಿದೆ ನೋವಿನ ಕಾರಣ

ಇದನ್ನೂ ಓದಿ: ಯುವ ಕ್ರಿಕೆಟ್‌ ಆಟಗಾರ್ತಿಗೆ ಲೈಂಗಿಕ ಕಿರುಕುಳ : ಭಾರತದ ಕ್ರಿಕೆಟ್ ಕೋಚ್‌ ವಿರುದ್ದ ಪ್ರಕರಣ ದಾಖಲು

(Kirti Azad says he supported Sourav when he asked to step down from captaincy by the then coach Greg Chappell)

Comments are closed.