ಕರೀನಾ- ಸೈಫ್ 8ನೇ ಮದುವೆ ಆನಿವರ್ಸರಿ : ಪತಿಗೆ ಪ್ರೀತಿಯ ಸಾಲು ಬರೆದ ಕರೀನಾ

ಕರೀನಾಕಪೂರ್ ಸೈಫ್ ಆಲೀ ಖಾನ್ ಬಾಲಿವುಡ್ ಹಾಟ್ ಫೇವರಿಟ್ ಜೋಡಿ. ನವಾಬ್ ಜೋಡಿ ಅಂತಾನೆ ಅನ್ನಿಸಿ ಕೊಂಡಿರುವ ಈ ಜೋಡಿ ಮದುವೆಯ ನಂತ್ರನೂ ತಮ್ಮದೇ ಆದ ಕೆರಿಯರ್ ನಲ್ಲಿ ಬ್ಯೂಸಿಯಾಗಿದ್ದಾರೆ. ಸದ್ಯ ಎರಡನೇ ಮಗುವಿನ ನಿರೀಕ್ಷೆಯಲ್ಲಿರೋ ಜೋಡಿ , ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಬೇಬೋ ಹಾಗೂ ಸೈಫ್ ಜೋಡಿಯು ಇವತ್ತು 8ನೇ ವರ್ಷದ ಮದುವೆ ವಾರ್ಷಿಕೋತ್ಸವನ್ನು ಆಚರಿಸಿಕೊಂಡಿದ್ದಾರೆ. ಈ ಜೋಡಿ 2012 ಅಕ್ಟೋಬರ್ 16 ರಂದು ಹೊಸ ಬಾಳಿಗೆ ಕಾಲಿಟಿದ್ರು. ಇದೀಗ ಈ ಜೋಡಿ ಮದುವೆಯಾಗಿ 8 ವರ್ಷ ಪೂರೈಸಿದೆ.

ಈ ಹಿನ್ನೆಲೆಯಲ್ಲಿ ಬೇಬೋ, ತಮ್ಮ ಇಸ್ಟಾಗ್ರಾಂ ನಲ್ಲಿ ಸೈಫ್ ಗೆ ಪ್ರೀತಿಯ ಶುಭಾಶಯವನ್ನು ಹೇಳಿದ್ದಾರೆ. ಜೊತೆಗೆ ತಮ್ಮ ಪ್ರೀತಿಯ ಬಗ್ಗೆ ಒಂದು ಸುಂದರ ಪುಟ್ಟ ಕಥೆಯನ್ನು ಬರೆದಿದ್ದಾರೆ. ಇದು ಅಭಿಮಾನಿಗಳನ್ನು ಪುಲ್ ಖುಷ್ ಆಗುವಂತೆ ಮಾಡಿದೆ.

ತಮ್ಮ ಇಸ್ಟಾಗ್ರಾಂ ಪೋಸ್ಟ್ ಅನ್ನು ಕಥೆ ತರಹ ಶುರು ಮಾಡಿದ ಬೇಬೋ “ ಒಂದೂರಲ್ಲಿ ಬೋಬೋ ಹೆಸರಿನ ಹುಡುಗಿ ಹಾಗು ಸೈಫೂ ಹೆಸರಿನ ಹುಡುಗ ಇದ್ದ. ಅವರಿಬ್ಬರಿಗೂ ಸ್ಪಾಗಟಿ ಹಾಗೂ ವೈನ್ ಆಂದ್ರೆ ತುಂಬಾ ಇಷ್ಟ.

ನಂತರ ಅವರು ಸುಖವಾಗಿ ಬಾಳಿದ್ರು”ಅಂತ ಬರೆದು ಕೊಂಡಿದ್ದಾರೆ ಜೊತೆಗೆ ಇದೇ ಅವರ ಸುಖೀ ದಾಂಪತ್ಯದ ಗುಟ್ಟು ಅಂತಾನು ಹೇಳಿಕೊಂಡಿದ್ದಾರೆ.

ಇನ್ನು ಈ ಜೋಡಿಗೆ ಅಮೃತ ಆರೋರಾ, ರಿಧಿಮಾ ಕಪೂರ್, ಮನೀಶ್ ಮಲೋತ್ರ ಸೇರಿದಂತೆ ಹಲವು ಗಣ್ಯರು ವಿಶ್ ಮಾಡಿದ್ದಾರೆ. ಮತ್ತೊಂದೆಡೆ ಚೋಟೇ ನವಾಬ್ ಅಂತನೇ ಕರೆಸಿಕೊಳ್ಳೋ ಸೈಫ್ – ಬೇಬೋ ಪುತ್ರ ತೈಮೂರ್ ಕೂಡಾ ತನ್ನ ಕ್ಯೂಟ್ ಚಿನ್ನಾಟಗಳಿಂದ ಫ್ಯಾನ್ ಫಾಲೋವರ್ಸ್ ಹೊಂದಿದ್ದಾನೆ. ಇದೀಗ ಎರಡನೇ ಮಗುವಿನ ನೀರೀಕ್ಷೆಯಲ್ಲಿರುವ ಈ ಜೋಡಿ ಗೆ ಹ್ಯಾಪಿ ಆನಿವರ್ಸರಿ
.

https://www.instagram.com/p/CGZMQlpJt-I/

Comments are closed.