Biggboss: ನೈತಿಕತೆ ಚೌಕಟ್ಟು ಮೀರಿ ಸಾಗಿದ ಬಿಗ್ ಬಾಸ್….! ನಟಿಮಣಿ ತುಟಿಗೆ ತುಟಿ ಬೆಸೆದ ಸಿಂಗರ್….!!

ಓಟಿಟಿಯಲ್ಲಿ ತೆರೆ ಕಾಣುತ್ತಿರುವ ಕರಣ್ ಜೋಹರ್ ನಡೆಸಿಕೊಡುತ್ತಿರುವ ಹಿಂದಿ ಬಿಗ್ ಬಾಸ್ ಶೋ ನೈತಿಕ ಚೌಕಟ್ಟು ಮೀರಿ ಸಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಟಾಸ್ಕ್ ಗಾಗಿ ಗಾಯಕಿ ನಟಿಮಣಿಯ ತುಟಿಗೆ ತುಟಿ ಬೆಸೆದು ಸುದ್ದಿಯಾಗಿದ್ದಾರೆ.

ಟಾಸ್ಕ್ ವೊಂದಕ್ಕಾಗಿ ಗಾಯಕಿ ನೇಹಾ ಭಾಸಿನ್ ನಟಿ ರಿಧಿಮಾ ಪಂಡಿತ್ ತುಟಿಗೆ ತುಟಿ ಬೆಸೆದು ಚುಂಬಿಸುವ ಮೂಲಕ ನೈತಿಕತೆಯ ಎಲ್ಲೆ ಮೀರಿದ್ದಾರೆ. ಅದು ನಟಿ ರಿಧಿಮಾ ಅನುಮತಿ ಇಲ್ಲದೇ ಹೀಗೆ ಕಿಸ್ ಮಾಡಿರೋದು ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ.

ಶೋನಲ್ಲಿ ಸ್ಪರ್ಧಿಗಳನ್ನು ಎರಡು ಟೀಂ ಮಾಡಲಾಗಿದ್ದು, ಒಂದು ಟೀಂನವರು ಸ್ಥಿರವಾಗಿ ನಿಲ್ಲುವುದು ಹಾಗೂ ಇನ್ನೊಂದು ಟೀಂನ ಸದಸ್ಯರನ್ನು ಅವರನ್ನು ಸೆಳೆಯಲು ಏನಾದ್ರು ಚಟುವಟಿಕೆ ನಡೆಸುವ ಟಾಸ್ಕ್ ನೀಡಲಾಗಿತ್ತು.

ಈ ವೇಳೆ ನಿಶ್ಚಲವಾಗಿ ನಿಂತಿದ್ದ ರಿಧಿಮಾ ಪಂಡಿತ್ ಕದಲಿಸಲು ಗಾಯಕಿ ನೇಹಾ ಭಾಸಿನ್ ಅವರೊಂದಿಗೆ ಲಿಪ್ ಲಾಕ್ ಮಾಡಿದ್ದಾರೆ. ಆದರೂ ವಿಚಲಿತರಾಗದ ರಿಧಿಮಾ ತಾವೇ ಟಾಸ್ಕ್ ಗೆದ್ದಿದ್ದಾರೆ.

ಕೇವಲ ಆರುವಾರಗಳ ಕಾಲ ಮಾತ್ರ ನಡೆಯಲಿರುವ ಈ ಬಿಗ್ ಬಾಸ್ ಶೋ ಕೇವಲ ಓಟಿಟಿಯಲ್ಲಿ ಮಾತ್ರ ಪ್ರಸಾರವಾಗಲಿದ್ದು ಹೀಗಾಗಿ ಸಾಕಷ್ಟು ಹಾಟ್ ಹಾಗೂ ಬೋಲ್ಡ್ ಆಗಿರಲಿದೆ ಎಂದು ಈ ಮೊದಲೆ ಪ್ರೇಕ್ಷಕರಿಗೆ ಹೇಳಲಾಗಿತ್ತು.

ಇದನ್ನೂ ಓದಿ : ಆತ ನನ್ನೊಂದಿಗೆ ಮಿತಿ ಮೀರಿ ವರ್ತಿಸಿದ್ದ…! ಶಮಿತಾ ಶೆಟ್ಟಿ ಬೊಟ್ಟು ಮಾಡಿದ್ಯಾರತ್ತ ಗೊತ್ತಾ..?!

ಈಗ ಶೋ ಆರಂಭವಾಗುತ್ತಿದ್ದಂತೆ ಸ್ಪರ್ಧಿಗಳ ಎಲ್ಲೆಮೀರಿದ ವರ್ತನೆ ಆರಂಭವಾಗಿದ್ದು, ಪ್ರೇಕ್ಷಕರೆ ಮುಜುಗರ ಪಡುವಷ್ಟು ಮುಕ್ತವಾಗಿ ಸ್ಪರ್ಧಿಗಳು ನಡೆದುಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ.

https://kannada.newsnext.live/bollywood-actress-kanganaranuth-hot-photos-viral-instagram/

Comments are closed.