Rashmika Mandanna : ಮತ್ತೊಂದು ಸಿಹಿ ಸುದ್ದಿ ಕೊಟ್ಟ ರಶ್ಮಿಕಾ : ತೆರೆಗೆ ಬರ್ತಿದೆ ಮಿಷನ್ ಮಜ್ನು

ಕೊಡಗಿನ ಕುವರಿ ರಶ್ಮಿಕಾ‌ಮಂದಣ್ಣ ಸದ್ಯ ಬಹುಭಾಷೆಯ ಬ್ಯುಸಿ ಬೆಡಗಿ, ಟಾಲಿವುಡ್, ಬಾಲಿವುಡ್ ನಲ್ಲಿ ಒಂದಾದ ಮೇಲೊಂದು ಸಿನಿಮಾದಲ್ಲಿ ಮಿಂಚ್ತಿರೋ ರಶ್ಮಿಕಾ ಅಭಿಮಾನಿ ಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ರಶ್ಮಿಕಾ ಅಭಿನಯದ ಹಿಂದಿಯ ಬಹುನೀರಿಕ್ಷಿತ ಚಿತ್ರ ಮಿಶನ್ ಮಜ್ನು 2022 ರ ಮೇ 13 ರಂದು ರಿಲೀಸ್ ಆಗಲಿದೆ.

ಈ ಕುರಿತು ಚಿತ್ರತಂಡ ಈಗಾಗಲೇ ಅಧಿಕೃತ ಹೇಳಿಕೆ ಪ್ರಕಟಿಸಿದೆ. ಚಿತ್ರೀಕರಣ ಪೂರ್ಣಗೊಂಡಿದ್ದು ಚಿತ್ರತಂಡ ಡಬ್ಬಿಂಗ್ ಹಾಗೂ ಎಡಿಟಿಂಗ್ ಕೆಲಸದಲ್ಲಿ ಬ್ಯುಸಿಯಾಗಿದೆ. ಬಾಲಿವುಡ್ ನ ಚೊಚ್ಚಲ ಸಿನಿಮಾ ಮಿಶನ್ ಮಜ್ನುದಲ್ಲಿ ರಶ್ಮಿಕಾ ಮಂದಣ್ಣ ಸಿದ್ಧಾರ್ಥ ಮಲ್ಹೋತ್ರಾಗೆ ನಾಯಕಿಯಾಗಿ ನಟಿಸಿದ್ದು ಶಂತನು ಬಾಗ್ಚಿ ಸಿನಿಮಾ ನಿರ್ದೇಶಿಸಿದ್ದಾರೆ.

ಅಮರ್ ಬುಟಾಲಾ ಹಾಗೂ ಗರಿಮಾ ಮೆಹ್ತಾ ನಿರ್ಮಿಸಿರೋ ಈ ಸಿನಿಮಾದ ಸ್ಕ್ರಿಪ್ಟ್ ಕೇಳಿದಾಗಲೇ ಸಿನಿಮಾದಲ್ಲಿ ನಟಿಸಲು ನಿರ್ಧರಿಸಿದೆ ಎಂದು ರಶ್ಮಿಕಾ ಈ ಹಿಂದೆ ಟ್ವೀಟ್ ಮಾಡಿದ್ದಾರೆ. ಇತ್ತೀಚಿಗಷ್ಟೇ ರಶ್ಮಿಕಾ ನಟನೆಯ ಟಾಲಿವುಡ್ ಸೂಪರ್ ಹಿಟ್ ಸಿನಿಮಾ ಪುಷ್ಪದ ಮೊದಲ ಹಾಡು ರಿಲೀಸ್ ಆಗಿದ್ದು ಸಿನಿರಸಿಕರನ್ನು ಸೆಳೆದಿದೆ.

ಹೀಗಿರುವಾಗಲೇ ರಶ್ಮಿಕಾ ಮತ್ತೊಂದು ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿರೋದು ಚಿತ್ರರಸಿಕರ ಸಂಭ್ರಮಕ್ಕೆ ಕಾರಣವಾಗಿದೆ. ಇದರ ಮಧ್ಯೆ ರಶ್ಮಿಕಾ ತಮ್ಮ ಬಾಲಿವುಡ್ ನ ಎರಡನೇ ಸಿನಿಮಾ ಗುಡ್ ಬೈ ಯಲ್ಲಿ ಬ್ಯುಸಿಯಾಗಿದ್ದು ಸಿನಿಮಾವೂ ಮುಂದಿನ ವರ್ಷ ತೆರೆಗೆ ಬರಲಿದೆ.

Comments are closed.