ಭಾನುವಾರ, ಏಪ್ರಿಲ್ 27, 2025
HomeCinemaSaree Controversy: ಸೀರೆ ಧರಿಸಿದವರಿಗೆ ಪ್ರವೇಶವಿಲ್ಲ: ರೆಸ್ಟೋರೆಂಟ್ ವಿರುದ್ಧ ಸಮರ ಸಾರಿದ ಬಾಲಿವುಡ್ ನಟಿ

Saree Controversy: ಸೀರೆ ಧರಿಸಿದವರಿಗೆ ಪ್ರವೇಶವಿಲ್ಲ: ರೆಸ್ಟೋರೆಂಟ್ ವಿರುದ್ಧ ಸಮರ ಸಾರಿದ ಬಾಲಿವುಡ್ ನಟಿ

- Advertisement -

ನವದೆಹಲಿ: ದೆಹಲಿಯ ರೆಸ್ಟೊರೆಂಟ್ ವೊಂದು ಭಾರತೀಯ ಸಾಂಪ್ರದಾಯಿಕ ಉಡುಗೆ ಸೀರೆ ಧರಿಸಿದವರಿಗೆ ರೆಸ್ಟೋರೆಂಟ್ ಒಳಕ್ಕೆ ಪ್ರವೇಶ ನಿರಾಕರಿಸುವ ಮೂಲಕ ವಿವಾದಕ್ಕೆ ಸಿಲುಕಿದೆ. ಈ ರೆಸ್ಟೋರೆಂಟ್ ವಿರುದ್ಧ ನಟಿ ರೀಚಾ ಛಡ್ಡಾ ಆಕ್ರೋಶ ಹೊರಹಾಕಿದ್ದಾರೆ.

ದೆಹಲಿಯ ರೆಸ್ಟೋರೆಂಟ್ ಒಂದಕ್ಕೆ ತೆರಳಿದ ಮಹಿಳೆಗೆ ಪ್ರವೇಶ ನಿರಾಕರಿಸಲಾಗಿದೆ. ಕಾರಣ ಕೇಳಿದ್ದಕ್ಕೆ ನೀವು ಸ್ಮಾರ್ಟ್ ಬಟ್ಟೆ ಧರಿಸಿಲ್ಲ. ಸೀರೆ ಸ್ಮಾರ್ಟ್ ಬಟ್ಟೆ ಎಂದು ಸಿಬ್ಬಂದಿ ಉತ್ತರಿಸಿದ್ದಾರೆ ಎನ್ನಲಾಗಿದೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದೆ.

ಈ ರೆಸ್ಟೋರೆಂಟ್ ವಿರುದ್ಧ ಬಾಲಿವುಡ್ ನಟಿ ರೀಚಾ ಛಡ್ಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಸಮಧಾನ ಹೊರಹಾಕಿರುವ ರೀಚಾ ಇದು ಮೂರ್ಖತನದ ಪರಮಾವಧಿ. ನಮ್ಮ ಭಾಷೆ ಹಾಗೂ ಸಂಪ್ರದಾಯವನ್ನು ಕೀಳಾಗಿ  ಕಾಣುವುದು ವಸಾಹಾತುಶಾಹಿಯ ಅವಶೇಷವಾಗಿದೆ.  ಇದು ಫ್ಯಾಸಿಸಂ ಅನ್ನು ಸೃಷ್ಟಿ ಮಾಡುತ್ತದೆ. ಸೀರೆ ಸ್ಮಾಟ್ ಆಗಿದೆ ವಿನಃ ನಿಮ್ಮ ನಿಯಮವಲ್ಲ ಎಂದು #SariNotSorry #Aquila”  ಟ್ವೀಟ್ ಮಾಡಿರುವ ರೀಚಾ ಆಕ್ರೋಶ ಹೊರಹಾಕಿದ್ದಾರೆ.

ರೀಚಾ ಛಡ್ಡಾ ಪೋಸ್ಟ್ ಗೆ ಸಾವಿರಾರು ಜನರು ಕಮೆಂಟ್ ಮಾಡಿದ್ದು, ಹೊಟೇಲ್ ಮ್ಯಾನೇಜಮೆಂಟ್ ಗೆ ದೊಡ್ಡ ಮೊತ್ತದ ದಂಡ ಹಾಕಬೇಕೆಂದು ಪ್ರತಿಕ್ರಿಯೆ ನೀಡಿದ್ದಾರೆ. ಬಾಲಿವುಡ್ ನಟಿ ರೀಚಾ ಛಡ್ಡಾ ಸಾಕಷ್ಟು ಬೋಲ್ಡ್ ಪಾತ್ರಗಳ ಮೂಲಕ ಹೆಸರು ಮಾಡಿದ್ದರೂ ಭಾರತೀಯ ಸಂಪ್ರದಾಯದ ಬಗ್ಗೆ ಗೌರವ ಹೊಂದಿದ್ದು, ಸೀರೆಗೆ ಅವಮಾನವಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸೋ ಮೂಲಕ ನಮ್ಮ ಸಂಪ್ರದಾಯದ ಬಗ್ಗೆ ಗೌರವ ತೋರೋ ದಿಟ್ಟತನ ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ : ಅಡ್ಡಾದಿಡ್ಡಿ ಹೆಜ್ಜೆ ಹಾಕಿ ಟ್ರೋಲ್ ಆದ ಬಾಲಿವುಡ್ ನಟಿ: ಹೇಗಿತ್ತು ವಾಕ್ ಇಲ್ಲಿದೆ ವಿಡಿಯೋ

ಇದನ್ನೂ ಓದಿ : ಬಿಗ್ ಬಾಸ್ ನಲ್ಲಿ ಸದ್ದು ಮಾಡಿದ ಲೈಂಗಿಕ ದೌರ್ಜನ್ಯ: ಕೆಟ್ಟದಾಗಿ ಮುಟ್ಟಿ ಸಂಜ್ಞೆ ಮಾಡಿದ ಎಂದ ಸ್ಪರ್ಧಿ

(Richa Chadha furious at restaurant for not letting woman wearing saree)

RELATED ARTICLES

Most Popular