ಭಾನುವಾರ, ಏಪ್ರಿಲ್ 27, 2025
HomeCinemaಮಾನನಷ್ಟ ಪ್ರಕರಣದಲ್ಲಿ ಕಂಗನಾಗೆ ಎದುರಾಯ್ತು ಸಂಕಷ್ಟ: ಖುದ್ದು ಹಾಜರಾಗದಿದ್ದರೇ ಜಾರಿಯಾಗಲಿದೆ ವಾರಂಟ್

ಮಾನನಷ್ಟ ಪ್ರಕರಣದಲ್ಲಿ ಕಂಗನಾಗೆ ಎದುರಾಯ್ತು ಸಂಕಷ್ಟ: ಖುದ್ದು ಹಾಜರಾಗದಿದ್ದರೇ ಜಾರಿಯಾಗಲಿದೆ ವಾರಂಟ್

- Advertisement -

ಸಾಲು-ಸಾಲು ಸಿನಿಮಾಗಳು ಹಾಗೂ ತಲೈವಿ ಸಿನಿಮಾ ಸಕ್ಸಸ್ ನ ಖುಷಿಯಲ್ಲಿರೋ ಕಂಗನಾ ರನಾವುತ್ ಗೆ ನ್ಯಾಯಾಲಯ ಶಾಕ್ ನೀಡಿದ್ದು, ಸೆ.20 ವಿಚಾರಣೆಗೆ ಖುದ್ದು ಹಾಜರಾಗ ದಿದ್ದರೇ ವಾರೆಂಟ್ ಜಾರಿ ಮಾಡುವುದಾಗಿ ಎಚ್ಚರಿಸಿದೆ.

ಬಾಲಿವುಡ್ ನ ಗೀತ ರಚನೆಕಾರ ಜಾವೇದ್ ಅಖ್ತರ್ ಸಲ್ಲಿಸಿದ್ದ ಕ್ರಿಮಿನಲ್ ಮಾನನಸ್ಟ ಮೊಕದ್ದಮೆ ಪ್ರಕರಣದಲ್ಲಿ ನಟಿ ಕಂಗನಾ ರನಾವುತ್ ಖುದ್ದು ಹಾಜರಾತಿಯಿಂದ ವಿನಾಯ್ತಿ ಕೋರಿದ್ದರು.ಆದರೆ ಮುಂಬೈ ನ್ಯಾಯಾಲಯ ಸೆ.20 ರಂದು ವಿಚಾರಣೆಗೆ ಕಂಗನಾ ಹಾಜರಾಗಬೇಕೆಂದು ಸೂಚಿಸಿದೆ.

ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುತ್ತಿದ್ದಂತೆ ನಟಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಅವರ ಆರೋಗ್ಯ ಗಮನದಲ್ಲಿಟ್ಟುಕೊಂಡು ಖುದ್ದು ಹಾಜರಾತಿಯಿಂದ ವಿನಾಯ್ತಿ ನೀಡುವಂತೆ ಕಂಗನಾ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ನಟಿಯ ಅನಾರೋಗ್ಯದ ಪ್ರಮಾಣ ಪತ್ರ ಸಲ್ಲಿಸಿದ ವಕೀಲರು, ನಟಿಯು ಮುಂದಿನ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದು, ಅವರಲ್ಲಿ ಕೋವಿಡ್ -19 ಲಕ್ಷಣಗಳು ಕಾಣಿಸಿಕೊಂಡಿವೆ ಎಂದರು.

ಆದರೆ ಇದಕ್ಕೆ ಜಾವೇದ್ ಅಖ್ತರ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಪ್ರಕರಣದ ವಿಚಾರಣೆಯನ್ನು ಮುಂದೂಡುವ ತಂತ್ರ ಎಂದು ಆರೋಪಿಸಿದ್ದಾರೆ. ಬಳಿಕ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಸೆ.20 ರಂದು ಕಂಗನಾ ನ್ಯಾಯಾಲಯಕ್ಕೆ ಗೈರು ಹಾಜರಾದರೇ ಅವರ ವಿರುದ್ಧ ವಾರೆಂಟ್ ಹೊರಡಿಸಲಾಗುವುದು ಎಂದಿದ್ದಾರೆ.

ಟಿವಿ ಶೋವೊಂದರಲ್ಲಿ ತಮ್ಮ ವಿರುದ್ಧ ಮಾನಹಾನಿ ಹಾಗೂ ಅವಮಾನಕರ ಹೇಳಿಕೆ ನೀಡಿದ್ದಾರೆ ಎಂದು ಜಾವೇದ್ ಅಖ್ತರ್ ಕಂಗನಾ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ : ಯೂರೋಪ್ ನಲ್ಲಿ ಹಾಟ್ ಪೋಟೋಶೂಟ್….! ಕಂಗನಾ ಬೋಲ್ಡ್ ಲುಕ್ ವೈರಲ್….!!

ಇದನ್ನೂ ಓದಿ : ಟ್ವಿಟರ್ ನಿಂದ ದಿನಕ್ಕೆ 200 FIR ದಾಖಲಾಗ್ತಿತ್ತು: ಕೊನೆಗೂ ಸತ್ಯ ಹೇಳಿದ ಕಂಗನಾ

ಇದನ್ನೂ ಓದಿ : ತಲೈವಿ ಬಳಿಕ ಮತ್ತೊಂದು ಬಿಗ್ ಬಜೆಟ್ ಚಿತ್ರದಲ್ಲಿ ಕಂಗನಾ: ಸೀತೆಯಾಗಿ ಮಿಂಚಲಿದ್ದಾರೆ ಬಾಲಿವುಡ್ ನಟಿ

( Mumbai Court Order shock to actress Kangana Ranaut )

RELATED ARTICLES

Most Popular