ಕೊಡಗಿನ ಕುವರಿ, ಕಿರಿಕ್ ಬೆಡಗಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ನಲ್ಲಿ ತಮ್ಮ ಚೊಚ್ಚಲ ಸಿನಿಮಾ ಶೂಟಿಂಗ್ ಮುಗಿಸಿದ ಸಂಭ್ರಮದಲ್ಲಿದ್ದಾರೆ. ಮಿಶನ್ ಮಜ್ನುಗೂ ಮುನ್ನ ಸಾಕಷ್ಟು ಬಾಲಿವುಡ್ ಅವಕಾಶವಿದ್ದರೂ ಒಪ್ಪಿಕೊಳ್ಳದ ರಶ್ಮಿಕಾ ಮಿಶನ್ ಮಜ್ನು ಸಿನಿಮಾ ಒಪ್ಪಿಕೊಂಡಿದ್ದು ಹಾಗೂ ಸಿನಿಜರ್ನಿಯ ಬಗ್ಗೆ ತಮ್ಮ ಭಾವನೆಯನ್ನು ಶೂಟಿಂಗ್ ಪೂರ್ಣಗೊಂಡ ಖುಷಿಯಲ್ಲಿ ಹಂಚಿಕೊಂಡಿದ್ದಾರೆ.

ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಶನ್ ಮಜ್ನುದಲ್ಲಿ ನಟಿಸಿರುವ ರಶ್ಮಿಕಾಮಂದಣ್ಣ ಸಖತ್ ಸ್ಕೋಪ್ ಇರೋ ರೋಲ್ ನಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದೆ. ಆದರೆ ರಶ್ಮಿಕಾ ಪಾತ್ರವೇನು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಅದಾಗಲೇ ಬಾಲಿವುಡ್ ನ ಎರಡನೇ ಚಿತ್ರ ಗುಡ್ ಬೈನಲ್ಲಿ ನಟಿಸುತ್ತಿರುವ ರಶ್ಮಿಕಾ ಮಿಷನ್ ಮಜ್ನು ಬಗ್ಗೆ ಟ್ವಿಟರ್ ನಲ್ಲಿ ಹಲವು ಸಂಗತಿ ಹಂಚಿಕೊಂಡಿದ್ದಾರೆ.

ಮಿಷನ್ ಮಜ್ನು ಚಿತ್ರದಲ್ಲಿ ನಾನು ಕೆಲಸ ಮಾಡಿದ್ದು, ಒಂದು ಅದ್ಭುತ ಅನುಭವ. ಈಗಾಗಲೇ ಸಿನಿಮಾ ಶೂಟಿಂಗ್ ಮುಗಿಸಿದೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಕತೆ ಕೇಳಿದಾಗಲೇ ನಾನೊಂದು ಅದ್ಭುತ ಸಿನಿಮಾದ ಭಾಗವಾಗುತ್ತಿದ್ದೇನೆ ಎನ್ನಿಸಿತ್ತು ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.
& It’s a wrap..❤️ what a lovely lovely time I had shooting for #missionmajnu 🌸
— Rashmika Mandanna (@iamRashmika) August 28, 2021
I..for one..can’t believe.. I have already wrapped for my first Hindi film.. I remember the time I heard the script for the first time and I went like.. ‘I want to be a part of this beautiful film’❤️ https://t.co/02C0P8duQt
ಮೊದಲ ಚಿತ್ರಗಳು ಯಾವಾಗಲು ವಿಶೇಷ ಎಂದಿರುವ ರಶ್ಮಿಕಾ ಮಂದಣ್ಣ, ಮಿಷನ್ ಮಜ್ನು ನನಗೆ ಗಡಿದಾಟಿ ಬಾಲಿವುಡ್ ಪ್ರವೇಶಿಸಲು ಅವಕಾಶ ಮಾಡಿಕೊಟ್ಟ ಸಿನಿಮಾ. ಈ ಪ್ರಾಜೆಕ್ಟ್ ಸುಂದರ,ಸುಸಂಸ್ಕೃತ ಜನರೊಂದಿಗೆ ನಾನು ನನ್ನ ಹಿಂದಿ ಸಿನಿಮಾ ಜರ್ನಿ ಆರಂಭಿಸಿದೆ ಎಂಬ ಸಂತಷ ನನ್ನಲ್ಲಿದೆ. ಸ್ಕ್ರಿಪ್ಟ್ ಕೇಳಿದಾಗಲೇ ನಟಿಸಲು ಒಪ್ಪಿಕೊಂಡಿದ್ದೇ. ಯಾಕೆಂದರೇ ಒಮ್ಮೆ ಬಿಟ್ಟುಕೊಟ್ಟರೆ ಮತ್ತೊಮ್ಮೆ ಇಂಥ ಪಾತ್ರ ಬರುವುದಿಲ್ಲ ಎಂಬ ಅರಿವು ನನಗಿತ್ತು ಎಂದಿದ್ದಾರೆ.

ಹಲವು ಒಳ್ಳೆಯ ಅನುಭವ, ಉತ್ತರದ ಸಂಸ್ಕೃತಿಯ ಪರಿಚಯ, ಉತ್ತಮ ನಟ-ನಟಿಯರೊಂದಿಗೆ ಓಡನಾಡುವ ಅವಕಾಶ ಕಲ್ಪಿಸಿದ ಮಿಶನ್ ಮಜ್ನು ತಂಡಕ್ಕೆ ನನ್ನ ಧನ್ಯವಾದ ಎಂದು ರಶ್ಮಿಕಾ ಬರೆದಿದ್ದು, ಎಲ್ಲೆಡೆ ರಶ್ಮಿಕಾ ಟ್ವಿಟ್ ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Rashmika Mandanna reveals why she chose Mission Majnu as her Bollywood debut