Bombay Ravi Death : ನಟೋರಿಯಸ್‌ ಡಾನ್‌ , ಸುಫಾರಿ ಕಿಲ್ಲರ್‌ ಬಾಂಬೆ ರವಿ ಸಾವು

ಬೆಂಗಳೂರು : ಹಲವು ಪ್ರಕರಣಗಳಲ್ಲಿ ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಪಾತಕಿ, ನಟೋರಿಯಸ್‌ ಡಾನ್‌ ಬಾಂಬೆ ರವಿ ಇದೀಗ ಆಂಧ್ರಪ್ರದೇಶದಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಪರಾಧ ಕೃತ್ಯಗಳನ್ನು ನಡೆಸುವ ಮೂಲಕ ಬಾಂಬೆ ರವಿ ಕುಖ್ಯಾತಿಯನ್ನು ಪಡೆದುಕೊಂಡಿದ್ದ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ನಿರ್ಮಾಪಕ ಉಮಾಪತಿ ಹಾಗೂ ದೀಪಕ್‌ ಎಂಬವರಿಗೆ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ, ಅಲ್ಲದೇ ಕೊಲೆ ಮಾಡುವುದಾಗಿಯೂ ಬೆದರಿಕೆಯನ್ನೊಡ್ಡಿದ್ದ.

ಕೊರೊನಾ ವೈರಸ್‌ ಸೋಂಕಿನಿಂದ ಬಳಲುತ್ತಿದ್ದ ಸ್ವಯಂ ಘೋಷಿತ ಡಾನ್‌ ಇದೀಗ ಆಂಧ್ರಪ್ರದೇಶದಲ್ಲಿ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ. ದಕ್ಷಿಣ ಆಫ್ರಿಕಾದ ಸಂಖ್ಯೆಯ ಮೂಲಕ ಡಾನ್‌ ಬಾಂಬೆ ರವಿ ಹಲವರಿಗೆ ಬೆದರಿಕೆಯನ್ನೊಡ್ಡಿದ್ದು, ಹಣಕ್ಕಾಗಿ ಪೀಡಿಸುತ್ತಿದ್ದ.

ನಿರ್ಮಾಪಕ ಉಮಾಪತಿ ಅವರು ದಾಖಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಬಾಂಬೆ ರವಿಗಾಗಿ ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದರು. ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಬಳಿಕ ನಿರ್ಮಾಪಕ ಉಮಾಪತಿ ಬಳಿಯಲ್ಲಿ ನನ್ನಿಂದ ತಪ್ಪಾಗಿದೆ, ಬೇರೆಯವರ ಮಾತು ಕೇಳಿ ಈ ಕೆಲಸಕ್ಕೆ ಕೈ ಹಾಕಿದೆ ಎನ್ನುವ ಮೂಲಕ ಕ್ಷಮೆ ಕೇಳಿದ್ದಾನೆ. ನನ್ನನ್ನು ಕೆಲವರು ದುರ್ಬಳಕೆ ಮಾಡಿಕೊಂಡಿದ್ದಾರೆ ಅಂತಾ ರವಿ ಹೇಳಿದ್ದಾನೆ ಎನ್ನಲಾಗುತ್ತಿದೆ. ಪೊಲೀಸರು ಬಾಂಬೆ ರವಿ ಸಾವಿನ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಮನೆ ಕಳ್ಳತನ ಮಾಡೋಕೆ ವಿಮಾನದಲ್ಲಿ ಬರ್ತಿದ್ದ! ಹೈಟೆಕ್‌ ಕಳ್ಳರು ಅಂದರ್‌ ಆಗಿದ್ದು ಹೇಗೆ ಗೊತ್ತಾ

ಇದನ್ನೂ ಓದಿ : ಬೆಂಗಳೂರಲ್ಲಿ ಐಶಾರಾಮಿ ಕಾರು ಅಪಘಾತ : ಶಾಸಕರ ಪುತ್ರ, ಸೊಸೆ ಸೇರಿ 7 ಮಂದಿ ದುರ್ಮರಣ

(Underworld Don Bombay Ravi Death in Andra pradesh Hospital Corona Virus)

Comments are closed.