ಬಾಲಿವುಡ್ ಗೆ ಕಿಂಗ್ ಖಾನ್ ಪುತ್ರಿ: ಸ್ಟಾರ್ ಪುತ್ರಿ ಆಕ್ಷ್ಯನ್ ಕಟ್ ಹೇಳ್ತಿದ್ದಾರೆ ಜೋಯಾ ಅಖ್ತರ್!

ಬಾಲಿವುಡ್ ಸೂಪರ್ ಸ್ಟಾರ್, ಕಿಂಗ್ ಖಾನ್ ಶಾರೂಕ್ ಖಾನ್ ಮನೆಯ ಎರಡನೇ ತಲೆಮಾರು ಬಣ್ಣದ ಲೋಕಕ್ಕೆ ಎಂಟ್ರಿಕೊಡಲು ಸಿದ್ಧವಾಗಿದೆ. ಈಗಾಗಲ ಹಲವಾರು ಮಾದಕ ಪೋಟೋಗಳ ಮೂಲಕ ನೆಟ್ಟಿಗರ ಮನಗೆದ್ದ ಸುಹಾನಾ ಬಾಲಿವುಡ್ ನಲ್ಲಿ ಬಣ್ಣ ಹಚ್ಚಲಿದ್ದಾರೆ.

ಶಾರುಖ್ ಖಾನ್ ಪುತ್ರಿ ಸುಹಾನಾ ಬಾಲಿವುಡ್ ಎಂಟ್ರಿಗೆ ಈಗಾಗಲೇ ಸಿದ್ಧತೆಗಳು ನಡೆದಿದ್ದು, ಗಲ್ಲಿ ಬಾಯ್ ನಂತಹ ಹಿಟ್ ಸಿನಿಮಾ ನೀಡಿದ ನಿರ್ದೇಶಕಿ ಜೋಯಾ ಅಖ್ತರ್ ಆಕ್ಷ್ಯನ್ ಕಟ್ ಹೇಳಲಿದ್ದಾರೆ.

ಈಗಾಗಲೇ ನಾಟಕ ಹಾಗೂ ಕಿರುಚಿತ್ರಗಳಲ್ಲಿ ನಟಿಸಿದ ಅನುಭವ ಹೊಂದಿರುವ 21 ವರ್ಷದ ಸುಹಾನಾ ನಾಯಕಿಯಾಗಿ ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಅಂತಾರಾಷ್ಟ್ರೀಯ ಕಾಮಿಕ್ ಒಂದರಿಂದ ಹದಿಹರೆಯದ ಲವ್ ಸ್ಟೋರಿ ಆಯ್ದು ಸಿನಿಮಾ ಮಾಡಲು ಜೋಯಾ ಅಖ್ತರ್ ಸಿದ್ಧವಾಗಿದ್ದು, ಇದಕ್ಕಾಗಿ ಶಾರೂಖ್ ಪುತ್ರಿಯನ್ನು ಆಯ್ಕೆಮಾಡಿದ್ದಾರಂತೆ. ಸುಹಾನಾ ಜೊತೆ ಈ ಚಿತ್ರದಲ್ಲಿ ಇನ್ನೂ ಹಲವು ಸ್ಟಾರ್ ನಟರ ಮಕ್ಕಳು ಬಣ್ಣದ ಲೋಕಕ್ಕೆ ಪರಿಚಯವಾಗಲಿದ್ದಾರಂತೆ.

21 ವರ್ಷದ ಸುಹಾನಾ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಹಾಟ್ ಹಾಟ್ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಆಗಾಗ ಸುದ್ದಿಯಾಗುತ್ತಾರೆ.

Comments are closed.