ತಾಲಿಬಾನಿಗಳ ಸೋಷಿಯಲ್ ಮೀಡಿಯಾಗೆ ಬಿತ್ತು ಬೀಗ: ಖಾತೆ ಸ್ಥಗಿತಗೊಳಿಸಿದ ಫೇಸ್ ಬುಕ್, ಯೂಟ್ಯೂಬ್!

ಅಪ್ಘಾನಿಸ್ತಾನದಲ್ಲಿ ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನಿಗಳ ಸೋಷಿಯಲ್ ಮೀಡಿಯಾಕ್ಕೆ  ಬೀಗ ಬಿದ್ದಿದೆ. ತಾಲಿಬಾನ್ ಗೆ ಸಂಬಂಧಿಸಿದ ವಾಟ್ಸಪ್, ವಾಟ್ಸಪ್ ಗ್ರೂಫ್,ಫೇಸ್ ಬುಕ್ ಅಕೌಂಟ್ ಗಳನ್ನು  ಬ್ಲಾಕ್ ಮಾಡುವುದಾಗಿ ಫೇಸ್ ಬುಕ್ ಹೇಳಿದೆ.

ಅಮೇರಿಕಾದಲ್ಲಿ ತಾಲಿಬಾನ್ ನನ್ನು ಭಯೋತ್ಪಾದಕ ಸಂಘಟನೆ ಎಂದು ಅನುಮೋದಿಸಲಾಗಿದೆ. ಹೀಗಾಗಿ  ತಾಲಿಬಾನಿಗಳು ಬಳಸುತ್ತಿರುವ ಎಲ್ಲ ಸೋಷಿಯಲ್ ಮೀಡಿಯಾ ಅಕೌಂಟ್ ಗಳನ್ನು ಸ್ಥಗಿತಗೊಳಿಸುವುದಾಗಿ ಫೇಸ್ ಬುಕ್ ಘೋಷಿಸಿದೆ. ಯು.ಎಸ್‌ ನಿರ್ಬಂಧಗಳ ಅನ್ವಯ ಖಾತೆ ಸ್ಥಗಿತಗೊಳಿಸುತ್ತಿರುವುದಾಗಿ ಫೇಸ್ ಬುಕ್ ಸ್ಪಷ್ಟ ಪಡಿಸಿದೆ. ಯೂಟ್ಯೂಬ್ ಕೂಡ ತಾಲಿಬಾನಿಗಳ ಯೂಟ್ಯೂಬ್ ಖಾತೆಗೆ ಬೀಗ ಹಾಕಿದ್ದು, ಸಂಸ್ಥೆಯ ಅಪಾಯಕಾರಿ ನೀತಿ ನಿಯಮದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಂಡಿರುವುದಾಗಿ ಹೇಳಿದೆ.

ಫೇಸ್ ಬುಕ್ ನಿರ್ಣಯಕ್ಕೆ ತಾಲಿಬಾನ್ ಗ್ರೂಪ್ ‌ಮುಖ್ಯಸ್ಥ ಆಕ್ರೋಶ ವ್ಯಕ್ತಪಡಿಸಿದ್ದು,ಫೇಸ್ ಬುಕ್ ಮತ್ತು ಯೂಟ್ಯೂಬ್ ಕ್ರಮ ವಾಕ್ ಸ್ವಾಂತತ್ರ್ಯದ ಹರಣ ಎಂದಿದ್ದಾರೆ. 20 ವರ್ಷಗಳ ಬಳಿಕ ಅಪ್ಘಾನಿಸ್ತಾನ್ ತನ್ನ ವಶಕ್ಕೆ ಪಡೆದಿರುವ ತಾಲಿಬಾನ ಅಲ್ಲಿ ಸರ್ಕಾರ ಸ್ಥಾಪಿಸುವ ಸಿದ್ಧತೆಯಲ್ಲಿದೆ.ತಾಲಿಬಾನಿಗಳ ಯುದ್ಧ ಹಾಗೂ ಅಕ್ರಮಕ್ಕೆ ಸೋಷಿಯಲ್ ಮೀಡಿಯಾ ಸಹಾಯವೂ ಇದ್ದು ಮಾಹಿತಿ ರವಾನೆ ಸುಲಭಸಾಧ್ಯವಾಗಿದ್ದಕ್ಕೇ ತಾಲಿಬಾನ್ ಅಪ್ಘಾನಿಸ್ತಾನ ವಿರುದ್ದ ಜಯ ಸಾಧಿಸಿದೆ ಎನ್ನಲಾಗಿದೆ.

ಹೀಗಾಗಿ ತಾಲಿಬಾನಿಗಳ ಸೋಷಿಯಲ್ ಮೀಡಿಯಾ ವಿರುದ್ಧ ಸಮರ ಸಾರಿರುವ ಫೇಸ್ ಬುಕ್,ಯೂಟ್ಯೂಬ್ ಹೆಸರು,ಫ್ರೊಪೈಲ್ ಪೋಟೋ ಹಾಗೂ ಶೇರ್ ಆಗುತ್ತಿರುವ ಲಿಂಕ್ ಆಧರಿಸಿ ಖಾತೆಗಳನ್ನು ರದ್ದುಗೊಳಿಸುತ್ತಿದೆ.

Comments are closed.