ಮಾಲ್ಡೀವ್ಸ್ ಅಮೈರಾ ಮಾದಕಲೋಕ : ಬಿಕನಿಯಲ್ಲಿ ಮತ್ತೇರಿಸಿದ ಪ್ರಸ್ತಾನಂ ಚೆಲುವೆ

ನಟಿಯರು ಸಿನಿಮಾದ ಮೂಲಕ ಸುದ್ದಿಯಾದರೇ ಈ ನಟಿಮಣಿ‌ ಮಾತ್ರ ತಮ್ಮ ಮಾದಕ ಸೌಂದರ್ಯದಿಂದಲೇ ಹೆಸರು ಗಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳೋ ಒಂದೊಂದು ಪೋಟೋದ‌ ಮೂಲಕವೂ ಪಡ್ಡೆ ಹೈಕಳ ಹಾಗೂ ಅಭಿಮಾನಿಗಳ ಮತ್ತೇರಿಸುವ ಸೌಂದರ್ಯವತಿ ಅಮೈರಾ ದಸ್ತೂರ್ ( Amyra Dastur ) ಈಗ ಬೇಸಿಗೆಯ ಆರಂಭ ದಲ್ಲೇ ಮತ್ತೊಂದು ಮೈ ಬಿಸಿ ಏರಿಸುವ ಪೋಟೋಸ್ ಶೇರ್ ಮಾಡಿದ್ದಾರೆ.

bollywood-top-actress-amyra-dastur-photo-shoot-in-maldives-beach-01

ತಿಳಿ ನೀಲಿ‌ ನೀರಿನ ಸಮುದ್ರ ತೀರದಲ್ಲಿ ಕೆಂಪನೆಯ ಬಿಕನಿ ತೊಟ್ಟು ಮೈಚೆಲ್ಲಿ ಮಲಗಿದ ಅಮೈರಾ ದಸ್ತೂರ್ ಮೋಹಕ‌ಮೈಮಾಟ ಹಾಗೂ ಮಾದಕ ಭಂಗಿಗೆ ಅಭಿಮಾನಿಗಳು ಮತ್ತೇರಿಸಿಕೊಂಡಿದ್ದಾರೆ. ಅಮೈರಾ ದಸ್ತೂರ್ ತಮ್ಮ ಮಾಲ್ಡೀವ್ಸ್ ವಿಸಿಟ್ ನ ಪೋಟೋಗಳನ್ನು ಶೇರ್ ಮಾಡಿದ್ದಾರೆ. ಕೇವಲ ಮಾಲ್ಡೀವ್ಸ್ ನಲ್ಲಿ ಮಾತ್ರವಲ್ಲ ನೊರೆಂಟು ಸ್ಥಳದಲ್ಲೂ ಅಮೈರಾ ಶೇರ್ ಮಾಡೋದು ಬಿಕನಿ ಪೋಟೋಗಳನ್ನೇ.

bollywood-top-actress-amyra-dastur-photo-shoot-in-maldives-beach 5

ಹಿಂದಿ, ತೆಲುಗು,ತಮಿಳು ಸೇರಿದಂತೆ ಬಹು ಭಾಷೆಗಳಲ್ಲಿ ಗುರುತಿಸಿಕೊಂಡ ಅಮೈರಾ ದಸ್ತೂರ್ ನಿಧಾನಕ್ಕೆ ಬಾಲಿವುಡ್ ನಲ್ಲೂ ಬ್ಯುಸಿಯಾಗಿದ್ದಾರೆ. ರಾಜ್ಮಾ ಚಾವ್ಲಾ, ಪ್ರಸ್ಥಾನಂ ಸಿನಿಮಾದ ಮೂಲಕ ಗಮನ ಸೆಳೆದ ಅಮೈರಾ, ಕೋಯಿ ಜಾನೇ ನಾ ಸಿನಿಮಾದಲ್ಲೂ ಮಿಂಚಿದ್ದರು.

bollywood-top-actress-amyra-dastur-photo-shoot-in-maldives-beach 6

ಇದಲ್ಲದೇ ಅಮೈರಾ ತಮ್ಮ ಪ್ರತಿಭೆಯನ್ನು ಸತ್ಯನಾರಾಯಣ್ ಕಿ ಕಥಾ, ಕಡಲಾಯಿ ತೇಡ ನಿತ್ಯಾ ನಂದಾ, ಬಂಘೀರಾ ಸಿನಿಮಾಗಳಲ್ಲೂ ಒರೆಗೆ ಹಚ್ಚಿದ್ದಾರೆ. ಕೇವಲ ಸಿನಿಮಾ ಮಾತ್ರವಲ್ಲದೇ ವೆಬ್ ಸೀರಿಸ್ ನಲ್ಲೂ ನಟಿಸಿದ್ದಾರೆ ಮಾದಕ‌ ಚೆಲುವೆ ಅಮೈರಾ. 2021 ರಲ್ಲಿ ರಿಲೀಸ್ ಆಗಿದ್ದ ಸೈಫ್ ಅಲಿಖಾನ್ ಮುಖ್ಯಭೂಮಿಕೆಯಲ್ಲಿರೋ ತಾಂಡವ್ ಸೀರಿಸ್ ನಲ್ಲೂ ಅಮೈರಾ ನಟಿಸಿದ್ದರು.

bollywood-top-actress-amyra-dastur-photo-shoot-in-maldives-beach 3

ವೆಬ್ ಸೀರಿಸ್, ಸಿನಿಮಾದಲ್ಲಿ ಮಾತ್ರವಲ್ಲದೇ ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿರೋ ಅಮೈರಾ, ಇನ್ ಸ್ಟಾಗ್ರಾಂ ಒಂದರಲ್ಲೇ ಬರೋಬ್ಬರಿ 2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

bollywood-top-actress-amyra-dastur-photo-shoot-in-maldives-beach 4

ಮಹಾರಾಷ್ಟ್ರದ ಮುಂಬೈ ಮೂಲದ ಅಮೈರಾ ದಸ್ತೂರ್ ಮಾಡೆಲಿಂಗ್ ಮೂಲಕ ಎಂಟ್ರಿಕೊಟ್ಟು ಬಳಿಕ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ನಲ್ಲಿ‌ಗುರುತಿಸಿಕೊಂಡಿದ್ದಾರೆ. ಕುಂಗ್ ಪು ಯೋಗಾ ಎಂಬ ಇಂಟರ್ ನ್ಯಾಶನಲ್ ಪ್ರಾಜೆಕ್ಟ್ ಜೊತೆ ಎಂಟ್ರಿಕೊಟ್ಟ ಅಮೈರಾ ಜಾಕಿಚಾನ್ ಜೊತೆ ನಟಿಸಿದ್ದಾರೆ.

ಸದ್ಯ ಅಮೈರಾ, ಡೋಂಗ್ರಿ ಟೋ ದುಬೈ ಎಂಬ ಹಿಂದಿ ವೆಬ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆ ಅಮೈರಾ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಬ್ಯುಸಿಯಾಗೋ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡುತ್ತಲೇ ಇರುತ್ತಾರೆ.

ಇದನ್ನೂ ಓದಿ :‌ ಪ್ಲಾಸ್ಟಿಕ್ ಕವರ್ ಅಲ್ಲಿ ಮಾನ ಮುಚ್ಚಿಕೊಂಡ್ರಾ ! ಊರ್ಫಿ ಜಾವೇದ್ ಗೆ ಮತ್ತೆ ಟ್ರೋಲ್ ಕಾಟ

ಇದನ್ನೂ ಓದಿ : ಹನಿಮೂನ್ ನಲ್ಲೂ ಹಾಟ್ ಪೋಟೋಸ್ : ಮೌನಿ ರಾಯ್ ಬಿಕನಿ ಅವತಾರಕ್ಕೆ ಅಭಿಮಾನಿಗಳ ಫಿದಾ

( Bollywood Top Actress Amyra Dastur photo shoot in Maldives Beach)

Comments are closed.