Harsha murder case : ಶಿವಮೊಗ್ಗ ಹರ್ಷ ಕೊಲೆ ಪ್ರಕರಣ : ವರದಿ ಕೇಳಿದ ಬಿಜೆಪಿ ಹೈಕಮಾಂಡ್

ರಾಜ್ಯದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ತವರು ಹಾಗೂ ಬಿಜೆಪಿಯ ಗಟ್ಟಿ ನೆಲ ಎನ್ನಿಸಿಕೊಂಡಿರೋ ಶಿವಮೊಗ್ಗದಲ್ಲೇ ನಡೆದ ಹಿಂದೂಪರ ಸಂಘಟನೆಯ (Bajarangadal Activist) ಕಾರ್ಯಕರ್ತ ಹರ್ಷ ಹತ್ಯೆ (Harsha murder case) ನೊರೆಂಟು ಚರ್ಚೆಯನ್ನು ಹುಟ್ಟುಹಾಕಿದೆ. ಅದರಲ್ಲೂ ಈ ಕೃತ್ಯದ ಕಾರಣಕ್ಕಾಗಿ ಅನ್ಯಕೋಮಿನವರನ್ನು ಬಂಧಿಸಿದ ಮೇಲಂತೂ ಪ್ರಕರಣ ಇನ್ನಷ್ಟು ಮಹತ್ವ ಪಡೆದುಕೊಂಡಿದೆ. ಈ ಮಧ್ಯೆ ಮುಂಬರುವ ಚುನಾವಣೆಯ ದೃಷ್ಟಿಯಿಂದಲೂ ಈ ಹತ್ಯೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿರೋದರಿಂದ ಬಿಜೆಪಿ ಹೈಕಮಾಂಡ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ವರದಿ ಕೇಳಿದೆ.

ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದೆ. ಹೀಗಿರುವಾಗಲೇ ಶಿವಮೊಗ್ಗದಲ್ಲಿ ನಡೆದ ಹಿಂದೂಪರ ಸಂಘಟನೆಯ ಕಾರ್ಯಕರ್ತನ ಹತ್ಯೆ ಬಿಜೆಪಿಗೆ ತೀವ್ರ ಮುಜುಗರ ತಂದಿದೆ. ಹೀಗಾಗಿ ಈ ಕೊಲೆಯ ಹಿಂದಿನ ಕಾರಣ, ಘಟನೆಯ ವಿವರ ಎಲ್ಲವನ್ನು ತಿಳಿಯ ಬಯಸಿರುವ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿಯಿಂದ ವರದಿ ಕೇಳಿದೆ. ಹೈಕಮಾಂಡ್ ವರದಿ ಕೇಳಿರೋ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಕ್ಟಿವ್ ಆಗಿದ್ದು ಗೃಹ ಸಚಿವ ಆರಗ ಜ್ಞಾನೇಂದ್ರ್ ಸಹಾಯದಿಂದ ಸಮಗ್ರ ವರದಿಯನ್ನು ಹೈಕಮಾಂಡ್ ಮುಂದಿಡಲು ಸಜ್ಜಾಗಿದ್ದಾರಂತೆ.

ಹರ್ಷ (Harsha murder case) ಹಿಂದೂಪರ ಸಂಘಟನೆಯ ಕಾರ್ಯಕರ್ತನಾಗಿದ್ದ. ಅಲ್ಲದೇ ಕೇಸರಿ ಶಾಲಿನ ಜೊತೆಯೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದ. ಸದಾ ಹಿಂದೂತ್ವಕ್ಕಾಗಿ ತುಡಿಯುತ್ತಿದ್ದ ಅವನ ಮೇಲಿದ್ದ ಪೊಲೀಸ್ ಪ್ರಕರಣಗಳು ಕೂಡಾ ಅವನು ಹಿಂದೂ ಪರ ಕಾರ್ಯಗಳನ್ನು ಮಾಡಲು ಹೋದಾಗ ಬಿದ್ದಂತವೇ ಆಗಿದ್ದವು.ಇಂಥ ಹಿಂದೂಪರ ಕಾರ್ಯಕರ್ತನ ಸಾವು ಬಿಜೆಪಿಗೆ ನೊರೆಂಟು ಆಯಾಮಗಳಲ್ಲಿ ಕಂಟಕವಾಗಲಿದೆ. ಇನ್ನೇನು ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿರೋ ರಾಜ್ಯದಲ್ಲಿ ಪ್ರಬಲ ಪ್ರತಿಪಕ್ಷವಾಗಿರೋ ಕಾಂಗ್ರೆಸ್ ಇದನ್ನೇ ಅಸ್ತ್ರವಾಗಿ ಬಳಸೋದರಲ್ಲಿ ಅನುಮಾನವಿಲ್ಲ. ಹೀಗಾಗಿ ಈ ಬಗ್ಗೆ ಬಿಜೆಪಿ ಹೈಕಮಾಂಡ್ ವರದಿ ಕೇಳಿದೆ. ಹತ್ಯೆ ಹೇಗಾಯ್ತು, ಹತ್ಯೆಗೆ ನಿಜವಾದ ಕಾರಣ ಏನು? ಹತ್ಯೆಕೋರರು ಯಾರು? ಅವರ ಹಿನ್ನೆಲೆ ಏನು? ಅವರ ಮೇಲಿರುವ ಪ್ರಕರಣಗಳು ಯಾವ ಸ್ವರೂಪದ್ದು? ಹತ್ಯೆ ಮಾಡಿದ ಆರೋಪಿಗಳು ಯಾವುದಾದರೂ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದಾರಾ? ಹೀಗೆ ಸಮಗ್ರವಾದ ವರದಿಯನ್ನು ಹೈಕಮಾಂಡ್ ಕೇಳಿದೆ.

ರಾಜ್ಯ ಬಿಜೆಪಿ ಗೆ ಹೈಕಮಾಂಡ್ ವರದಿ‌ ಕೇಳಿರೋದೇ ಒಂದೆಡೆ ಮುಜುಗರ ಕಾರಣವಾಗಿದ್ದರೇ ಇನ್ನೊಂದೆಡೆ ವರದಿ ಸಲ್ಲಿಕೆ ಬಳಿಕ ಕೆಂಗಣ್ಣಿಗೆ ಗುರಿಯಾಗೋ ಅತಂಕವೂ ಕಾಡುತ್ತಿದೆ. ಹೀಗಾಗಿ ಹೈಕಮಾಂಡ್ ಆಣತಿ ಮೇರೆಗೆ ನಳಿನ್ ಕುಮಾರ್ ಕಟೀಲ್ ಸಮಗ್ರ ವರದಿ ಸಲ್ಲಿಸಲಿದ್ದಾರಂತೆ. ವರದಿಯನ್ನು ರಾಷ್ಟ್ರಾಧ್ಯಕ್ಷ ನಡ್ಡಾ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಪರಿಶೀಲಿಸಲನೆ ನಡೆಸಲಿದ್ದಾರಂತೆ. ಒಟ್ಟಿನಲ್ಲಿ ರಾಜ್ಯ ಸರ್ಕಾರದ ಪಾಲಿಗೆ ಹರ್ಷ ಮರ್ಡರ್ ಕೇಸ್ ಎಲ್ಲ ರೀತಿಯಲ್ಲೂ ಮುಜುಗರ ಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಶಿವಮೊಗ್ಗ ಹರ್ಷ ಕೊಲೆ ಪ್ರಕರಣ : ಆರೋಪಿಗಳಿಗೆ 11 ದಿನ ಪೊಲೀಸ್ ಕಸ್ಟಡಿ

ಇದನ್ನೂ ಓದಿ : ಬಿಎಂಟಿಸಿ ಬಸ್ ನಲ್ಲಿ ಬೆಂಕಿ ಪ್ರಕರಣ : ತನಿಖೆಯಲ್ಲಿ ಬಯಲಾಯ್ತು ಅಸಲಿ ಕಾರಣ

BJP high command has asked for a report on the Bajarangadal Activist Harsha murder case in Shimogga

Comments are closed.