Dogs ban in Cubbon Park : ಜುಲೈ 1 ರಿಂದ ಸಾಕುನಾಯಿಗಳಿಗೆ ಕಬ್ಬನ್ ಪಾರ್ಕ್ ಗೆ ನೋ ಎಂಟ್ರಿ : ಆದೇಶವನ್ನು ವಿರೋಧಿಸಿದ ಐಂದ್ರಿತಾ ರೇ

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಿನ ವಾಕಿಂಗ್ ಪ್ರಿಯರ ಸ್ವರ್ಗ ಅಂದ್ರೇ ಅದು ಕಬ್ಬನ್ ಪಾರ್ಕ್. ಆದರೆ ಇತ್ತೀಚಿಗೆ ಈ ವಾಕಿಂಗ್ ಪ್ರಿಯರ ಸ್ವರ್ಗದಲ್ಲಿ ಸಾಕು ನಾಯಿಗಳ ಕಾಟವೇ ಹೆಚ್ಚಾಗಿತ್ತು. ಇದರಿಂದ ನಿಜವಾಗಿ ವಾಕಿಂಗ್ ಮಾಡೋರು ಸಂಕಷ್ಟಕ್ಕೊಳಗಾಗಿದ್ದರು. ಇದರ ವಿರುದ್ಧ ಬೆಂಗಳೂರಿನ ನಡಿಗೆದಾರರ ಸಂಘ ಆಕ್ಷೇಪ ವ್ಯಕ್ತಪಡಿಸಿತ್ತು. ಇದೆಲ್ಲದರ ಫಲವಾಗಿ ಜುಲೈ 1 ರಿಂದ ಕಬ್ಬನ್ ಪಾರ್ಕ್ ನಲ್ಲಿ ನಾಯಿಗಳ ಪ್ರವೇಶಕ್ಕೆ ನಿಷೇಧ (Dogs ban in Cubbon Park) ಹೇರಲಾಗಿದೆ. ಆದರೆ ಇದಕ್ಕೆ ಸ್ಯಾಂಡಲ್ ವುಡ್ ನಟಿ ಐಂದ್ರಿತಾ ರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ವಾಕಿಂಗ್ ಗೆ ಬರುವವರು ಸಾಕು‌ನಾಯಿಗಳನ್ನು ತರುವಂತಿಲ್ಲ ಎಂದು ತೋಟಗಾರಿಕಾ ಇಲಾಖೆ ಆದೇಶ ಹೊರಡಿಸಿದೆ. ಜುಲೈ 1 ರಿಂದ ಈ ಆದೇಶ ಜಾರಿಗೆ ಬರಲಿದೆ. ಕಬ್ಬನ್ ಪಾರ್ಕ್ ಸ್ವಚ್ಛತೆ ಹಾಗೂ ವಾಕಿಂಗ್ ಮಾಡುವ ಜನರ ಹಿತದ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ. ಆದರೆ ಈಗ ಈ ಆದೇಶಕ್ಕೆ ಸ್ಯಾಂಡಲ್ ವುಡ್ ನಟಿ ಐಂದ್ರಿತಾ ರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರೋ ಐಂದ್ರಿತಾ ರೇ, ಸಾಕು ನಾಯಿಗಳು ಕಬ್ಬನ್ ಪಾರ್ಕ್ ನ್ನು ಹೊಲಸು ಮಾಡುತ್ತವೆ ಎಂಬ ಕಾರಣಕ್ಕೆ ಬ್ಯಾನ್ ಮಾಡುವ ನಿರ್ಧಾರ ಮಾಡಿದ್ದೀರಿ. ಪ್ರಜ್ಞಾವಂತ ನಾಗರಿಕರು ಯಾವತ್ತೂ ಕಬ್ಬನ್ ಪಾರ್ಕ್ ನ್ನು ಹಾಳು ಮಾಡುವುದಕ್ಕೆ ಬಿಡುವುದಿಲ್ಲ. ಅವರಿಗೂ ಕಬ್ಬನ್ ಪಾರ್ಕ್ ಅನ್ನು ಶುಚಿಯಾಗಿಡುವ ಮನಸ್ಸಿದೆ. ನಾಯಿಗಳನ್ನು ಬ್ಯಾನ್ ಮಾಡುವ ಮೂಲಕ ಅವುಗಳ ಹಕ್ಕನ್ನು ಕಸಿಯಬೇಡಿ. ಆದೇಶವನ್ನು ದಯವಿಟ್ಟು ತೋಟಗಾರಿಕಾ ಇಲಾಖೆ ಮರು ಪರಿಶೀಲಿಸಲಿ ಎಂದು ಐಂದ್ರಿತಾ ರೇ ಮನವಿ ಮಾಡಿದ್ದಾರೆ.

ಇನ್ನೂ ಐಂದ್ರಿತಾ ರೇ ಈ ಮನವಿಗೆ ಸಾಕಷ್ಟು ಬೆಂಬಲ ವ್ಯಕ್ತವಾಗಿದ್ದು, ಬಹುತೇಕರು ನಾಯಿಗೆ ವಿಧಿಸಿರುವ ನಿಷೇಧವನ್ನು ತೆರವುಗೊಳಿಸುವಂತೆ ತೋಟಗಾರಿಕಾ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಐಂದ್ರಿತಾ ರೇ ಈ ಹಿಂದೆಯೂ ಸಾಕಷ್ಟು ಭಾರಿ ಸಾಕುನಾಯಿ ಹಾಗೂ ಬೀದಿ ನಾಯಿಗಳ ಪರ ಹೋರಾಟ ನಡೆಸಿದ್ದರು. ಆದರೆ ತೋಟಗಾರಿಕಾ ಇಲಾಖೆಯ ಈ ಆದೇಶವನ್ನು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ಸ್ವಾಗತಿಸಿದೆ. ನಾಯಿಗಳು ಕಬ್ಬನ್ ಪಾರ್ಕ್ ಒಳಕ್ಕೆ ಬಂದು ಪಾರ್ಕ್ ನ್ನು ಟಾಯ್ಲೆಟ್ ನಂತೆ ಬಳಸುತ್ತಿದ್ದವು. ಈ ಆದೇಶದಿಂದ ಕಡಿವಾಣ ಬೀಳಲಿದೆ ಎಂದು ಸ್ವಾಗತಿಸಿದ್ದಾರೆ.

ಇದನ್ನೂ ಓದಿ : Rashmika Mandanna Controversy : ನಾಯಿಗೂ ಫ್ಲೈಟ್ ಟಿಕೇಟ್ ಬುಕ್ ಮಾಡಿ : ರಶ್ಮಿಕಾ ಸುತ್ತ ಹೊಸತೊಂದು ವಿವಾದ

ಇದನ್ನೂ ಓದಿ : Yash 100 crore offer : ಕೆಜಿಎಫ್‌ 2 ಸೂಪರ್‌ ಸಕ್ಸಸ್‌ : ಯಶ್ ಗೆ 100 ಕೋಟಿ ರೂಪಾಯಿ ಸಂಭಾವನೆ ಆಫರ್‌ ಕೊಟ್ಟ ನಿರ್ಮಾಪಕ ದಿಲ್ ರಾಜು

ಇದನ್ನೂ ಓದಿ : Garbage Problem : ಸಿಲಿಕಾನ್ ಸಿಟಿಗೆ ಕಾದಿದೆ ಕಸದ ಶಾಕ್: ಜುಲೈ 1 ರಿಂದ ಮುಷ್ಕರಕ್ಕೆ ಸಜ್ಜಾಗ್ತಿದ್ದಾರೆ ಪೌರ ಕಾರ್ಮಿಕರು

Dogs ban in Cubbon Park from july 1st, Actress Aindrita Ray who opposed the order

Comments are closed.