Dhruva Sarja : ಮಗಳು ಹುಟ್ಟಿದ ಬೆನ್ನಲ್ಲೇ ಅಣ್ಣ ಚಿರು ಸರ್ಜಾ, ಅಜ್ಜಿಯನ್ನು ನೆನೆದ ಧ್ರುವ ಸರ್ಜಾ

ಸ್ಯಾಂಡಲ್‌ವುಡ್‌ನ ಆಕ್ಷನ್‌ ಫ್ರಿನ್ಸ್‌ (Dhruva Sarja) ಧ್ರುವ ಸರ್ಜಾರವರು ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಸರ್ಜಾ ಕುಟುಂಬದಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಪುಟ್ಟ ಲಕ್ಷ್ಮೀಯ ಆಗಮನದಿಂದ ಸಂತೋಷದ ವಾತಾವರಣ ಸೃಷ್ಟಿಯಾಗಿದೆ. ಧ್ರುವ ಸರ್ಜಾರವರ ಧರ್ಮಪತ್ನಿ ಪ್ರೇರಣಾ ಶಂಕರ್‌, ನಿನ್ನೆ ಹೆರಿಗೆ ನೋವಿನಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಕ್ಟೋಬರ್‌ 2 ರಂದು ಭಾನುವಾರ ಪ್ರೇರಣಾ ಶಂಕರ್‌ ನಾರ್ಮಲ್‌ ಡೆಲಿವರಿಯ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಧ್ರುವ ಸರ್ಜಾ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಂತಹ ಖುಷಿ ಸಂದರ್ಭದಲ್ಲಿ(Dhruva Sarja) ಧ್ರುವ ಸರ್ಜಾರವರಿಗೆ ನೋವೊಂದು ಕಾಡಿದೆ. ಅದು ಬೇರನೂ ಅಲ್ಲ ಅಣ್ಣ ಚಿರಂಜೀವಿ (Dhruva Sarja Chiru Sarja) ಇಲ್ಲದೇ ಇರುವುದು. ಹೌದು, ಇಂತಹ ಖುಷಿ ಸಂದರ್ಭದಲ್ಲಿ ನಾನು ಅಣ್ಣ ಹಾಗೂ ಅಜ್ಜಿಯನ್ನು ಬಹಳ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎಂದು ಮನಸ್ಸಿನ ನೋವನ್ನು ಹೊರಹಾಕಿದ್ದಾರೆ.

ನಾನು ಬಯಸಿದಂತೆ ನಮಗೆ ಹೆಣ್ಣು ಮಗು ಆಗಿದೆ. ಇದು ನಮಗೆ ಬಹಳ ಸಂತೋಷದ ವಿಚಾರವಾಗಿದೆ. ಆದರೆ ಈ ಸಂದರ್ಭದಲ್ಲಿ ನಮ್ಮ ಅಣ್ಣ ಹಾಗೂ ಅಜ್ಜಿ ಇಲ್ಲದಿರುವುದು ದುಃಖದ ಸಂಗತಿಯಾಗಿದೆ. ಇಬ್ಬರನ್ನೂ ನಾನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎಂದು ಧ್ರುವ ಸರ್ಜಾ ಖುಷಿಯ ನಡುವೆಯೂ ಅವರಿಬ್ಬರನ್ನು ನೆನೆಸಿಕೊಂಡಿದ್ದಾರೆ.

ಇನ್ನೂ ಧ್ರುವ ಸರ್ಜಾ ತಮ್ಮ ಹೆಣ್ಣು ಮಗುವಿನ ಆಗಮನದ ಬಗ್ಗೆ ಮಾತನಾಡಿದ ಅವರು “ನನಗೆ ತುಂಬಾ ಖುಷಿ ಆಗಿದೆ. ಈ ಸಂದರ್ಭದಲ್ಲಿ ಒಂದು ಮಾತು ಹೇಳಲು ಇಷ್ಟಪಡುತ್ತೇನೆ. ಸಹಜವಾಗಿಯೇ ಹುಡುಗಿಯರು ಎಂದರೆ ನನ್ನ ಮನದಲ್ಲಿ ಗೌರವ ಇದೆ. ಇಂದು ಎಲ್ಲಾ ಪ್ರಕ್ರಿಯೆಗಳನ್ನು ನೋಡಿದ ಮೇಲೆ ಆ ಮರ್ಯಾದೆ ಸ್ಪಲ್ಪ ಜಾಸ್ತಿ ಆಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಸರ್ಜಾ ಮನೆಗೆ ಮಹಾಲಕ್ಷ್ಮಿ: ಹೆಣ್ಣುಮಗುವಿಗೆ ಜನ್ಮನೀಡಿದ ಧ್ರುವ ಸರ್ಜಾ ಪತ್ನಿ ಪ್ರೇರಣಾ

ಇದನ್ನೂ ಓದಿ : ರಾಯನ್ ಸರ್ಜಾನೇ ನಮ್ಮ ಮನೆ ಮಗ : ನನಗೆ ಮಗ ಬೇಡ ಎಂದ ಧ್ರುವಸರ್ಜಾ

“ಎಲ್ಲರ ಜೀವನದಲ್ಲೂ ಏಳು-ಬೀಳು ಸಾಮಾನ್ಯವಾಗಿ ಇರುತ್ತದೆ. ಅದೇ ರೀತಿ ನಮ್ಮಲ್ಲೂ ಇತ್ತು. ಸಾಕಷ್ಟು ದಂಪತಿಗಳಿಗೆ ಗರ್ಭಪಾತ ಆಗಿರುತ್ತದೆ. ಅದರ ಬಗ್ಗೆ ಕೆಲವರು ಹೇಳಿಕೊಂಡಿರುತ್ತಾರೆ, ಇನ್ನೂ ಕೆಲವರು ಹೇಳಿಕೊಳ್ಳುವುದಿಲ್ಲ. ಹಾಗಾಗಿ ಹೆಣ್ಣುಮಕ್ಕಳು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ ಅಂತ ನಾನು ಮನವಿ ಮಾಡಿಕೊಳ್ಳತ್ತೇನೆ ಇದಕ್ಕೆ ನಾವೇ ಉದಾಹರಣೆ ಅದರ ಬಗ್ಗೆ ಈಗ ಮಾತನಾಡೋದು ಬೇಡ. ಸದ್ಯಕ್ಕೆ ನಾವು ಖುಷಿಯಾಗಿದ್ದೇವೆ. ವೈದ್ಯರಿಗೆ ಧನ್ಯವಾದ” ಎಂದು ಧ್ರುವ ಸರ್ಜಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : Meghana Raj Sarja good news : ಕ್ಯಾಲಿಫೋರ್ನಿಯಾದಲ್ಲಿ ಮೇಘನಾ ರಾಜ್‌ ಸರ್ಜಾ : ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ ಕುಟ್ಟಿಮಾ

ಎಲ್ಲರ ಆಶೀರ್ವಾದ ನಮ್ಮ ಮಗುವಿನ ಮೇಲು ಇರಲಿ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ನಾನು ಅಣ್ಣ ಹಾಗೂ ಅಜ್ಜಿಯನ್ನು ಬಹಳ ಮಿಸ್‌ ಮಾಡಿಕೊಳ್ಳುತ್ತೇನೆ. ಹಾಗೆ ಅಂಕಲ್‌ ಅರ್ಜುನ್‌ ಸರ್ಜಾ ಬರುತ್ತಾರೆ ಎಂದು ಹೇಳಿದ್ದಾರೆ. 2019ರಲ್ಲಿ ಧ್ರುವ ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಅವರನ್ನು ವಿವಾಹವಾದರು. ಇಂದು ಅವರಿಗೆ ಮೊದಲ ಮಗುವಾಗಿದೆ. ಈ ಸಂದರ್ಭದಲ್ಲಿ ಸ್ಯಾಂಡಲ್‌ ಚಿತ್ರರಂಗದಿಂದ ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್‌ಗೆ ಶುಭ ಹಾರೈಸಿದ್ದಾರೆ. ಕನ್ನಡ ಚಿತ್ರರಂಗದ ಬಹುಬೇಡಿಕೆ ನಟರಲ್ಲಿ ಒಬ್ಬರಾದ ಧ್ರುವ ಸರ್ಜಾ “ಪೊಗರು” ಸಿನಿಮಾದ ನಂತರ “ಮ್ಯಾರ್ಟಿನ್‌” ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಈ ಸಿನಿಮಾದ ಬಗ್ಗೆ ಸಿನಿಪ್ರೇಕ್ಷಕರು ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

Brother Chiru Sarja, Dhruva Sarja who remembered her grandmother soon after the birth of her daughter

Comments are closed.