Mushroom Biryani Recipe : ನೀವು ಸಸ್ಯಹಾರಿಗಳೇ ? ಬಿರಿಯಾನಿ ತಿನ್ನಲು ಆಸೆಯೇ ? ಮನೆಯಲ್ಲೇ ಮಾಡಿ ಮಶ್ರೂಮ್‌ ಬಿರಿಯಾನಿ

ಮಶ್ರೂಮ್‌.. ಸಸ್ಯಹಾರಿಗಳೇ ಇರಲಿ, ಮಾಂಸಹಾರಿಗಳೇ ಇರಲಿ. ಇಬ್ಬರಿಗೂ ಕೂಡ ಮಶ್ರೂಮ್‌(Mushroom Biryani Recipe) ನಿಂದ ಮಾಡಿದ ಆಹಾರಗಳು ಇಷ್ಟವಾಗುತ್ತವೆ ಇನ್ನು ಆರೋಗ್ಯದ ದೃಷ್ಟಿಯಿಂದಲೂ ಮಶ್ರೂಮ್‌(Mushroom ) ಆರೋಗ್ಯಕರ ಆಹಾರ. ಬಿರಿಯಾನಿಯನ್ನು ಚಿಕನ್‌, ಮಟನ್‌, ಎಗ್‌ ಬಳಸಿ ಮಾಡೋದು ಮಾಮೂಲು. ಅದ್ರೆ ಎಂದಾದ್ರೂ ಮಶ್ರೂಮ್‌ ಬಿರಿಯಾನಿಯನ್ನು ತಿಂದಿದ್ದೀರಾ. ಒಂದು ಬಾರಿ ಮಶ್ರೂಮ್‌ ಬಿರಿಯಾನಿ ತಿಂದ್ರೆ ನೀವು ಬಾಯಿ ಚಪ್ಪರಿಸೋದು ಗ್ಯಾರಂಟಿ. ಮನೆಯಲ್ಲಿಯೇ ರುಚಿರುಚಿಯಾದ ಮಶ್ರೂಮ್‌ ಬಿರಿಯಾನಿ ತಯಾರಿಸೋ ರೆಸಿಪಿಯನ್ನು ನಾವು ಹೇಳ್ತೀವಿ ಕೇಳಿ.

ಮಶ್ರೂಮ್‌ ಬಿರಿಯಾನಿ(Mushroom Biryani Recipe) ತಯಾರಿಸೋದು ಹೇಗೆ ?

ಮಶ್ರೂಮ್‌ ಪೋಷಕಾಂಶಗಳ ಶಕ್ತಿಕೇಂದ್ರ. ಅಷ್ಟೇ ಅಲ್ಲಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅನೇಕ ಪೋಷಕಾಂಶಗಳು ಇದರಲ್ಲಿವೆ. ಇದರಿಂದ ಫ್ರೈಡ್‌ ರೈಸ್‌, ಪಲಾವ್‌ ಹಾಗೂ ರುಚಿಯಾದ ಬಿರಿಯಾನಿ ಯನ್ನು ತಯಾರಿಸುತ್ತಾರೆ. ಸುಲಭವಾಗಿ ಮಶ್ರೂಮ್‌ ಬಿರಿಯಾನಿಯನ್ನು ಬಟನ್‌ ಮಶ್ರೂಮ್‌ ಹಾಗೂ ಮಸಾಲೆಗಳನ್ನು ಸೇರಿಸಿ ರುಚಿಯಾಗಿ ಮಾಡಬಹುದಾಗಿದೆ.

ಮಶ್ರೂಮ್‌ ಬಿರಿಯಾನಿ ತಯಾರಿಸಲು ಬೇಕಾದ ಸಾಮಾಗ್ರಿಗಳು :

  • 2 ಲೋಟ ನೆನೆಸಿದ ಬಾಸುಮತಿ ಅಕ್ಕಿ
  • ಗರಂ ಮಸಾಲ
  • 2 ಚಮಚ ಎಣ್ಣೆ / ತುಪ್ಪ
  • ಈರುಳ್ಳಿ 1
  • 2 ಹಸಿಮೆಣಸು
  • ಒಂದೂವರೆ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್‌
  • ಟೊಮಟೊ ಅರ್ಧ ಕಪ್‌
  • ಚಿಟಿಕೆ ಅರಿಶಿನ
  • ಮಶ್ರೂಮ್‌
  • ಅರ್ಧ ಚಮಚ ಮೆಣಸಿನ ಹುಡಿ
  • ಪುದೀನ
  • ಬಿರಿಯಾನಿ ಮಸಾಲ
  • ಮೊಸರು
  • ಉಪ್ಪು
  • ಕೊತ್ತಂಬರಿ ಸೊಪ್ಪು

ಇದನ್ನೂ ಓದಿ : banana shawige :ಥಟ್​ ಅಂತಾ ರೆಡಿಯಾಗುತ್ತೆ ಬಾಳೆಹಣ್ಣಿನ ಶ್ಯಾವಿಗೆ

ಇದನ್ನೂ ಓದಿ : Sabbakki Paddu : ಉಪವಾಸದ ದಿನದಂದು ಮನೆಯಲ್ಲೇ ಮಾಡಿ ಸಬ್ಬಕ್ಕಿ ಪಡ್ಡು

ಇದನ್ನೂ ಓದಿ : Chicken Kabab : ಮನೆಯಲ್ಲೇ ಮಾಡಿ ಹೋಟೆಲ್‌ಸ್ಟೈಲ್‌ ಗರಿಗರಿ ಚಿಕನ್‌ ಕಬಾಬ್‌

ತಯಾರಿಸುವ ವಿಧಾನ :

  1. ಮೊದಲು 2 ಲೋಟ ಬಾಸುಮತಿ ಅಕ್ಕಿಯನ್ನು ಅರ್ಧ ಗಂಟೆ ನೆನೆಸಿಡಬೇಕು. ಈ ಬಿರಿಯಾನಿಯಲ್ಲಿ ನಾವು ಬಳಸುವ ಮಸಾಲೆಗಳಿಂದ ರುಚಿ ಮತ್ತು ಸುವಾಸನೆಯನ್ನು ಕೊಡುತ್ತದೆ. ಹೀಗಾಗಿ ಮಸಾಲೆ ಸಿದ್ದಪಡಿಸುವಾಗಿ ಎಚ್ಚರಿಕೆ ವಹಿಸಬೇಕು.
  2. ನಂತರ ಒಂದು ಪಾತ್ರೆಯನ್ನು ಬಿಸಿ ಮಾಡಿ ಬಿಸಿಯಾದ ನಂತರ ಪಾತ್ರೆಗೆ ಎಣ್ಣೆ ಅಥವಾ ತುಪ್ಪ ಹಾಕಿ ಎಣ್ಣೆಕಾಯುವವರೆಗೂ ಕಾಯಬೇಕು . ಎಣ್ಣೆ ಕಾದ ನಂತರ ಒಂದು ಪಲಾವ್‌ ಎಲೆ , ಜೀರಿಗೆ ಅರ್ಧ ಚಮಚ , ಎರಡು ಏಲಕ್ಕಿ , ಎರಡು ತುಂಡು ಚಕ್ಕೆ ಮತ್ತು 4 ಲವಂಗ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು.
  3. ಮಧ್ಯಮ ಗಾತ್ರದ ಒಂದು ಈರುಳ್ಳಿಯನ್ನು ಉದ್ದವಾಗಿ ಕತ್ತರಿಸಿ ಹಾಗೂ ಎರಡು ಕತ್ತರಿಸಿದ ಹಸಿಮೆಣಸನ್ನು ಸೇರಿಸಿ ಈರುಳ್ಳಿ ಕಂದು ಬಣ್ಣ ಬರುವವರೆಗೂ ಹುರಿಯಬೇಕು.
  4. ಹುರಿದ ನಂತರ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಅನ್ನು ಸೇರಿಸಿ ಚೆನ್ನಾಗಿ ಹುರಿಯಬೇಕು.
  5. ಹಸಿವಾಸನೆ ಹೋಗುವವರೆಗು 2 ನಿಮಿಷ ಚೆನ್ನಾಗಿ ಹುರಿದ ನಂತರ ಅರ್ಧ ಕಪ್‌ ಟೊಮಟೊ ಅನ್ನು ಸೇರಿಸಿ, ಅರ್ಧ ಚಮಚ ಉಪ್ಪು ಮತ್ತು ಚಿಟಿಕೆ ಅರಿಶಿನ ಸೇರಿಸಿ ಟೊಮಟೊ ಮೆದುವಾಗುವವರೆಗೂ ಕಲಕಿ.
  6. ಅರ್ಧ ಚಮಚ ಮೆಣಸಿನ ಹುಡಿ, 3 ದೊಡ್ಡ ಚಮಚ ಸಣ್ಣದಾಗಿ ಕತ್ತರಿಸಿದ ಪುದೀನ ಹಾಗೂ ಬಿರಿಯಾನಿ ಮಸಾಲೆ ಸೇರಿಸಿ 2 ನಿಮಿಷ ಚೆನ್ನಾಗಿ ಮಗುಚಿ .
  7. ಬೆಂಕಿಯನ್ನು ಸಣ್ಣ ಉರಿಯಲ್ಲಿ ಇಟ್ಟು ಪಾತ್ರೆಗೆ 6 ದೊಡ್ಡ ಚಮಚ ಮೊಸರನ್ನು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಿ ( ಮೊಸರಿನ ಬದಲಿಗೆ ತೆಂಗಿನಕಾಯಿ ಹಾಲನ್ನು ಕೂಡ ಸೇರಿಸಬಹುದು ).
  8. ತಯಾರಾದ ಮಸಾಲೆಗೆ ಸೀಳಿಕೊಂಡ ಮಶ್ರೂಮ್‌ ಅನ್ನು ಸೇರಿಸಿ 2 ರಿಂದ 3 ನಿಮಿಷ ಬೇಯಿಸಿಕೊಳ್ಳಿ .
  9. ಮಶ್ರೂಮ್‌ ಬೆಂದ ನಂತರ ಅರ್ಧ ಗಂಟೆ ನೆನೆಸಿಟ್ಟ ಅಕ್ಕಿಯನ್ನು ಹಾಕಿ ಸಾಕಾಗುವಷ್ಟು ನೀರನ್ನು ಸೆರಿಸಿ , ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಮಿಶ್ರಣವನ್ನು ಚೆನ್ನಾಗಿ ಮಗುಚಿ ಪಾತ್ರೆಯನ್ನು ಮುಚ್ಚಿ ಮಧ್ಯಮ ಉರಿಯಲ್ಲಿ ಅನ್ನ ಪೂರ್ತಿಯಾಗಿ ಬೇಯುವವರೆಗೂ ಕಾಯಿರಿ.
  10. ಅನ್ನ ಪೂರ್ತಿಯಾಗಿ ಬೆಂದ ನಂತರ ತಯಾರಾದ ಬಿರಿಯಾನಿಗೆ ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೆರಿಸಿ ಒಂದು ಬಾರಿ ಮಗುಚಿ. ಇದೀಗ ಮಶ್ರೂಮ್‌ ಬಿರಿಯಾನಿ ಸವಿಯಲು ಸಿದ್ದ. ಈ ರೀತಿಯಾಗಿ ಬಿರಿಯಾನಿಯನ್ನು ತಯಾರಿಸಿ ಆಫೀಸ್‌ /ಶಾಲೆಗಳಿಗೆ ಮಧ್ಯಾಹ್ನ ಊಟಕ್ಕೆ ತೆಗೆದುಕೊಂಡು ಹೋಗಬಹುದು.

Are you vegetarian? Do you want to eat biryani? Homemade mushroom biryani

Comments are closed.