Hansika Motwani : ಪ್ರೀ ವೆಡ್ಡಿಂಗ್‌ ಶೂಟಿಂಗ್‌ನಲ್ಲಿ ಬ್ಯುಸಿಯಾದ ಹನ್ಸಿಕಾ ಮೋಟ್ವಾನಿ ಜೋಡಿ

ಅಪ್ಪು ಅಭಿನಯದ ” ಬಿಂದಾಸ್‌” ಸಿನಿಮಾ ಖ್ಯಾತಿಯ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ತಮ್ಮ ಮದುವೆ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಸೌತ್‌ ಇಂಡಿಯಾ ಸ್ಟಾರ್‌ ನಟಿಯರಲ್ಲಿ ಒಬ್ಬರಾದ ಹನ್ಸಿಕಾ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ನಟಿ ಬ್ಯುಸಿನೆಸ್‌ಮ್ಯಾನ್‌ ಸೊಹೈಲ್‌ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸದ್ಯ ಈ ಜೋಡಿ ಪ್ರೀ ವೆಡ್ಡಿಂಗ್‌ ಶೂಟಿಂಗ್‌ನಲ್ಲಿ ತೊಡಗಿದ್ದಾರೆ. ಅದಕ್ಕೆ ಸಂಬಂಧಿಸಿದ ಪೋಟೋಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪೋಟೋಸ್‌ಗಳು ಸಖತ್‌ ವೈರಲ್‌ ಆಗಿದೆ.

ನಟಿ ಹನ್ಸಿಕಾ ಸಿನಿಮಾರಂಗಕ್ಕೆ ಬಾಲನಟಿಯಾಗಿ ಎಂಟ್ರಿ ಕೊಟ್ಟಿದ್ದು, ಬಹುಭಾಷೆಗಳಲ್ಲಿ ನಾಯಕಿಯಾಗಿ ಸಿನಿಪ್ರೇಕ್ಷಕರ ಮನ ಗೆದಿದ್ದಾರೆ. ನಟಿ ಹನ್ಸಿಕಾ ಉದ್ಯಮಿ ಸೊಹೈಲ್‌ ಕಥುರಿಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಡಿಸೆಂಬರ್‌ ಮೊದಲ ವಾರದಲ್ಲಿ ಮದುವೆ ನಡೆಯಲಿದ್ದು, ಇದೀಗ ಪ್ರೀ ವೆಡ್ಡಿಂಗ್‌ ಶೂಟಿಂಗ್‌ನಲ್ಲಿ ಮಿಂಚಿದ್ದಾರೆ.

ಪ್ರೀ ವೆಡ್ಡಿಂಗ್‌ ಶೂಟ್‌ನಲ್ಲಿ ನಟಿ ಹನ್ಸಿಕಾ ಕೆಂಪು ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡರೆ ಸೊಹೈಲ್‌ ಕೆಂಪು ಬಣ್ಣದ ಕೂರ್ತಾದಲ್ಲಿ‌ ಪೋಟೋಗೆ ಪೋಸ್‌ ನೀಡಿದ್ದಾರೆ. ಇತ್ತೀಚಿಗೆಷ್ಟೇ ಉದ್ಯಮಿ ಸೊಹೈಲ್‌ ಪ್ಯಾರಿಸ್‌ನ ಐಫೆಲ್ ಟವರ್‌ನ ಎದರು ಹನ್ಸಿಕಾಗೆ ಪ್ರಪೋಸ್‌ ಮಾಡಿದ್ದರು. ಈ ಕುರಿತು ಹನ್ಸಿಕಾ ಅಧಿಕೃತವಾಗಿ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣದ ಹಂಚಿಕೊಂಡಿದ್ದಾರೆ. ಇವರ ಮದುವೆ ಕಾರ್ಯಕ್ರಮವು ಜೈಪುರದ 450 ವರ್ಷ ಹಳೆಯ ಕಟ್ಟಡದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಡಿಸೆಂಬರ್‌ 2ರಿಂದ ಮದುವೆ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ. ಡಿಸೆಂಬರ್‌ 4ರಂದು ಆಪ್ತರ ಸಮ್ಮುಖದಲ್ಲಿ ಮದುವೆ ಜರುಗಲಿದೆ.

ಇದನ್ನೂ ಓದಿ : Vaishnavi Gowda Engagement: ಎಂಗೇಜ್ ಮೆಂಟ್ ಮಾಡಿಕೊಂಡ್ರಾ ನಟಿ ವೈಷ್ಣವಿ ಗೌಡ..? ವೈರಲ್ ಆದ ಫೋಟೋದ ಅಸಲಿಯತ್ತೇನು..

ಇದನ್ನೂ ಓದಿ : Rishab v/s Rashmika: ‘ಕಿರಿಕ್’ ಬೆಡಗಿ ರಶ್ಮಿಕಾ ಧಿಮಾಕಿಗೆ ಆಕೆ ಸ್ಟೈಲ್ ನಲ್ಲೇ ತಿರುಗೇಟು ನೀಡಿದ ರಿಷಬ್ ಶೆಟ್ಟಿ; ಅಭಿಮಾನಿಗಳು ಫುಲ್ ಖುಷ್..

ಇದನ್ನೂ ಓದಿ : Srikanth Meka: ವಿಚ್ಛೇದನ ವದಂತಿ ತಳ್ಳಿಹಾಕಿದ ತೆಲುಗು ನಟ ಶ್ರೀಕಾಂತ್; ಸುಳ್ಳು ಸುದ್ದಿ ಹರಡಿಸಿದರೆ ಕಾನೂನು ಕ್ರಮದ ಎಚ್ಚರಿಕೆ

ಇದನ್ನೂ ಓದಿ : Varaha Rupam song : ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿಗೆ ಧ್ವನಿಯಾದ ಜರ್ಮನ್‌ ಅಂಧ ಗಾಯಕಿ

ನಟಿ ಹನ್ಸಿಕಾ ಮೋಟ್ವಾನಿ ಹೃತಿಕ್ ರೋಷನ್ ಅವರ ಕೋಯಿ… ಮಿಲ್ ಗಯಾ ಮತ್ತು ಹಿಮೇಶ್ ರೇಶಮಿಯಾ ಅವರ ಆಪ್ ಕಾ ಸುರೂರ್ ಸಿನಿಮಾದ ಮೂಲಕ ಜನಮನ್ನಣೆ ಪಡೆದಿದ್ದಾರೆ. ಹಾಗೆ ದೇಶಮುದುರು, ಕಂಡೀರೀಗ, ಮಸ್ಕ, ಕಂತ್ರಿ, ಅರಣ್ಮನೈ, ವಿಲನ್, ಸಿಂಗಂ 2 ದೇನಿಕೈನ ರೆಡಿ ಮತ್ತು ಉಯಿರೆ ಉಯಿರೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ಹನ್ಸಿಕಾ ಮೋಟ್ವಾನಿ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

Busia’s Hansika Motwani couple in pre-wedding shoot

Comments are closed.