Tata Tigor EV : ಅಪ್ಡೇಟ್‌ ಆಗಿ ಬಿಡುಗಡೆಯಾದ ಕಾಂಪ್ಯಾಕ್ಟ್‌ ಇಲೆಕ್ಟ್ರಿಕ್‌ ಸೆಡಾನ್‌ ಕಾರು ‘ಟಿಗೋರ್‌’

ದೇಶದ ಆಟೋಮೊಬೈಲ್‌ ವಲಯದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್‌ (Tata Motors), ಇಲೆಕ್ಟ್ರಿಕ್‌ ವಾಹನ (EV) ಗಳನ್ನು ಜನಸಾಮಾನ್ಯರಿಗಾಗಿ ಪರಿಚಯಿಸಿದೆ. ಇದು ಪರಿಚಯಿಸಿದ ಟಿಗೋರ್‌ ಇಲೆಕ್ಟ್ರಿಕ್‌ ಕಾರು (Tata Tigor EV) ಕೆಲವೊಂದು ಫೀಚರ್ಸ್‌ ಗಳನ್ನು ಹೊಸದಾಗಿ ಅಳವಡಿಸಿಕೊಂಡು ಮತ್ತೆ ಬಿಡುಗಡೆಗೊಂಡಿದೆ. ಎಲೆಕ್ಟ್ರಿಕ್‌ ಸೆಡಾನ್‌ ಕಾರಾದ ಟಿಗೋರ್‌ EV ಹೊಸ ವೈಶಿಷ್ಟ್ಯಗಳನ್ನು ಪಡೆದುಕೊಂಡು ಈಗ ನವೀಕರಣಗೊಂಡಿದೆ. ಭಾರತದ ಮಾರುಕಟ್ಟೆಯಲ್ಲಿ ನವೀಕರಣಗೊಂಡು ಬಿಡುಗಡೆಯಾದ ಟಿಗೋರ್‌ ಇವಿ ನಾಲ್ಕು ರೂಪಾಂತರಗಳಲ್ಲಿ ಮಾರಾಟವಾಗಲಿದೆ. XE, XT, XZ+ ಮತ್ತು XZ+ ಲಕ್ಸ್. ನೆಕ್ಸಾನ್‌ ಇವಿ ಪ್ರೈಮ್‌ ಕಾರ್‌ನೊಂದಿಗೆ ಮಾಡಿದಂತೆ, ಪ್ರಸ್ತುತ ಇವಿ ಮಾಲೀಕರಿಗೆ ಉಚಿತ ವೆಚ್ಚದ ಸಾಫ್ಟ್‌ವೇರ್‌ ನವೀಕರಣ ಪ್ಯಾಕ್‌ ಅನ್ನು ವಿಸ್ತರಿಸುತ್ತಿದೆ.

ಹೊಸ ಹೊಸ ಟಾಟಾ ಟಿಗೋರ್ EV 315 ಕಿಮೀ ವ್ಯಾಪ್ತಿಯನ್ನು ಕ್ರಮಿಸಬಲ್ಲದು. ಇದು ಲೆಥೆರ್‌ ಸೀಟುಗಳು, ಲೆದರ್ ಅನ್ನು ಸುತ್ತಿದ ಸ್ಟೀರಿಂಗ್ ವೀಲ್, ರೇನ್‌ ಸೆನ್ಸಿಂಗ್ ವೈಪರ್‌ಗಳು, ಆಟೋ ಹೆಡ್‌ಲ್ಯಾಂಪ್‌ಗಳು ಮತ್ತು ಕ್ರೂಸ್ ಕಂಟ್ರೋಲ್‌ನಂತಹ ಹೊಸ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಮಲ್ಟಿ-ಮೋಡ್ ರೀಜೆನ್, ಕನೆಕ್ಟೆಡ್ ಕಾರ್ ಟೆಕ್ನಾಲಜಿ- ಝಡ್‌ಕನೆಕ್ಟ್, ಸ್ಮಾರ್ಟ್‌ವಾಚ್ ಕನೆಕ್ಟಿವಿಟಿ, iTPMS ಮತ್ತು ಟೈರ್ ಪಂಕ್ಚರ್ ರಿಪೇರಿ ಕಿಟ್‌ನಂತಹ ಸ್ಮಾರ್ಟ್ ಸಾಧನಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಇದು ಕಾರು ಚಲಾಯಿಸುವಾಗ ಹೆಚ್ಚಿನ ಟೆಕ್ ಅನುಭವವನ್ನು ನೀಡುತ್ತದೆ.

ಈಗ ನವೀಕರಣಗೊಂಡಿರುವ ಟಾಟಾ ಟಿಗೋರ್‌ EV 55 kW ಗರಿಷ್ಠ ವಿದ್ಯುತ್‌ ಔಟ್‌ಪುಟ್‌ ನೀಡುತ್ತದೆ. 170 Nm ನಷ್ಟು ಗರಿಷ್ಠ ಟಾರ್ಕ್‌ ನೀಡುತ್ತದೆ. 26 kWh ಲಿಕ್ವಿಡ್‌ ಕೂಲ್ಡ್‌, ಹೆಚ್ಚಿನ ಶಕ್ತಿ ಸಾಂದ್ರತೆಯಿರುವ ಬ್ಯಾಟರಿ ಪ್ಯಾಕ್‌ ಹೊಂದಿದೆ. ಹೊಸ ಟಿಗೋರ್‌ ಇವಿ ಸೆಡಾನ್‌ ಕಾರಿನ ಆರಂಭಿಕ ಬೆಲೆ 12.49 ಲಕ್ಷ. ಇದರ ಟಾಪ್‌–ಎಂಡ್‌ ಆವೃತ್ತಿಯ ಬೆಲೆಯು 13.75 ಲಕ್ಷ ಆಗಿದೆ.

ಇದನ್ನೂ ಓದಿ : Safest Cars In India : 5 ಸ್ಟಾರ್‌ ರೇಟಿಂಗ್‌ ಪಡೆದಿರುವ 5 ಸುರಕ್ಷಿತ ಕಾರುಗಳು

ಇದನ್ನೂ ಓದಿ : PMV EaS-E : ಜಸ್ಟ್‌ 4.79 ಲಕ್ಷಕ್ಕೆ ಕಾರು! ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾದ ಪಿಎಮ್‌ವಿಯ ಕ್ಯಾಂಪ್ಯಾಕ್ಟ್‌ ಇಲೆಕ್ಟ್ರಿಕ್‌ ಕಾರ್‌ EaS-E

(Tata Tigor EV the compact electric car sedan tigor now updated, know the new features)

Comments are closed.