Vasishta Simha:’ಲವ್ ಲಿ’ ಚಿತ್ರದ ಸೆಕೆಂಡ್ ಶೆಡ್ಯೂಲ್ ಶೂಟಿಂಗ್‌ನಲ್ಲಿ ಬ್ಯುಸಿಯಾದ ನಟ ವಸಿಷ್ಠ ಸಿಂಹ

ಸ್ಯಾಂಡಲ್ ವುಡ್ ಪ್ರತಿಭಾನ್ವಿತ ನಟ ವಸಿಷ್ಠ ಸಿಂಹ (Vasishta Simha) ಅಭಿನಯದ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು (Love li) ‘ಲವ್ ಲಿ’. ವಸಿಷ್ಠ ಸಿಂಹ ಅಭಿಮಾನಿ ಬಳಗ ಕೂಡ ಈ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ಚಿತ್ರದ ಪೋಸ್ಟರ್ ಗಳಲ್ಲಿ ವಸಿಷ್ಠ ಲುಕ್ ಸಖತ್ ಇಂಪ್ರೆಸ್ ಮಾಡಿದ್ದು ‘ಲವ್ ಲಿ’ ಸಿನಿಮಾ ಅಪ್ಡೇಟ್ ಗಳೂ ನಿರೀಕ್ಷೆ ಹೆಚ್ಚಿಸಿವೆ. ಲವ್ ಲಿ ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದ್ದು ಮೊದಲ ಶೆಡ್ಯೂಲ್ ಯಶಸ್ವಿಯಾಗಿ ಮುಗಿಸಿರುವ ಚಿತ್ರತಂಡ ಸೆಕೆಂಡ್ ಶೆಡ್ಯೂಲ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.

ನಾಗರಭಾವಿಯ ಕಿಂಗ್ಸ್ ಕ್ಲಬ್ ನಲ್ಲಿ ‘ಲವ್ ಲಿ’ (Love li)ಚಿತ್ರದ ಸೆಕೆಂಡ್ ಶೆಡ್ಯೂಲ್ ಚಿತ್ರೀಕರಣ ನಡೆಯುತ್ತಿದೆ. ಇಲ್ಲಿನ ಕಿಂಗ್ಸ್ ಕ್ಲಬ್ ನಲ್ಲಿ ಆಫೀಸ್ ಸೆಟ್ ನಿರ್ಮಾಣ ಮಾಡಲಾಗಿದ್ದು ವಸಿಷ್ಠ ಸಿಂಹ, ಸಾಧುಕೋಕಿಲ, ನಟಿ ಸಮೀಕ್ಷಾ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

‘ಲವ್ ಲಿ’ (Love li)ಚಿತ್ರಕ್ಕೆ ಚೇತನ್ ಕೇಶವ್ ನಿರ್ದೇಶನವಿದೆ. ಇದೊಂದು ಕಮರ್ಶಿಯಲ್ ರೋಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವಾಗಿದೆ. ರೌಡಿಸಂ ಕಥಾಹಂದರವೂ ಹೊಂದಿರುವುದು ಈ ಚಿತ್ರದಲ್ಲಿ ಕಾಣಬಹುದಾಗಿದೆ. (Vasishta Simha)ವಸಿಷ್ಠ ಸಿಂಹನಿಗೆ ನಾಯಕಿಯಾಗಿ ಜಾರ್ಕಂಡ್ ಮೂಲದ ಸ್ಟೆಫಿ ಪಟೇಲ್ ನಟಿಸಲಿದ್ದಾರೆ. ಕೊರಿಯನ್ ವೆಬ್ ಸೀರೀಸ್, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಸ್ಟೆಫಿ ಪಟೇಲ್ ಗೆ ಇದು ಮೊದಲ ಕನ್ನಡ ಸಿನಿಮಾವಾಗಿದೆ. ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಕೂಡ ಲವ್ ಲಿ ಚಿತ್ರತಂಡ ಸೇರಿಕೊಂಡಿದ್ದು, ಸುಬ್ಬಲಕ್ಷ್ಮಿ ಸಂಸಾರ ಸೀರಿಯಲ್ ಖ್ಯಾತಿಯ ಸಮೀಕ್ಷಾ ಲವ್ ಲಿ ಚಿತ್ರದಲ್ಲಿ ಪ್ರಮುಖ ರೋಲ್ ನಲ್ಲಿ ಮಿಂಚಲಿದ್ದಾರೆ.

ಇದನ್ನೂ ಓದಿ : ಸೆಪ್ಟೆಂಬರ್‌ 24 ರಿಂದ ಬಿಗ್‌ಬಾಸ್‌ ಸೀಸನ್ 9 ಆರಂಭ : ವಾಹಿನಿ ಮುಂದೆ ಬೇಡಿಕೆ ಇಟ್ಟ ವೀಕ್ಷಕರು

ಇದನ್ನೂ ಓದಿ : ‘ರಕ್ತದೋಕುಳಿ’ ಟೀಸರ್ ಲಾಂಚ್ ಮಾಡಿದ ಯುವ ನಟ ಧೀರೇನ್ ರಾಮ್ ಕುಮಾರ್

ಇದನ್ನೂ ಓದಿ : ಸೈಮಾ ಪಾರ್ಟಿ ವಿರುದ್ದ ದೂರು : ವೈರಲ್‌ ಆಯ್ತು ಸೆಲೆಬ್ರಿಟಿಗಳ ಮೋಜು ಮಸ್ತಿ

ಇದನ್ನೂ ಓದಿ : ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ್​ ವಿಧಿವಶ

ಈ ಚಿತ್ರವನ್ನು ಎಂ.ಆರ್ ರವೀಂದ್ರ ಕುಮಾರ್ ನಿರ್ಮಿಸುತ್ತಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ ಅಶ್ವಿನ್ ಕೆನಡಿರವರು ಕ್ಯಾಮೆರಾ ವರ್ಕ್‌ ಯನ್ನು ಮಾಡಲಿದ್ದಾರೆ. ಹಾಗೆ ಹರೀಶ್ ಕೊಮ್ಮೆರವರು ಈ ಚಿತ್ರದಲ್ಲಿ ಸಂಕಲನ ಮಾಡಲಿದ್ದಾರೆ. ಈ ಸಿನಿಮಾಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡಿದ್ದಾರೆ.

Busy actor Vasishtha Simha in second schedule shooting of ‘Love Li’

Comments are closed.