ಆತ್ಮೀಯ ಗೆಳತಿ ರಕ್ಷಿತಾಗೆ ಬರ್ತಡೆ ವಿಶ್‌ ಮಾಡಿದ ಚಾಲೆಂಚಿಂಗ್‌ ಸ್ಟಾರ್‌ : ಪೋಸ್ಟ್‌ ಆಯ್ತು ಸಖತ್‌ ವೈರಲ್‌

ಸ್ಯಾಂಡಲ್‌ವುಡ್‌ನಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹಾಗೂ ರಕ್ಷಿತಾ (Challenging Star Darshan – Rakshita) ಜೋಡಿ ಒಂದು ಕಾಲ ಘಟ್ಟದಲ್ಲಿ ಬೆಸ್ಟ್‌ ಫೇರ್‌ ಆಗಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ ನಟ ದರ್ಶನ್‌ಗೆ ರಕ್ಷಿತಾ ಬಿಟ್ಟರೆ ಬೇರೆ ಯಾರು ಸರಿ ಸಮಾನದ ಫೇರ್‌ ಇಲ್ಲ ಎನ್ನುವಷ್ಟು ಪ್ರೇಕ್ಷಕರ ಮನಗೆದ್ದಿದ್ದಾರೆ. ಇದೀಗ ನಟ ದರ್ಶನ್‌ ತಮ್ಮ ಆತ್ಮೀಯ ಗೆಳತಿ ನಟಿ ರಕ್ಷಿತಾ ಅವರಿಗೆ ಬಹಳ ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.

ನಟ ದರ್ಶನ್‌ ತಮ್ಮ ಟ್ವೀಟರ್‌ನಲ್ಲಿ, “ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ , ನಿನ್ನ ಹೃದಯ ಬಯಸಿದ್ದು ನಿನಗೆ ಫಲಿಸಲಿ ಎಂದು ಆಶಿಸುತ್ತಾ, ನೂರಾರು ವರುಷ ನೀನು ನಗು ನಗುತಾಯಿರು ಎಂದು ಹಾರೈಸುವೆ… ” ಎಂದು ಟ್ವೀಟ್‌ ಮಾಡಿದ್ದಾರೆ. 2002ರಲ್ಲಿ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರಿಂದ ಅಪ್ಪು ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಎದುರು ನಾಯಕಿಯಾಗಿ ನಟಿಸಲು ಅವರು ಸಹಿ ಹಾಕಿದರು. ನಂತರ ಪಾರ್ವತಮ್ಮ ರಾಜ್‌ಕುಮಾರ್‌ ಅವರಿಗೆ ರಕ್ಷಿತಾ ಎಂದು ಹೆಸರಿಟ್ಟಿದ್ದಾರೆ.

ರಕ್ಷಿತಾ ತಮ್ಮ ವೃತ್ತಿಜೀವನವನ್ನು ಕನ್ನಡ ಸಿನಿಮಾ ಅಪ್ಪು ಮೂಲಕ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಪ್ರಾರಂಭಿಸಿದರು. ಕಲಾಸಿಪಾಳ್ಯ ದೊಡ್ಡ ಹಿಟ್ ಆದಾಗ ಕನ್ನಡದ ಟಾಪ್ ಹೀರೋಯಿನ್ ಆಗಿ ಬಡ್ತಿ ಪಡೆದುಕೊಂಡಿರು. ಪುನೀತ್ ರಾಜ್‌ಕುಮಾರ್ ಹೊರತುಪಡಿಸಿ, ಅವರು ಆ ಕಾಲದ ಎಲ್ಲಾ ಅಗ್ರ ಕನ್ನಡ ನಾಯಕರಾದ ಉಪೇಂದ್ರ, ಸುದೀಪ್, ದರ್ಶನ್ ಮತ್ತು ಆದಿತ್ಯರೊಂದಿಗೆ ಯಶಸ್ವಿ ಜೋಡಿಯಾಗಿ ನಟಿಸಿದ್ದಾರೆ.

ಇದನ್ನೂ ಓದಿ : Sandalwood is producer K Manju: ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಸ್ಯಾಂಡಲ್‌ ವುಡ್‌ ನಿರ್ಮಾಪಕ

ಇದನ್ನೂ ಓದಿ : ಏಷ್ಯಾ ಹೊಸ ಕನ್ನಡ ಪ್ರದರ್ಶನವನ್ನು ಪ್ರಕಟಿಸಿದ ಬನಿಜಯ್

ಇದನ್ನೂ ಓದಿ : ಸ್ಯಾಂಡಲ್‌ವುಡ್‌ ಕ್ರೇಜಿ ಕ್ವೀನ್‌ ರಕ್ಷಿತಾ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಪತಿ ಪ್ರೇಮ್‌

ನಟಿ ರಕ್ಷಿತಾ 2007ಕ್ಕೆ ನಿರ್ದೇಶಕ ಪ್ರೇಮ್ ಅವರನ್ನು ವಿವಾಹವಾದರು. ನಿರ್ದೇಶಕ ಪ್ರೇಮ್ ಅವರೊಂದಿಗಿನ ವಿವಾಹದ ನಂತರ, ಅವರು ತಮ್ಮ ನಟನಾ ಕಾರ್ಯಗಳನ್ನು ನಿಲ್ಲಿಸಿದ್ದು, ಆದರೆ ನಂತರ ದಿನಗಳಲ್ಲಿ ಸಿನಿಮಾ ನಿರ್ಮಾಣವನ್ನು ವಹಿಸಿಕೊಂಡಿದ್ದಾರಡೆ. ಅವರು ಪ್ರೇಮ್ ನಿರ್ದೇಶನದ ಪ್ರತಿಷ್ಠಿತ ಜೋಗಯ್ಯ ಸಿನಿಮಾಕ್ಕೆ ನಿರ್ಮಾಪಕರಾದರು. ಇತ್ತೀಚೆಗೆ ಕಿರುತೆರ ರಿಯಾಲಿಟಿ ಶೋಗಳಲ್ಲಿ ಜೆಡ್ಜ್‌ ಆಗಿ ಕಾಣಿಸಿಕೊಂಡು, ಕರ್ನಾಟಕದ ಮನೆ ಮಗಳಾಗಿದ್ದಾರೆ.

Challenging Star Darshan – Rakshita: Challenging Star wishes dear girlfriend Rakshita on her birthday: The post has gone viral.

Comments are closed.