ಬಜೆ ಡ್ಯಾಂನಲ್ಲಿ ಕಡಿಮೆಯಾದ ನೀರಿನ ಸಂಗ್ರಹ: ಪೌರಾಯುಕ್ತರಿಂದ ಮಹತ್ವದ ಮಾಹಿತಿ

ಉಡುಪಿ : (Water storage in Baje Dam) ಕರಾವಳಿಯಲ್ಲಿ ತಾಪಮಾನ ಏರಿಕೆಯಿಂದಾಗಿ ಕೆರೆ, ಹೊಳೆಗಳು ಬತ್ತಿ ಬರುತ್ತಿವೆ. ಎಲ್ಲಡೆ ನೀರಿಗೆ ಬೇಡಿಕೆಗಳು ಹೆಚ್ಚುತ್ತಿದ್ದು, ಕುಡಿಯುವ ನೀರಿನ ಬೇಡಿಕೆ ಅತೀ ಹೆಚ್ಚಾಗಿದೆ. ಇದೀಗ ಉಡುಪಿ ನಗರಸಭಾ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಸ್ವರ್ಣಾ ನದಿಯ ಬಜೆ ಡ್ಯಾಂ ನಲ್ಲಿ ನೀರಿನ ಸಂಗ್ರಹ ಅತೀ ಕಡಿಮೆ ಮಾಡಿದ್ದು, ನೀರನ್ನು ಅನಗತ್ಯ ಉದ್ದೇಶಕ್ಕೆ ಬಳಸದಂತೆ ಪೌರಾಯುಕ್ತರು ಜನರಿಗೆ ತಿಳಿಸಿದ್ದಾರೆ.

ಪ್ರಸ್ತುತ ಹವಮಾನದಲ್ಲಾಗುತ್ತಿರುವ ತಾಪಮಾನ ಏರಿಕೆಯಿಂದಾಗಿ ಕುಡಿಯುವ ನೀರಿನ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಈ ನಡುವೆ ಬಿಸಿಲಿನ ತಾಪಕ್ಕೆ ಡ್ಯಾಂ ಗಳಲ್ಲಿನ ನೀರು ಬತ್ತಿ ಹೋಗುತ್ತಿದೆ. ಅಂತಹದೇ ತೊಂದರೆ ಇದೀಗ ಉಡುಪಿ ನಗರಸಭೆಗೂ ಬಂದೊದಗಿದೆ. ಉಡುಪಿ ನಗರಸಭೆಗೆ ಸ್ವರ್ಣಾ ನದಿಯ ಬಜೆ ಡ್ಯಾಂ ನಿಂದ ನೀರು ಪೂರೈಕೆ ಮಾಡಲಾಗುತ್ತಿದ್ದು, ಈ ಬಾರಿ ನೀರಿನ ಸಂಗ್ರಹ ಅತೀ ಕಡಿಮೆಯಾದ ಕಾರಣ ಉಡುಪಿ ನಗರಸಭೆಯಿಂದ ಕುಡಿಯುವ ನೀರಿನ ಸಂಪರ್ಕ ಪಡೆದಿರುವ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸಬೇಡಿ ಎಂದು ನಗರಸಭೆ ತಿಳಿಸಿದೆ.

ಒಂದು ವೇಳೆ ಕುಡಿಯುವ ನೀರನ್ನು ಅನ್ಯ ಬಳಕೆಗೆ ಅಂದರೆ ವಾಹನ ತೊಳೆಯಲು, ಗಿಡಗಳಿಗೆ ನೀರು ಬಿಡಲು, ಹೀಗೆ ಅನಗತ್ಯ ವಿಚಾರಗಳಿಗೆ ಬಳಸುತ್ತಿರುವುದು, ಬಳಸಿದ್ದು ಕಂಡುಬಂದಲ್ಲಿ ಸದರಿಯವರ ನೀರಿನ ಸಂಪರ್ಕವನ್ನು ಯಾವುದೇ ಮುನ್ಸೂಚನೆಯಿಲ್ಲದೇ ಕಡಿತಗೊಳಿಸಲಾಗುವುದು ಎಂದು ತಿಳಿಸಿದೆ. ಇದಲ್ಲದೇ ಅಂತಹವರಿಗೆ ದಂಡ ಕೂಡ ವಿಧಿಸಲಾಗುವುದು ಎಂದು ಪೌರಾಯುಕ್ತರ ಕಚೇರಿ ತಿಳಿಸಿದೆ. ನೀರನ್ನು ಮಿತವಾಗಿ ಬಳಸಲು ಆದ್ಯತೆ ನೀಡಿ, ನೀರಿನ ಅಭಾವ ಇರುವ ಈ ಸಮಯದಲ್ಲಿ ನಗರಸಭೆಯೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ : Suicide on lodge: ಮಂಗಳೂರಿನ ಲಾಡ್ಜ್ ನಲ್ಲಿ ಒಂದೇ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆ

ಇದನ್ನೂ ಓದಿ : Dhaiva nartaka death : ದೈವ ನರ್ತನ ಸೇವೆ ಮಾಡುತ್ತಿರುವಾಗಲೇ ಕುಸಿದು ಬಿದ್ದು ದೈವ ನರ್ತಕ ಸಾವು

ಇದನ್ನೂ ಓದಿ : ಕರ್ನಾಟಕ ಚುನಾವಣೆ 2023 : ಎಎಪಿ 60 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

Water storage in Baje Dam: Reduced water storage in Baje Dam: Important information from Municipal Commissioner

Comments are closed.