Chhavi Mittal : ಛವಿ ಮಿತ್ತಲ್ ಗೆ ಕ್ಯಾನ್ಸರ್ : ರೋಗ ಗೆದ್ದೋ ಬರೋದಾಗಿ ಭಾವನಾತ್ಮಕ ಪೋಸ್ಟ್

ಬಾಲಿವುಡ್ ಹಾಗೂ ಹಿಂದಿ ಕಿರುತೆರೆ ನಟಿ ಸ್ತನ ಕ್ಯಾನ್ಸರ್ ಗೆ ತುತ್ತಾಗಿದ್ದಾರೆ. ಆದರೆ ಈ ಬಗ್ಗೆ ಧೃತಿಗೆಡದೇ ಧೈರ್ಯದಿಂದ ತಮ್ಮ ಸ್ಥಿತಿ ಹಂಚಿಕೊಂಡಿರುವ ನಟಿ ಸ್ತನಗಳನ್ನು ಉದ್ದೇಶಿಸಿ ಒಂದು ಭಾವನಾತ್ಮಕ ಪೋಸ್ಟ್ ನ್ನು ಸೋಷಿಯಲ್ ಮೀಡಿಯಾದಲ್ಲಿ‌ ಹಂಚಿಕೊಂಡಿದ್ದಾರೆ. ಬಾಲಿವುಡ್ ಹಾಗೂ ಹಿಂದಿ ಕಿರುತೆರೆಯಲ್ಲಿ ಹೆಸರು ಗಳಿಸಿದ ನಟಿ ಛವಿ ಮಿತ್ತಲ್ (Chhavi Mittal) ಎಸ್ಐಟಿಯಲ್ಲಿ ವಿಡಿಯೋದ ಮೂಲಕ ಮತ್ತಷ್ಟು ಜನಪ್ರಿಯತೆ ಗಳಿಸಿದ್ದರು. ಇದೇ ನಟಿ ಛವಿ ಮಿತ್ತಲ್ ಈಗ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ತಮ್ಮ ಕಾಯಿಲೆಗೆ ನೊಂದುಕೊಳ್ಳದೇ ಈ ಬಗ್ಗೆ ಭಾವನಾತ್ಮಕ ಪೋಸ್ಟ್ ಹಾಕಿರೋ ಛವಿ ಮಿತ್ತಲ್ ನೋವಿನ ಜೊತೆಗೆ ತಾನು ಈ ಸ್ಥಿತಿಯನ್ನು ಗೆದ್ದು ಬರೋದಾಗಿ ಹೇಳಿದ್ದಾರೆ.

ತಮ್ಮ ಪೋಟೊದ ಜೊತೆ ಸುದೀರ್ಘವಾದ ಬರಹವನ್ನು ಹಂಚಿಕೊಂಡಿರೋ ಛವಿ ಮಿತ್ತಲ್ (Chhavi Mittal), ‘‘ನನಗೆ ಮೊದಲ ಬಾರಿಗೆ ಅಪರಿಮಿತ ಖುಷಿಯನ್ನು ನೀಡಿದಾಗ ನಿನ್ನ ಮ್ಯಾಜಿಕ್​ನ ಅರಿವಾಯಿತು. ಆದರೆ ನಿನ್ನ ಮಹತ್ವ ಅರಿವಾಗಿದ್ದು ಮಕ್ಕಳಿಗೆ ಹಾಲುಣಿಸುವಾಗ. ಈಗ ನೀನು ಕ್ಯಾನ್ಸರ್​ನೊಂದಿಗೆ ಹೋರಾಡುವಾಗ ನಾನು ನಿನ್ನ ಪರವಾಗಿ ನಿಲ್ಲಬೇಕಾಗಿದೆ. ಇದು ಆಗಬೇಕಾಗಿದ್ದ ಒಳ್ಳೆಯ ಬೆಳವಣಿಗೆ ಅಲ್ಲ, ಆದರೆ ಇದರಿಂದ ನಮ್ಮ ಆತ್ಮವಿಶ್ವಾಸವೇನೂ ಕಡಿಮೆಯಾಗುವುದಿಲ್ಲ. ನಾನು ಮೊದಲಿನಂತೆ ಆಗದಿರಬಹುದು ಆದರೆ ಇದರಿಂದ ನನ್ನ ಯೋಚನೆಗಳಿಗೆ ತೊಡಕಾಗುವುದಿಲ್ಲ’’ ಎಂದಿದ್ದಾರೆ ಛವಿ ಮಿತ್ತಲ್.

Chhavi Mittal on being diagnosed for breast cancer post Social Media 1

ಕ್ಯಾನ್ಸರ್​ನಿಂದ ಗುಣಮುಖರಾಗಿರುವವರನ್ನು ಉದ್ದೇಶಿಸಿ, ಅವರಿಂದ ನಿತ್ಯವೂ ಪ್ರೇರಣೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ ನಟಿ. ಅಲ್ಲದೇ ಈ ಪರಿಸ್ಥಿತಿಯಲ್ಲಿ ಜತೆಯಾಗಿ ನಿಂತ ಎಲ್ಲರಿಗೂ ಛವಿ ಧನ್ಯವಾದ ಹೇಳಿದ್ದಾರೆ. ಎಲ್ಲರ ಹಾರೈಕೆ, ಪ್ರಾರ್ಥನೆ ಬದಲಾವಣೆಗೆ ನಾಂದಿಯಾಗಲಿದೆ ಎಂದು ಅವರು ಬರೆದಿದ್ದಾರೆ. ಬಾಲಿವುಡ್ ನಲ್ಲಿ ಈಗಾಗಲೇ ಹಲವು ನಟ-ನಟಿಯರು ಕ್ಯಾನ್ಸರ್ ನಿಂದ ಬಳಲಿ ಚೇತರಿಸಿಕೊಂಡಿದ್ದಾರೆ.‌ಕೆಜಿಎಫ್ 2 ದಲ್ಲಿ ಅಬ್ಬರದಿಂದ ಮಿಂಚುತ್ತಿರುವ ಸಂಜಯ್ ದತ್ ಕೂಡ ಕ್ಯಾನ್ಸರ್ ಗೆ ತುತ್ತಾಗಿದ್ದರು. ಅಲ್ಲದೇ ನಟಿ ಸೋನಾಲಿ ಬೇಂದ್ರೆ ಕೂಡ ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದಾರೆ.

ಎಸ್ ಐಟಿಯಲ್ಲಿ ಸಖತ್ ಕಾಮೆಡಿ ವಿಡಿಯೋದಲ್ಲಿ ಪಾಲ್ಗೊಳ್ಳುವ ಛವಿ ಮಿತ್ತಲ್ (Chhavi Mittal) ಸಖತ್ ಫ್ಯಾನ್ಸ್ ಹೊಂದಿದ್ದಾರೆ. ಈಗ ಛವಿ ಮಿತ್ತಲ್ ಈ ಅನಾರೋಗ್ಯದ ಪೋಸ್ಟ್ ಅಭಿಮಾನಿಗಳಿಗೆ ಶಾಕ್ ತಂದಿದೆ. ಎಲ್ಲ ಅಭಿಮಾನಿಗಳು ಬೇಗ ಚೇತರಿಸಿಕೊಂಡು ಮತ್ತೆ ಮೊದಲಿನಂತೆ ನಟನೆಗೆ ಮರಳಿ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಭರ್ಜರಿ ಕಲೆಕ್ಷನ್! ಬಾಹುಬಲಿ-2 ಅನ್ನು ಹಿಂದಿಕ್ಕಿದ ಕೆಜಿಎಫ್‌-2

ಇದನ್ನೂ ಓದಿ : ಚೀನಾ, ಜಪಾನ್ ನಲ್ಲೂ ಆರ್ ಆರ್ ಆರ್ ಮೇನಿಯಾ! ಈ ವರ್ಷದ ಕೊನೆಯಲ್ಲಿ ತೆರೆಕಾಣಲಿದೆ ಸಿನಿಮಾ

Chhavi Mittal on being diagnosed for breast cancer post Social Media

Comments are closed.