Groom Arrest : ತಾಳಿ ಕಟ್ಟುವ ವೇಳೆಯಲ್ಲೇ ಅತ್ಯಾಚಾರ ಕೇಸ್‌ನಲ್ಲಿ ವರ ಅರೆಸ್ಟ್‌

ಭೋಪಾಲ್ : ಹಸೆಮಣೆಯೇರಿದ್ದ ಜೋಡಿಗೆ ಶುಭ ಹಾರೈಸಲು ನೂರಾರು ಮಂದಿ ನೆರೆದಿದ್ದರು. ವರದ ಇನ್ನೇನು ವಧುವಿಗೆ ತಾಳಿ ಕಟ್ಟಬೇಕು. ಈ ಹೊತ್ತಲ್ಲೇ ನೆರೆದಿದ್ದವರಿಗೆ ಅಚ್ಚರಿಯ ಜೊತೆಗೆ ಆಘಾತ ಎದುರಾಗಿತ್ತು. ಮದುವೆ ಮಂಟಪಕ್ಕೆ ಬಂದಿದ್ದ ಪೊಲೀಸರು ವರನನ್ನು (Groom Arrest) ಬಂಧಿಸಿ ಕರೆದೊಯ್ದಿದ್ದಾರೆ. ಈ ಘಟನೆ ನಡೆದಿರೋದು ಮಧ್ಯಪ್ರದೇಶದ ಕಟ್ನಿಯಲ್ಲಿ.

ಸಾಮಾನ್ಯವಾಗಿ ಮದುವೆಯ ವೇಳೆಯಲ್ಲಿ ವಧು ವರರು ಎಸ್ಕೇಪ್‌ ಆಗೋದು ಮಾಮೂಲು. ಇನ್ನೂ ಹಲವು ಕಡೆಗಳಲ್ಲಿ ವಿನಾ ಕಾರಣಕ್ಕೆ ಮದುವೆ ಮುರಿದು ಬೀಳೋದನ್ನೂ ನೋಡಿದ್ದೇವೆ. ಆದ್ರಿಲ್ಲ ಮದುವೆ ಮುರಿದು ಬಿದ್ದಿರೋದು ಅತ್ಯಾಚಾರ ಪ್ರಕರಣದ ಕಾರಣಕ್ಕೆ. ವಧುವಿಗೆ ತಾಳಿಕಟ್ಟುವ ಮುನ್ನ ಮೆರವಣಿಗೆ ಮಾಡೋದು ಇಲ್ಲಿನ ಸಂಪ್ರದಾಯ. ವರ ಅನುಜ್‌ ದುಬೆ ಎಂಬಾತನನ್ನು ಮೆರವಣಿಗೆಯಲ್ಲಿ ಕರೆತರುವ ವೇಳೆಯಲ್ಲಿ ಪೊಲೀಸರು ವರನನ್ನು ಅರೆಸ್ಟ್‌ ಮಾಡಿದ್ದಾರೆ. ವರ ಮದುವೆಯ ಆಮಿಷವೊಡ್ಡ, ತನ್ನ ಸ್ನೇಹಿತೆಯ ಮೇಲೆ ಅತ್ಯಾಚಾರ ಎಸಗಿದ್ದ. ಈ ಕುರಿತು ಜಬಲ್ಪುರ್‌ ಲಾರ್ಡ್‌ ಗಂಜ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ವರ ಅನುಜ್‌ ದುಬೆಯನ್ನು ಬಂಧಿಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಆರೋಪಿ ಅನುಜ್‌ ದುಬೆ, ಯುವತಿಯನ್ನು ದೇವಸ್ಥಾನದಲ್ಲಿ ಮದುವೆಯಾಗಿದ್ದ. ನಂತರ ಯುವತಿಯನ್ನು ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಈ ಘಟನೆಯ ನಂತರದಲ್ಲಿ ಯುವತಿಯನ್ನು ಬಿಟ್ಟು ಮತ್ತೊಂದು ಯುವತಿಯನ್ನು ಮದುವೆಯಾಗಲು ಮುಂದಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, 4 ಗಂಟೆಗಳಲ್ಲಿ ಮೂವರು ಆರೋಪಿಗಳ ಬಂಧನ

ಇದನ್ನೂ ಓದಿ : ಹರ್ಷ ಕೊಲೆ ಬೆನ್ನಲ್ಲೇ ಶಿವಮೊಗ್ಗದಲ್ಲಿ ಮುಸ್ಲಿಂ ಯುವಕನ ಕೊಲೆಗೆ ಸ್ಕೆಚ್​..!

Groom Arrest : Police Arrested Groom Before Wedding

Comments are closed.