ಫ್ಯಾಮಿಲಿ ಪ್ರೇಮ್‌ನಲ್ಲಿ ಚಿರು ಸದಾ ಜೀವಂತ….! ಅಭಿಮಾನಿಗಳ ಪ್ರೀತಿಗೆ ಮೇಘನಾ ಮೆಚ್ಚುಗೆ…!!

ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟ ಚಿರಂಜೀವಿ ಸರ್ಜಾ ಫ್ಯಾಮಿಲಿ ಪ್ರೇಮ್ ನಲ್ಲಿ ತಮ್ಮ ಜಾಗ ಖಾಲಿ ಉಳಿಸಿ ಸರಿದು ಹೋಗಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಈ‌ ಕೊರತೆ ತುಂಬುವಂತ ಪೋಟೋ ಗಳ ಜೊತೆ ಮೇಘನಾ ಮನಸ್ಸು ಗೆದ್ದಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೇ ನಟ ಚಿರಂಜೀವಿ ಸರ್ಜಾ ಇಷ್ಟೊತ್ತಿಗೆ ಮಗನ ಜೊತೆ ಆಟ ಆಡುತ್ತ‌ ಸಮಯ‌ಕಳೆಯಬೇಕಿತ್ತು. ಆದರೆ ವಿಧಿ ಆ ಖುಷಿಯನ್ನು ಕಸಿದುಕೊಂಡಿದೆ.

ಹೀಗಾಗಿ ಜ್ಯೂನಿಯರ್ ಚಿರು ಮುಖದಲ್ಲೇ ಸೀನಿಯರ್ ಚಿರು ನೋಡಿ ನೆಮ್ಮದಿ ಪಡೆಯುತ್ತಿದ್ದಾರೆ ಮೇಘನಾ. ಆದರೆ ಅಭಿಮಾನಿಗಳು ರಿಯಲ್ ನಲ್ಲಿ ಅಗಲಿದ ಈ ಜೋಡಿಯನ್ನು ಪ್ರೇಮ್ ನಲ್ಲಿ ಫ್ಯಾಮಿಲಿ ಪೋಟೋದಲ್ಲಿ ಒಂದಾಗಿಸಿ ಗಮನ ಸೆಳೆಯುತ್ತಿದ್ದಾರೆ.

ಜ್ಯೂನಿಯರ್ ಚಿರು 7 ನೇ ತಿಂಗಳಿಗೆ ಕಾಲಿರಿಸಿದ್ದು ಒಂದೊಂದೆ ಕ್ಯೂಟ್ ಪೋಟೋಗಳನ್ನು ಮೇಘನಾ ಹಂಚಿಕೊಳ್ಳುತ್ತಿದ್ದಾರೆ. ಈ ಪೋಟೋ ಗಳನ್ನು ಬಳಸಿಕೊಂಡು ಅಭಿಮಾನಿಗಳು ಮೇಘನಾ ಫ್ಯಾಮಿಲಿ ಇಮೇಜ್ ಸಿದ್ಧಪಡಿಸಿದ್ದಾರೆ.

I am super dad. I am super son ಸೇರಿದಂತೆ ಹಲವು ರೀತಿಯ ಫ್ಯಾಮಿಲಿ ಇಮೇಜ್ ಗಳನ್ನು ಅಭಿಮಾನಿಗಳು ಸಿದ್ಧಪಡಿಸಿದ್ದಾರೆ. ಮೇಘನಾ ರಾಜ್, ಚಿರು, ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಇರುವಂತೆ, ಮೇಘನಾ ಹಾಗೂ ಚಿರು ಮಗನೊಂದಿಗೆ ಆಟ ಆಡುತ್ತಿರುವಂತೆ ಹೀಗೆ ವಿವಿಧ ಬಗೆಯ ಪೋಟೋ ಪ್ರೇಮ್ ಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಪೋಟೋಗಳನ್ನು ಸ್ವತಃ ಮೇಘನಾ ಕೂಡಾ ತಮ್ಮ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. ಜೂನ್ 7 ರಂದು ಚಿರಂಜೀವಿ ಸರ್ಜಾ ಮೊದಲ ಪುಣ್ಯಸ್ಮರಣೆ ನಡೆಯಲಿದೆ. ಈ ವೇಳೆ ಜ್ಯೂನಿಯರ್ ಚಿರು ಜೊತೆ ‌ಮೇಘನಾ ರಾಜ್ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ.

https://kannada.newsnext.live/chiranjavi-sarja-meghanraj-samadi-pooja-firstdeathanniversary/

Comments are closed.