ಕೊರೋನಾ‌ ನಿಯಮದ ಎಫೆಕ್ಟ್….! ಇಲ್ಲಿ ಮದುವೆಗೆ ಸೇತುವೆಯೇ ಮಂಟಪ…!!

ಜೀವನದಲ್ಲಿ ಒಮ್ಮೆ ನಡೆಯೋ ಮದುವೆಯನ್ನು ಅದ್ದೂರಿಯಾಗಿ ನಡೆಸೋ ಆಸೆಗೆ ಕರೋನಾ ಅವಕಾಶವನ್ನೇ ಕೊಡ್ತಿಲ್ಲ. ಹೀಗಾಗಿ ರೂಲ್ಸ್‌ ಮಧ್ಯೆಯೇ ತಾಳಿ ಕಟ್ಟೋ ಸ್ಥಿತಿ ಬಂದಿದೆ. ಎರಡು ರಾಜ್ಯಗಳ ಕರೋನಾ ರೂಲ್ಸ್ ಮಧ್ಯೆ ಸಿಕ್ಕೊಂಡಿರೋ ಇಲ್ಲಿ ಜನತೆ ಮಾತ್ರ ಮಸ್ತ ಐಡಿಯಾ ಮಾಡಿ‌ಮದುವೆ ಮುಗಿಸುತ್ತಿದ್ದಾರೆ.

ಕೇರಳ ಹಾಗೂ ತಮಿಳುನಾಡಿನಲ್ಲಿ ಕೊರೋನಾ ಅಬ್ಬರ ಜೋರಾಗಿದ್ದು, ಎರಡು ರಾಜ್ಯದಲ್ಲೂ ಲಾಕ್ ಡೌನ್ ಸೇರಿದಂತೆ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿದೆ. ಹೀಗಾಗಿ ಎರಡು ರಾಜ್ಯಗಳ ಗಡಿಯಲ್ಲಿ ಮದುವೆ ನಿಶ್ವಯಿಸಿಕೊಂಡವರ ಪಾಡು ಕೇಳೋರಿಲ್ಲ. ಆದರೆ ಕೇರಳ‌ ಹಾಗೂ ತಮಿಳುನಾಡು ಗಡಿಯ ಚಿನಾರ್ ನದಿ ಸೇತುವೆ ಮಾತ್ರ ಈ ನಿಯಮಗಳ ಮಧ್ಯೆಯೂ ಮದುವೆಯ ಮಂಟಪವಾಗಿ ಬಳಕೆಯಾಗ್ತಿದ್ದು ಲಾಕ್ ಡೌನ್ ಜಾರಿಯಾದ ಮೇಲೆ ಇಲ್ಲಿ ಬರೋಬ್ಬರಿ ೧೧ ಕ್ಕೂ ಹೆಚ್ಚು ಮದುವೆಗಳು ನಡೆದಿವೆ.

ಎರಡು ರಾಜ್ಯದ ಜನರು ಬೇರೆ ರಾಜ್ಯಕ್ಕೆ ಹೋಗಲು ಕರೋನಾ ಟೆಸ್ಟ್ ರಿಪೋರ್ಟ್ ಕಡ್ಡಾಯ. ಅದಕ್ಕಾಗಿ‌ ಸಂಪೂರ್ಣ ಕುಟುಂಬಕ್ಕೆ ಕೊರೋನಾ ಟೆಸ್ಟ್ ಮಾಡಿಸಲು ಮುಂದಾದರೇ ಸಾವಿರಾರು ರೂಪಾಯಿ ವ್ಯಯಿಸಬೇಕು. ಇದಕ್ಕಾಗಿ ಪ್ಲ್ಯಾನ್ ಮಾಡ್ತಿರೋ ಕುಟುಂಬಸ್ಥರು ವಧು ವರರಿಗೆ ಕೊರೋನಾ ಟೆಸ್ಟ್ ಮಾಡಿಸುತ್ತಿದ್ದಾರೆ.

https://kannada.newsnext.live/kalbhurghi-datta-temple-spliceal-pooja-corona/

ಬಳಿಕ ಸೇತುವೆ ಬಳಿ ಬಂದು ವಧು-ವರರು ಸೇತುವೆ ಮೇಲೆ ಹೋಗಿ ಪುರೋಹಿತರಿಲ್ಲದೇ ಕೇವಲ ಹಿರಿಯರ ಕಣ್ಣ ಸಾಕ್ಷಿಯಲ್ಲಿ ಮದುವೆಯಾಗುತ್ತಿದ್ದಾರೆ. ಗುರುವಾರವೂ ಉನ್ನಿಕೃಷ್ಣ್ ಹಾಗೂ ತಂಗಮಾಯಿಲ್ ಎಂಬ ವಧು-ವರರು ಈ ಚಿನಾರ್ ಸೇತುವೆ ಮೇಲೆಯೇ ಹೊಸಬದುಕಿಗೆ ಕಾಲಿರಿಸಿದ್ದಾರೆ.

ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳು ವಧು-ವರರ ಕೊವೀಡ್ ಟೆಸ್ಟ್ ರಿಪೋರ್ಟ್ ಪರಿಶೀಲಿಸಿ ಮದುವೆಗೆ ಅವಕಾಶ ಕಲ್ಪಿಸಿದ್ದಾರೆ. ಒಟ್ಟಿನಲ್ಲಿ ಕೊರೋನಾ ಸಂಕಷ್ಟ ಮದುವೆಯನ್ನು ಸರ್ಕಸ್‌ನಂತಾಗಿಸಿರೋದು ಸುಳ್ಳಲ್ಲ.

https://kannada.newsnext.live/chiranjavi-sarja-meghanraj-samadi-pooja-firstdeathanniversary/

Comments are closed.