Rayan Raj Sarja : ಚಿರು ಸರ್ಜಾ – ಮೇಘನಾ ರಾಜ್ ಸರ್ಜಾ ಪುತ್ರ ರಾಯನ್ ರಾಜ್ ಸರ್ಜಾಗೆ ಬರ್ತಡೇ ಸಂಭ್ರಮ

ಸ್ಯಾಂಡಲ್‌ವುಡ್‌ನ ಖ್ಯಾತ ನಟರಾದ ಚಿರಂಜೀವಿ ಸರ್ಜಾ (Chiru Sarja) ಮತ್ತು ಮೇಘನಾ ರಾಜ್‌ ಸರ್ಜಾ (Meghana Raj Sarja) ಅವರ ಮುದ್ದಿನ ಮಗ (Rayan Raj Sarja)ರಾಯನ್‌ ರಾಜ್‌ ಸರ್ಜಾಗೆ ಎರಡನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ರಾಯನ್ ರಾಜ್ ಸರ್ಜಾಗೆ ಎರಡು ವರ್ಷ ಭರ್ತಿಯಾಗಿದ್ದು, ಇಂದು ತನ್ನ ಹುಟ್ಟು ಹಬ್ಬವನ್ನು ಸಿಂಪಲ್ ಆಗಿ ಆಚರಿಸಿಕೊಂಡಿದ್ದಾರೆ. ಮೇಘನಾ ರಾಜ್‌ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮುದ್ದಿನ ಮಗನ ಪೋಟೋಸ್‌ಗಳನ್ನು ಹಂಚಿಕೊಳ್ಳುವುದರ ಮೂಲಕ ಶುಭ ಹಾರೈಸಿದ್ದಾರೆ. ರಾಯನ್‌ಗೆ ಸರ್ಜಾ ಕುಟುಂಬದವರು, ಸಿನಿಮಾ ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ಶುಭ ಹಾರೈಸಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್‌ ಸರ್ಜಾ ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದರು. ಆದರೆ ಇಬ್ಬರ ಸಂಸಾರ ಚೆನ್ನಾಗಿ ಸಾಗಿತ್ತು ಅನ್ನೋ ಹೊತ್ತಲ್ಲೇ ಚಿರಂಜೀವಿ ಸರ್ಜಾ ಬಾರದ ಲೋಕಕ್ಕೆ ಪಯಣಿಸಿದ್ದರು. ತುಂಬು ಗರ್ಭಿಣಿಯಾಗಿದ್ದ ಮೇಘನಾ ರಾಜ್ ಸರ್ಜಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗನಿಗೆ ತಂದೆ ಇಲ್ಲಾ ಅನ್ನೋ ಕೊರಗು ಬಾರದಂತೆ ಮೇಘನಾ ತಂದೆ, ತಾಯಿಯ ಪ್ರೀತಿಯನ್ನು ನೀಡಿ ಮಗನನ್ನು ಬೆಳೆಸಿದ್ದಾರೆ. ಅದ್ರಲ್ಲೂ ರಾಯನ್ ರಾಜ್ ಸರ್ಜಾ ಹುಟ್ಟಿದ ನಂತರ ಮಗನ ಖುಷಿಯಲ್ಲೇ ತನ್ನೆಲ್ಲಾ ನೋವನ್ನೂ ಮರೆಯುತ್ತಿದ್ದಾರೆ.

ನೋಡದಕ್ಕೆ ಚಿರಂಜೀವಿ ಸರ್ಜಾರಂತೆಯೇ ಕಾಣಿಸುತ್ತಿರುವ ಮಗ ರಾಯನ್ ರಾಜ್ ಸರ್ಜಾರನ್ನು ಅಭಿಮಾನಿಗಳು ಪ್ರೀತಿಯಿಂದ ಜೂನಿಯರ್ ಚಿರು ಅಂತಾನೇ ಕರೆಯುತ್ತಿದ್ದಾರೆ. ಇತ್ತೀಚಿಗಷ್ಟೇ ಕಿರುತೆರೆಯ ರಿಯಾಲಿಟಿ ಶೋನಲ್ಲಿಯೂ ಮೇಘನಾ ರಾಜ್ ಕಾಣಿಸಿಕೊಂಡಿದ್ದಾರೆ. ಕಳೆದ ತಿಂಗಳು ವಿದೇಶಿ ಪ್ರವಾಸದ ವೇಳೆಯಲ್ಲಿಯೂ ಮೇಘನಾ ತನ್ನ ಕೈ ಮೇಲೆ ಚಿರಂಜೀವಿ ಸರ್ಜಾ ಹಾಗೂ ರಾಯನ್ ರಾಜ್ ಸರ್ಜಾ ಹೆಸರನ್ನು ಹೆಚ್ಚೆ ಹಾಕಿಸಿಕೊಂಡಿದ್ದರು. ಸದ್ಯ ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಮೇಘನಾ ಮಗನ ಎರಡನೇ ವರ್ಷದ ಬರ್ತಡೇಯನ್ನು ಆಚರಿಸಿಕೊಂಡಿದ್ದಾರೆ.

ಇದನ್ನೂ ಓದಿ : Vasanthi Nalidaga : ‘ವಾಸಂತಿ ನಲಿದಾಗ’ ಬಿಡುಗಡೆ ದಿನಾಂಕ ಮುಂದೂಡಿಕೆ – ಡಿಸೆಂಬರ್ ನಲ್ಲಿ ತೆರೆಗೆ ಬರಲಿದೆ

ಇದನ್ನೂ ಓದಿ : Jacqueline: ನಟಿ ಜಾಕ್ವೆಲಿನ್‍ಗೆ ಕೊಂಚ ರಿಲೀಫ್: ಮಧ್ಯಂತರ ಜಾಮೀನು ವಿಸ್ತರಿಸಿದ ದೆಹಲಿ ಕೋರ್ಟ್

ಇದನ್ನೂ ಓದಿ : Salman Khan down with dengue : ನಟ ಸಲ್ಮಾನ್​ ಖಾನ್​ಗೆ ಡೆಂಗ್ಯೂ : ಬಿಗ್​ಬಾಸ್​ ಶೋ ನಿರೂಪಣೆ ಕರಣ್​ ಜೋಹರ್​ ಹೆಗಲಿಗೆ

ರಾಯನ್‌ ರಾಜ್‌ ಸರ್ಜಾನ ಎರಡನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮೇಘನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್‌ ಅಂಡ್‌ ವೈಟ್‌ ಪೋಸ್ಟರ್‌ನ್ನು ಹಾಕಿಕೊಳ್ಳುವ ಮೂಲಕ ಶುಭ ಹಾರೈಸಿದ್ದಾರೆ. ಹಂಚಿಕೊಂಡ ಪೋಸ್ಟ್‌ನ್ನು ಚಿರಂಜೀವಿ ಸರ್ಜಾ ಇನ್ಸ್ಟಾಗ್ರಾಮ್‌ ಖಾತೆಯನ್ನು ಟ್ಯಾಗ್‌ ಮಾಡಿ “ನನ್ನ ಆಶೀರ್ವಾದ .. ನಮ್ಮ ಬೇಬಿ ಬಾಯ್‌ಗೆ ಇಂದು ಎರಡು ವರ್ಷ” ಎಂದು ಬರೆದು ಕೊಂಡಿದ್ದಾರೆ. ಇನ್ನೂ ಹುಟ್ಟುಹಬ್ಬದ ಆಚರಣೆಯಲ್ಲಿ ಅಜ್ಜಿ ಪ್ರಮೀಳ ಮತ್ತು ಅಜ್ಜ ಸುಂದರ್‌ ರಾಜ್‌ ಮೊಮ್ಮಗನಿಗೆ ಹುಟ್ಟು ಹಬ್ಬಕ್ಕೆ ವಿಶ್‌ ಮಾಡುತ್ತಾ ಕೇಕ್‌ನ್ನು ತಿನ್ನಿಸಿದ್ದಾರೆ.

Chiru Sarja – Meghana Raj Sarja’s son Rayan Raj Sarja’s birthday celebration

Comments are closed.