Hemorrhoids : ಮೂಲವ್ಯಾಧಿಗೆ ಮನೆಯಲ್ಲೇ ಇದೆ ಸುಲಭ ಪರಿಹಾರ

ನಮ್ಮ ಆಹಾರ ಕ್ರಮದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅದು ನಮ್ಮ ದೈಹಿಕ ಆಹಾರದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ನಾವು ಸೇವಿಸುವ ಆಹಾರದ ಮೇಲೆ ನಮಗೆ ಗಮನವಿರಬೇಕಾಗಿರುವುದು ಅಗತ್ಯವಾಗಿರುತ್ತದೆ. ದೇಹದಲ್ಲಿ ಮೂಲವ್ಯಾಧಿ(Hemorrhoids) ಎನ್ನುವುದು ಹೆಚ್ಚಾಗಿ ಎರಡು ರೀತಿಯಲ್ಲಿ ಕಂಡು ಬರುತ್ತದೆ. ಕೆಲವರಿಗೆ ಗುದದ್ವಾರದ ಹೊರ ಭಾಗ, ಇನ್ನು ಕೆಲವರಿಗೆ ಗುದದ್ವಾರದ ಒಳಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆ ಹೆಚ್ಚಾದರೆ ಮಲ ವಿಸರ್ಜನೆ ವೇಳೆಯಲ್ಲಿ ರಕ್ತಸ್ರಾವ ಹಾಗೂ ವಿಪರೀತ ನೋವು ಉಂಟಾಗುತ್ತದೆ. ಇದು ಕರಳಿನಿಂದ ಹುಟ್ಟಿಕೊಳ್ಳುವ ಸಮಸ್ಯೆ ಕೂಡ ಆಗಿದೆ. ಆದರಿಂದ ಹೊಟ್ಟೆಯಲ್ಲಿ ಗಾಳಿ ತುಂಬುವಿಕೆ, ಅತಿಯಾದ ತೇಗು ಬರುತ್ತಿರುತ್ತದೆ. ಮೂಲವ್ಯಾಧಿ ಒಂದು ತರಹದ ವಂಶ ಪರಂಪರೆಯಾಗಿ ಬರುವ ಕಾಯಿಲೆ ಕೂಡ ಹೌದು. ಹಾಗಾಗಿ ಮೂಲವ್ಯಾಧಿ ಪ್ರಾರಂಭಿಕ ಹಂತದಲ್ಲೇ ಅದನ್ನು ಸಂಪೂರ್ಣವಾಗಿ ಮನೆಮದ್ದಿನ ಮೂಲಕ ಗುಣಪಡಿಸಿಕೊಳ್ಳಬಹುದಾಗಿದೆ. ಹಾಗಾದರೆ ಆ ಮನೆಮದ್ದುಗಳ ಬಗ್ಗೆ ತಿಳಿಯೋಣ.

ಬೇಕಾಗುವ ಸಾಮಾಗ್ರಿ :
ಕೆಂಪು ಕಲ್ಲು ಸಕ್ಕರೆ
ಒಣ ದ್ರಾಕ್ಷಿ
ತಂಪಿನ ಬೀಜ(ಕಾಮ ಕಸ್ತೂರಿ)

ಇದನ್ನೂ ಓದಿ : Sore Throat : ಚಳಿಗಾಲದಲ್ಲಿ ಉಂಟಾಗುವ ಸಾಮಾನ್ಯ ಗಂಟಲು ನೋವಿಗೆ ಈ ಮನೆಮದ್ದುಗಳೇ ಉತ್ತಮ ಪರಿಹಾರ

ಇದನ್ನೂ ಓದಿ : Protect your Skin Winter Season: ಚಳಿಗೆ ಚರ್ಮ ಒಡೆಯದಂತೆ ರಕ್ಷಿಸಿಕೊಳ್ಳಲು ಸುಲಭ ಪರಿಹಾರ

ಬಳಸುವ ವಿಧಾನ:

ಪ್ರತಿದಿನ ರಾತ್ರಿ ಒಂದು ಲೋಟ ಬಿಸಿನೀರಿಗೆ(ಬಿಸಿ ಮಾಡಿ ತಣ್ಣಿಸಿದ ನೀರು)ಒಂದು ತಂಡು ಕಲ್ಲು ಸಕ್ಕರೆ ಅಥವಾ ಒಣದ್ರಾಕ್ಷಿ ಹಾಗೂ ಒಂದು ಸ್ಪೂನ್‌ ತಂಪಿನ ಬೀಜವನ್ನು ಹಾಕಿ ನೆನೆಸಿ ಇಡಬೇಕು. ಇದನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲೋಟದ ತಳಭಾಗದಲ್ಲಿರುವುದನ್ನು ಚೆನ್ನಾಗಿ ಕಲಕಿ ಕುಡಿಯಬೇಕು. ಇದನ್ನು ಪ್ರತಿದಿನ ಕುಡಿಯುವುದರಿಂದ ಮೊದಲಿಗೆ ಮಲ ವಿಸರ್ಜನೆಯಲ್ಲಿ ಬರುವ ರಕ್ತಸ್ರಾವ ಹಾಗೂ ನೋವನ್ನು ಕಡಿಮೆ ಮಾಡುತ್ತದೆ. ನಂತರ ದಿನಗಳಲ್ಲಿ ಸಂಪೂರ್ಣವಾಗಿ ಗುಣವಾಗುವುದನ್ನು ನೋಡಬಹುದಾಗಿದೆ. ಕೆಂಪುಕಲ್ಲು ಸಕ್ಕರೆ, ಒಣದ್ರಾಕ್ಷಿ ಮತ್ತು ತಂಪಿನಬೀಜ ಎಲ್ಲವೂ ನಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದರಿಂದ ದೇಹದಲ್ಲಿ ಉಂಟಾಗುವ ನಿರ್ಜಲೀಕರಣವನ್ನು ಕಡಿಮೆ ಮಾಡುತ್ತದೆ. ಇದನ್ನು ಪ್ರತಿದಿನ ಕುಡಿಯುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಹಾಗೆ ಉರಿಮೂತ್ರದಿಂದ ಬಳಲುತ್ತಿರುವವರು ಇದನ್ನು ಕುಡಿದರೆ ಕಡಿಮೆಯಾಗುತ್ತದೆ.

ಇದನ್ನೂ ಓದಿ : Gastric problem Solution : ಗ್ಯಾಸ್ಟ್ರಿಕ್‌ ಸಮಸ್ಯೆಗೆ ಬಾರ್ಲಿ ರಾಮಬಾಣ : ಒಮ್ಮೆ ಟ್ರೈ ಮಾಡಿ

ಇದನ್ನೂ ಓದಿ : Hair Straightening Product : ಹೇರ್‌ ಸ್ಟ್ರೈಟ್ನಿಂಗ್ ಮಾಡಿದ್ರೆ ಮಹಿಳೆಯರಿಗೆ ಗರ್ಭಗೋಶ ಕ್ಯಾನ್ಸರ್

There is an easy home remedy for hemorrhoids

Comments are closed.