Avatar The Way of Water : ಬಾಕ್ಸ್‌ ಆಫೀಸ್‌ನಲ್ಲಿ 8200 ಕೋಟಿ ರೂ.. ಬಾಚಿಕೊಂಡ ಅವತಾರ್ ದಿ ವೇ ಆಫ್ ವಾಟರ್

ಅವತಾರ್ ದಿ ವೇ ಆಫ್ ವಾಟರ್ (Avatar The Way of Water) ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಜೇಮ್ಸ್ ಕ್ಯಾಮರೂನ್ ಅವರ ಅವತಾರ್ ದಿ ವೇ ಆಫ್ ವಾಟರ್ ಬಾಕ್ಸ್ ಆಫೀಸ್‌ನಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ. ಪ್ರಚಂಚದಾದ್ಯಂತ ಹೆಚ್ಚಿನ ಸಿನಿರಸಿಕರು ಈ ಸಿನಿಮಾವನ್ನು ನೋಡುತ್ತಿದ್ದು, ಹೊಸ ದಾಖಲೆಯನ್ನು ಸೃಷ್ಟಿಸಿದೆ.

ಪ್ರಪಂಚದಾದ್ಯಂತ ಬಾಕ್ಸ್‌ ಆಫೀಸ್‌ ಕಲೆಕ್ಷನ್ ನಿಧಾನವಾಗಿದ್ದರೂ, ವಾರಾಂತ್ಯದಲ್ಲಿ ಈ ಸಿನಿಮಾ ಹೆಚ್ಚಿನ ಕಲೆಕ್ಷನ್‌ನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ. ಸಿನಿಮಾ ವಿತರಕರ ವರದಿಗಳ ಪ್ರಕಾರ, ಸಿನಿಮಾವು ವಿಶ್ವಾದ್ಯಂತ 12 ದಿನಗಳಲ್ಲಿ 1 ಬಿಲಿಯನ್ ಡಾಲರ್‌ (ರೂ 8,200 ಕೋಟಿ) ಅನ್ನು ಮೀರಿದೆ. ಮೊದಲೇ ವರದಿ ಮಾಡಿದಂತೆ, ಲಾಭ ಗಳಿಸಲು ಜಾಗತಿಕವಾಗಿ 2 ಬಿಲಿಯನ್ ಡಾಲರ್‌ ಗಳಿಸುವ ಅಗತ್ಯವಿದೆ ಎಂದು ಸಿನಿಮಾದ ನಿರ್ದೇಶಕರು ಹೇಳಿದ್ದರು. ಇನ್ನೂ ಮುಂದಿನ ಕಲೆಕ್ಷನ್‌ಗಳನ್ನು ನಿರ್ಧರಿಸುತ್ತದೆ.

ಅವತಾರ್ ದಿ ವೇ ಆಫ್ ವಾಟರ್ ಸಿನಿಮಾ ಡಿಸೆಂಬರ್ 16 ರಂದು ತೆರೆಗೆ ಬಂದಿದ್ದು, ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಸಿನಿಮಾವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ವೈಜ್ಞಾನಿಕ ಕಥಾಹಂದರವನ್ನು ಒಳಗೊಂಡ ಕಾಲ್ಪನಿಕ ಸಿನಿಮಾವು ಅಂತಿಮವಾಗಿ ಸಿನಿಮಂದಿರಗಳಲ್ಲಿ 12 ದಿನಗಳನ್ನು ಪೂರೈಸಿದೆ. ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಪ್ರಕಾರ, ಸಿನಿಮಾವು ವಿಶ್ವಾದ್ಯಂತ 1 ಶತಕೋಟಿ ಡಾಲರ್‌ ಅಂದರೆ 8,200 ಕೋಟಿ ರೂಪಾಯಿಗಳು ಸಂಗ್ರಹಿಸಿದೆ. ಅವರ ಟ್ವಿಟರ್‌ನಲ್ಲಿ, “ಅವತಾರ್ ದಿ ವೇ ಆಫ್ ವಾಟರ್ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 1 ಬಿಲಿಯನ್ ಡಾಲರ್‌ ದಾಟಿದೆ. ಉತ್ತರ ಅಮೇರಿಕಾ 300 ಮಿಲಿಯನ್‌ ಡಾಲರ್‌ ಕಲೆಕ್ಷನ್‌ ಆಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸುಮಾರು 700 ಮಿಲಿಯನ್ ಡಾಲರ್‌ ಕಲೆಕ್ಷನ್‌ ಆಗಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Pak Movie in India: ದಶಕಗಳ ಬಳಿಕ ಭಾರತದಲ್ಲಿ ರಿಲೀಸ್ ಆಗ್ತಿದೆ ಪಾಕಿಸ್ತಾನದ ಸೂಪರ್ ಹಿಟ್ ಸಿನಿಮಾ; ಹೊಸ ಸಾಹಸಕ್ಕೆ ಮುಂದಾದ ಐನಾಕ್ಸ್..!

ಇದನ್ನೂ ಓದಿ : Dash Song Release : ಹೊಸವರ್ಷಕ್ಕೆ ಚಂದನ್‌ ಶೆಟ್ಟಿ ಅಭಿನಯನದ ಸೂತ್ರಧಾರ ಸಿನಿಮಾದ ಡ್ಯಾಶ್‌ ಸಾಂಗ್‌ ರಿಲೀಸ್‌

ಇದನ್ನೂ ಓದಿ : Tininga Mininga Tishya Song : ‘ಸಲಗ’ ಸಿನಿಮಾದ ಗಾಯಕಿ ಗೀತಾ ಸಿದ್ಧಿಗೆ ಒಲಿದ ಡಾಕ್ಟರೇಟ್ ಪ್ರಶಸ್ತಿ

ಕಳೆದೆರಡು ದಿನಗಳ ಹಿಂದೆ ಅವತಾರ್ ದಿ ವೇ ಆಫ್ ವಾಟರ್ ಸಿನಿಮಾ ಭಾರತದಲ್ಲಿ 300 ಕೋಟಿ ರೂಪಾಯಿ ಕಲೆಕ್ಷನ್‌ ದಾಟಿದೆ ಎಂದು ವರದಿ ಆಗಿದೆ. ಜೇಮ್ಸ್ ಕ್ಯಾಮರೂನ್ ಅವರ ಅವತಾರ್ 2009 ರಲ್ಲಿ ಬಿಡುಗಡೆಯಾದಾಗ ಸಿನಿಮಾ ಪ್ರಿಯರನ್ನು ಆಶ್ಚರ್ಯಚಕಿತಗೊಳಿಸಿತು. ಸುಮಾರು 13 ವರ್ಷಗಳ ನಂತರ, ಅವತಾರ್ ದಿ ವೇ ಆಫ್ ವಾಟರ್ ಎಂಬ ಶೀರ್ಷಿಕೆಯು ಭಾರತದಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಸಿನಿಮಾವು ಸುಲ್ಲಿಯ ಜೀವನವನ್ನು ಅನುಸರಿಸುತ್ತದೆ. ಜೇಕ್, ನೆಯ್ಟಿರಿ ಮತ್ತು ಅವರ ಮಕ್ಕಳು ಅವತಾರ್‌ನಲ್ಲಿ ಸ್ಯಾಮ್ ವರ್ತಿಂಗ್ಟನ್, ಸಿಗೌರ್ನಿ ವೀವರ್, ಜೊಯಿ ಸಲ್ಡಾನಾ ಮತ್ತು ಕೇಟ್ ವಿನ್ಸ್ಲೆಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Avatar The Way of Water collected Rs 8200 crore at the box office.

Comments are closed.