ಭಾನುವಾರ, ಏಪ್ರಿಲ್ 27, 2025
HomeCinemaತೆರೆಗೆ ಅಂಡರ್ ವರ್ಲ್ಡ್ ಡಾನ್…..! ಸೆಟ್ಟೇರ್ತಿದೆ ಮುತ್ತಪ್ಪ ರೈ ಕತೆ…!!

ತೆರೆಗೆ ಅಂಡರ್ ವರ್ಲ್ಡ್ ಡಾನ್…..! ಸೆಟ್ಟೇರ್ತಿದೆ ಮುತ್ತಪ್ಪ ರೈ ಕತೆ…!!

- Advertisement -

ಬೆಂಗಳೂರು: ಒಂದು ಕಾಲದಲ್ಲಿ ಭೂಗತ ಲೋಕವನ್ನು ನಡುಗಿಸಿದ ಡಾನ್ ಮುತ್ತಪ್ಪ ರೈ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಆದರೇ ಅವರ ಅಟ್ಟಹಾಸದ ನೆನಪುಗಳು ಚರಿತ್ರೆಯಲ್ಲಿ ದಾಖಲಾಗಿವೆ. ಅಂತಹ ಸಂಗತಿಗಳನ್ನು ತೆರೆಗೆ ತರಲು ಮುತ್ತಪ್ಪ ರೈ ಜೀವನ ಸಿನಿಮಾ ಸೆಟ್ಟೇರುತ್ತಿದೆ.

ಮುತ್ತಪ್ಪ ರೈ ಜೀವನಾಧಾರಿತ ಕತೆ ಸಿನಿಮಾ ರೂಪದಲ್ಲಿ ಹೊರಗೆ ಬರುತ್ತೆ ಅನ್ನೋ ದು ಹಲವು ವರ್ಷಗಳಿಂದ ಕೇಳಿಬರ್ತಿದ್ದ ಮಾತು. ಆದರೇ ಚಿತ್ರ ಸೆಟ್ಟೇರಲೇ ಇಲ್ಲ. ಕತೆ ಕೇವಲ ಕತೆಯಾಗಿಯೇ ಉಳಿದು ಹೋಗಿತ್ತು.

ಆದರೆ ಈಗ ಮುತ್ತಪ್ಪ ರೈ ಸಾವಿನ ನಂತರ ಅವರ ಬದುಕಿನ ಕತೆ ಸಿನಿಮಾ ರೂಪದಲ್ಲಿ ತೆರೆಗೆ ಬರಲಿದೆ. ರಾಮನಗರದ ಸನಿಹದ ಶೀಲಾಂಧ್ರ ರೆಸಾರ್ಟ್ ನಲ್ಲಿ ಮುತ್ತಪ್ಪ ರೈ ಜೀವಾನಾಧಾರಿತ ಸಿನಿಮಾಕ್ಕೆ ಮುಹೂರ್ತ ನೆರವೇರಿಸಲಾಗಿದೆ.

ಸೌಭಾಗ್ಯಲಕ್ಷ್ಮೀ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಎಂಆರ್ ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. ಚಿತ್ರವನ್ನು ರವಿಶ್ರೀವತ್ಸ ನಿರ್ದೇಶಿಸಿದ್ದು, ತಾರಾಗಣ ಹಾಗೂ ಮುತ್ತಪ್ಪ ರೈ ಪಾತ್ರ ಯಾರು ನಿರ್ವಹಿಸಲಿದ್ದಾರೆ ಎಂಬುದರ ಬಗ್ಗೆ ಚಿತ್ರತಂಡ ಗೌಪ್ಯತೆ ಕಾಯ್ದುಕೊಂಡಿದೆ.

ಮೂಲಗಳ ಪ್ರಕಾರ ಚಿತ್ರದ ಮುಹೂರ್ತದಂದು ಮುತ್ತಪ್ಪ ರೈ ಪಾತ್ರಧಾರಿಯ ಗ್ರ್ಯಾಂಡ್ ಎಂಟ್ರಿ ದೃಶ್ಯವನ್ನು ರೆಕಾರ್ಡ್ ಮಾಡಿಕೊಳ್ಳಲಾಗಿ ದ್ದು, ಹೆಲಿಕ್ಯಾಪ್ಟರ್ ನಿಂದ ಇಳಿಯುವ ದೃಶ್ಯ ಶೂಟ್ ಮಾಡಲಾಗಿದೆ ಎನ್ನಲಾಗಿದೆ.

ಕ್ಯಾನ್ಸರ್ ಗೆ ತುತ್ತಾಗಿದ್ದ ಮುತ್ತಪ್ಪ ರೈ ಸಾವಿಗೂ ಮುನ್ನವೇ ಅವರ ಜೀವನಚರಿತ್ರೆ ಸಿನಿಮಾ ಆಗಲಿದೆ ಎನ್ನಲಾಗಿತ್ತು. ಆದರೆ ಕಳೆದ ಮೇನಲ್ಲಿ ಮುತ್ತಪ್ಪ ರೈ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ.

RELATED ARTICLES

Most Popular