ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಚಿನ್ನದ ದರ 4 ಸಾವಿರ, ಬೆಳ್ಳಿ 6 ಸಾವಿರ ರೂ. ಇಳಿಕೆ

ನವದೆಹಲಿ : ಕಳೆದ ಹಲವು ತಿಂಗಳುಗಳಿಂದ ಏರುಗುತಿಯನ್ನೇ ಕಾಣುತ್ತಿದ್ದ ಚಿನ್ನ ಇದೀಗ ಆಭರಣ ಪ್ರಿಯರಿಗೆ ಸಿಹಿಕೊಟ್ಟಿದೆ. ಕಳೆದ ಮೂರು ವಾರಗಳಲ್ಲಿ ಚಿನ್ನದ ದರ 4000 ರೂ.ನಷ್ಟು ಕಡಿಮೆಯಾಗಿದೆ. ಅಲ್ಲದೇ ಬೆಳ್ಳಿಯ ದರದಲ್ಲಿ ಬಾರಿ ಇಳಿಕೆಯನ್ನು ಕಂಡಿದೆ. ಅದೇ ರೀತಿ ಬೆಳ್ಳಿ ಬೆಲೆಯೂ ಇಳಿಕೆಯಾಗಿದೆ.

ಸ್ಟ್ಯಾಂಡರ್ಡ್ ಚಿನ್ನದ ದರ 10 ಗ್ರಾಂಗೆ 49,090 ರೂಪಾಯಿಗೆ ಇಳಿಕೆಯಾಗಿದೆ. ಆಭರಣ ಚಿನ್ನದ ದರ 10 ಗ್ರಾಂಗೆ 45 ಸಾವಿರ ರೂಪಾಯಿ ಇದೆ. ಕಳೆದ ಮೂರು ವಾರಗಳಲ್ಲಿ ಚಿನ್ನದ ದರ 4 ಸಾವಿ ರೂ.ಹಾಗೂ ಬೆಳ್ಳಿ ದರ ಪ್ರತಿ ಕೆಜಿಗೆ 6000 ರೂ.ನಷ್ಟು ಇಳಿಕೆಯನ್ನು ಕಂಡಿದೆ.

ಜಾಗತಿಕ ಬೆಳವಣಿಗಳನ್ನು ಆಧರಿಸಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಳಿತವಾಗುತ್ತದೆ. ಕೊರೋನಾ ಲಸಿಕೆ ಅಭಿವೃದ್ಧಿ, ಅಮೆರಿಕದಲ್ಲಿ ರಾಜಕೀಯ ಅಸ್ಥಿರತೆ ತಿಳಿಯಾಗಿರುವುದು ಮೊದಲಾದ ಬೆಳವಣಿಗೆಗಳು ಹಾಗೂ ಚಿನ್ನದ ಮೇಲಿನ ಹೂಡಿಕೆ, ಬೇಡಿಕೆ ಕಡಿಮೆಯಾಗಿರುವುದರಿಂದ ಗೋಲ್ಡ್ ರೇಟ್ ಇಳಿಕೆ ಹಾದಿಯಲ್ಲಿದೆ ಎನ್ನಲಾಗಿದೆ

Comments are closed.