DK Shivakumar : ಬಿಜೆಪಿ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಗೈದ ಕೆಪಿಸಿಸಿ ಡಿ.ಕೆ ಶಿವಕುಮಾರ್​​

ಚಿತ್ರದುರ್ಗ : DK Shivakumar : ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್​ ಪಕ್ಷವು 40 ಪರ್ಸೆಂಟ್​ ಕಮಿಷನ್​ ಆರೋಪವನ್ನು ಮಾಡುತ್ತಲೇ ಬಂದಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ಪೇಸಿಎಂ ಎಂಬ ಅಭಿಯಾನವನ್ನು ನಡೆಸುವ ಮೂಲಕ ಬಿಜೆಪಿ ಸರ್ಕಾರಕ್ಕೆ ಛಾಟಿ ಬೀಸುವ ಕಾರ್ಯವನ್ನು ಮಾಡುತ್ತಿದೆ. ಇಂದು ಇದೇ ವಿಚಾರವಾಗಿ ಚಿತ್ರದುರ್ಗದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​, ರಾಜ್ಯದಲ್ಲಿರುವ ಬಿಜೆಪಿ ಸರ್ಕಾರವು 40 ಪರ್ಸೆಂಟ್​​ ಸರ್ಕಾರವಾಗಿದೆ. ಈ ರಾಜ್ಯ ಹಾಗೂ ದೇಶಕ್ಕೆ ಈ ಸರ್ಕಾರವು ಕೆಟ್ಟ ಹೆಸರು ತಂದಿದೆ ಎಂದು ಗುಡುಗಿದ್ದಾರೆ.

ಬಿಜೆಪಿಯವರಿಗೆ ಯಾವ ರೀತಿಯಲ್ಲಿ ವಿಚಾರಣೆ ಮಾಡಿದರೂ ನನ್ನನ್ನು ಏನು ಮಾಡಲು ಅವರಿಂದ ಸಾಧ್ಯವಾಗಿಲ್ಲ. ,ಮೂರು ವರ್ಷದಿಂದ ನನಗೆ ಏನು ಮಾಡಲು ಅವರಿಂದ ಸಾಧ್ಯವಾಗಲಿಲ್ಲ. ಮುಂದೆಯೂ ಸಾಧ್ಯವಾಗಲ್ಲ. ನಮ್ಮ ಪಕ್ಷದ ಶಾಸಕರನ್ನು ನಾನು ರಕ್ಷಿಸಿಟ್ಟುಕೊಂಡಿದ್ದೆ. ಅದಕ್ಕೆ ಅಧಿಕಾರ ದುರ್ಬಳಕೆ ಮಾಡಿಕೊಂಡು ನನ್ನ ಮೇಲೆ ಕೇಸ್​ ಹಾಕಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ದಾಳಿ ನಡೆಸಿ ನನ್ನ ಮೇಲೆ ಕೇಸ್​ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಗುಡುಗಿದ್ದಾರೆ.

40 ಪರ್ಸೆಂಟ್​ ಕಮಿಷನ್​ ತೆಗೆದುಕೊಳ್ಳುವುದು , ಲಂಚ , ಮಂಚ ಇವೆಲ್ಲ ಬಿಜೆಪಿಯ ಮೂಲಭೂತ ಬಳುವಳಿಯಾಗಿದೆ. ನನಗೆ ಸಚಿವ ಅಶೋಕ್​ ಮತ್ತು ಯಾರೂ ಹೇಳುವ ಅಗತ್ಯವಿಲ್ಲ. ಜನ ಬಿಜೆಪಿ ಸರ್ಕಾರಕ್ಕೆ ಭ್ರಷ್ಟ ಸರ್ಕಾರ ಎಂಬ ಗಿಫ್ಟ್​​ ಕೊಟ್ಟಿದ್ದಾರೆ. ಭ್ರಷ್ಟ ಸರ್ಕಾರ ಎಂಬ ಬಿರುದನ್ನು ತೊಳೆದುಕೊಂಡು ರಾಜ್ಯದ ಜನರ ಗೌರವವನ್ನು ಬಿಜೆಪಿ ಉಳಿಸಲಿ ಎಂದು ಕಿವಿ ಹಿಂಡಿದ್ದಾರೆ.

ಭಾರತ್ ಜೋಡೋ ಅಲ್ಲ, ಕಾಂಗ್ರೆಸ್ ಜೋಡೋ ಎಂದು ಬಿಜೆಪಿ ವ್ಯಂಗ್ಯ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು ನಮ್ಮ ವಿಚಾರ ನಾವೇನಾದರೂ ಮಾಡಿಕೊಳ್ಳುತ್ತೇವೆ ಬಿಡಿ. ನಿಮಗ್ಯಾಕೆ ಅದರ ಚಿಂತೆ ಎಂದು ಪ್ರಶ್ನಿಸಿದ್ದಾರೆ. ಭಾರತ್ ಜೋಡೋ ಯಾತ್ರೆ ವೇಳೆ ಬಿಜೆಪಿಯಿಂದ ರಾಹುಲ್ ಗೋಬ್ಯಾಕ್ ಅಭಿಯಾನ ವಿಚಾರವಾಗಿ ಇದೇ ವೇಳೆ ಮಾತನಾಡಿದ ಅವರು ಗೋಬ್ಯಾಕ್ ಆದರೂ ಮಾಡಲಿ, ಕಂ ಬ್ಯಾಕ್ ಆದರೂ ಮಾಡಲಿ ಎಂದು ಹೇಳಿದ್ದಾರೆ.

ಇದನ್ನು ಓದಿ : Jambu Savari: ಮೈಸೂರಿನಲ್ಲಿ ಜಂಬೂ ಸವಾರಿ ಮಾದರಿಯಲ್ಲಿ ನಡೆಯಲಿದೆ ಗ್ರಾಮೀಣ ದಸರೆ

ಇದನ್ನೂ ಓದಿ : BCCI Election : ಅಕ್ಟೋಬರ್ 18ಕ್ಕೆ ಬಿಸಿಸಿಐ ಚುನಾವಣೆ; ಅಮಿತ್ ಶಾ ಮಗ ಅಧ್ಯಕ್ಷರಾದ್ರೆ ದಾದಾ ಕಥೆಯೇನು ?

KPCC President DK Shivakumar’s outrage against the BJP government

Comments are closed.