ಬ್ಯಾಡ್ ಬಾಯ್ ಸಿನಿಮಾಗೆ ದೇವಿಶ್ರೀ ಸಂಗೀತ:  ಮತ್ತೊಮ್ಮೆ ಒಂದಾದ ಡಿಂಕ್ ಚಿಕಾ ಜೋಡಿ

ಒಂದಾದ ಮೇಲೊಂದರಂತೆ ಸದ್ದು ಮಾಡುತ್ತಿರುವ ಸೌತ್ ಸಿನಿಮಾಗಳಿಂದ ಬಾಲಿವುಡ್ ಸೂಪರ್ ಸ್ಟಾರ್ ಗಳು ಕಂಗೆಟ್ಟಿದ್ದಾರೆ. ಸಲ್ಮಾನ್ ಖಾನ್ ಸಿನಿಮಾಗಳಂತೂ ಹೇಳ ಹೆಸರಿಲ್ಲದೇ ಥಿಯೇಟರ್ ನಿಂದ ಮರೆಯಾಗುತ್ತಿದೆ. ಹೀಗಾಗಿ ಒಂದು ಗೆಲುವಿಗಾಗಿ ಕಾದಿರುವ ಸಲ್ಮಾನ್ ಖಾನ್ ಈಗ ತಮ್ಮ ಹಳೆ ಮ್ಯೂಸಿಕ್ ಡೈರೈಕ್ಟರ್, ಸದ್ಯ ಊ ಅಂತಿಯಾ ಮಾವಾ‌ ಉಹೂಂ ಅಂತಿಯಾ ಮಾವಾ ಮೂಲಕ ಸದ್ದು ಮಾಡಿದ ದೇವಿಶ್ರೀ ಪ್ರಸಾದ್ ಮೊರೆ ಹೋಗಿದ್ದಾರೆ.

ಹೌದು ಸಲ್ಮಾನ್ ಖಾನ್ ಸಿನಿಮಾಗಳು ಮೊದಲಿನ‌ಚಾರ್ಮ್ ಹಾಗೂ ಬೇಡಿಕೆ ಕಳೆದುಕೊಂಡಿದೆ. ಆದರೆ ಸಲ್ಮಾನ್ ಖಾನ್ ಗೆಲ್ಲುವ ಕನಸು ಕಡಿಮೆಯಾಗಿಲ್ಲ. ಹೀಗಾಗಿ ಸದಾ ತಮ್ಮ ಹಾಡುಗಳ ಮೂಲಕ ಸಲ್ಮಾನ್ ಗೆ ಗೆಲುವು ತಂದುಕೊಡುತ್ತಿದ್ದ. ದೇವಿಶ್ರೀ ಪ್ರಸಾದ್ ಮೊರೆ ಹೋಗಿದ್ದಾರೆ‌ಸಲ್ಮಾನ್ ಖಾನ್.

ಸಲ್ಮಾನ್ ಖಾನ್ ನಟನೆಯ ಸಿನಿಮಾ ಕಬಿ ಈದ್ ಕಬಿ ದಿವಾಲಿ ಸಿನಿಮಾದ ಸಂಗೀತ ನಿರ್ದೇಶನಕ್ಕಾಗಿ ಸಲ್ಮಾನ್ ಖಾನ್ ದೇವಿಶ್ರೀ ಪ್ರಸಾದ್ ಅವರನ್ನು ಬರಮಾಡಿಕೊಂಡಿದ್ದಾರೆ.

ಈ ಹಿಂದೆ ಸಲ್ಮಾನ್ ಖಾನ್ ನಟಿಸಿದ್ದ ‘ರೆಡಿ’ ಸಿನಿಮಾದ ‘ಡಿಂಕ ಚಿಕಾ..’ ಹಾಡಿಗೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದರು. ಆ ಗೀತೆ ಕೂಡ ಸೂಪರ್ ಹಿಟ್ ಆಗಿತ್ತು. ‘ರಾಧೆ: ಯುವರ್ ಮೋಸ್ಟ್ ವಾಂಡೆಟ್ ಭಾಯ್’ ಚಿತ್ರದಲ್ಲಿನ ‘ಸೀಟಿ ಮಾರ್..’ ಹಾಡು ಕೂಡ ಸಲ್ಮಾನ್ ಖಾನ್ ಅಭಿಮಾನಿಗಳ ಮನಗೆದ್ದಿತ್ತು.

ಹೀಗೆ ದೇವಿಶ್ರೀ ಸಲ್ಮಾನ್ ಖಾನ್ ಗಾಗಿ ಸಂಯೋಜನೆ ಮಾಡಿದ್ದ ಹಾಡುಗಳೆಲ್ಲ ಗೆದ್ದು ಸದ್ದು ಮಾಡಿದೆ. ಹೀಗಾಗಿ ಮತ್ತೊಮ್ಮೆ ಅಂಥದ್ದೇ ಮ್ಯಾಜಿಕ್ ಮಾಡಲು ಅವರನ್ನು ‘ಕಭಿ ಈದ್ ಕಭಿ ದಿವಾಲಿ’ ಚಿತ್ರತಂಡಕ್ಕೆ ಸಲ್ಮಾನ್ ಖಾನ್ ಬರಮಾಡಿಕೊಂಡಿದ್ದು. ಈ ಚಿತ್ರಕ್ಕೆ ಶೀಘ್ರವೇ ಶೂಟಿಂಗ್ ಆರಂಭವಾಗಲಿದೆ. ಈ ಸಿನಿಮಾ ವರ್ಷಾಂತ್ಯಕ್ಕೆ ತೆರೆಕಾಣುವ ನೀರಿಕ್ಷೆ ಇದೆ.

ಪುಷ್ಪ ಸಿನಿಮಾ ತೆರೆಕಂಡ ಬಳಿಕ ದೇವಿಶ್ರೀ ಮ್ಯೂಸಿಕಲ್ ಜಾದೂ ಇಡೀ ದೇಶದಲ್ಲಿ ಮನೆ ಮಾತಾಗಿದೆ. ದೇವಿ ಶ್ರೀ ಪ್ರಸಾದ್ ಅವರು ಸೆನ್ಸೇಷನ್ ಸೃಷ್ಟಿ ಮಾಡಿದ್ದು,ಪುಷ್ಪ ಸಿನಿಮಾದ ಎಲ್ಲ ಹಾಡುಗಳು ಮೋಡಿ ಮಾಡಿವೆ. ಆದರೆ   ಪುಷ್ಪ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದ ವೇಳೆ ದೇವಿ ಶ್ರೀ ಪ್ರಸಾದ್ ಅವರು ಐಟಂ ಸಾಂಗ್ಗಳನ್ನು ಭಕ್ತಿ ಗೀತೆಗೆ ಹೋಲಿಸಿ ವಿವಾದಕ್ಕೆ ಗುರಿಯಾಗಿದ್ದರು.  

Comments are closed.