five workers died : ಮಂಗಳೂರು ಮೀನು ಕಾರ್ಖಾನೆ ದುರಂತ: ಸಾವಿನ ಸಂಖ್ಯೆ ಐದಕ್ಕೇರಿಕೆ

ಮಂಗಳೂರು : ಎಂಎಸ್​ಇಜೆಡ್​​ನ ಶ್ರೀ ಉಲ್ಕಾ ಫಿಶ್​ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ(five workers died ) ಏರಿಕೆಯಾಗಿದೆ. ಈ ದುರ್ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ದುರಂತದಲ್ಲಿ ಮೃತಪಟ್ಟವರನ್ನು ಸಮಿಉಲ್ಲಾ ಇಸ್ಲಾಮ್​, ಉಮ್ಮರ್​ ಫಾರೂಕ್​, ನಿಜಾಮುದ್ದೀನ್​, ಮಿರಾಜುಲ್​ ಇಸ್ಲಾಂ ಹಾಗೂ ಶರಾಫತ್​ ಅಲಿ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಪಶ್ಚಿಮ ಬಂಗಾಳ ಮೂಲದವರು ಎನ್ನಲಾಗಿದೆ.


ದುರಂತ ನಡೆದ ಶ್ರೀ ಉಲ್ಕಾ ಕಂಪನಿಯು ಮುಂಬೈ ಮೂಲದ ರಾಜು ಎಂಬವರ ಮಾಲೀಕತ್ವವನ್ನು ಹೊಂದಿದೆ. ಈ ಪ್ರಕರಣದಲ್ಲಿ ಗಾಯಗೊಂಡಿರುವ ಹಸನ್​​ ಅಲಿ, ಮೊಹಮ್ಮದ್​ ಕರೀಬುಲ್ಲಾ ಹಾಗೂ ಹಫೀಜುಲ್ಲಾ ಎಂಬವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿನ್ನೆ ರಾತ್ರಿ ನಡೆದ ದುರ್ಘಟನೆಯಲ್ಲಿ ಮೊದಲು ಮೂವರು ಕಾರ್ಮಿಕರು ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದವರಲ್ಲಿ ಇಂದು ಇಬ್ಬರು ಸಾವನ್ನಪ್ಪಿದ್ದಾರೆ. ಶ್ರೀ ಉಲ್ಕಾ ಎಲ್​ಎಲ್​ಪಿ ಮೀನು ಸಂಸ್ಕರಣಾ ಕಂಪನಿಯ ತ್ಯಾಜ್ಯ ಸಂಗ್ರಹ ತೊಟ್ಟಿಯಲ್ಲಿ ಇವರೆಲ್ಲ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.


ಈ ಪ್ರಕರಣ ಸಂಬಂಧ ಪೊಲೀಸರು ಪ್ರೊಡಕ್ಷನ್​​ ಮ್ಯಾನೇಜರ್​​ ರೂಬಿ ಜೋಸೆಫ್​, ಏರಿಯಾ ಮ್ಯಾನೇಜರ್​ ಕುಬೇರ್​ ಗಾಡೆ ಹಾಗೂ ಸೂಪರ್​ವೈಸರ್​​ ಮೊಹಮ್ಮದ್​​ ಅನ್ವರ್​​ರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರಿಗೆ ಯಾವುದೇ ರಕ್ಷಣಾತ್ಮಕ ಉಪಕರಣಗಳನ್ನು ನೀಡದೇ ಇದ್ದುದೇ ಈ ಅವಘಡಗಳಿಗೆ ಕಾರಣ ಎನ್ನಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಬಜಪೆ ಠಾಣೆಯಲ್ಲಿ 337,338,304 ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಸದ್ಯ ಮೃತಪಟ್ಟವರ ಶವಗಳನ್ನು ಮಂಗಳೂರಿನ ಎಜೆ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಕುಟುಂಬಸ್ಥರಿಗೂ ಈಗಾಗಲೇ ದುರ್ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಮರಣೋತ್ತರ ಪರೀಕ್ಷೆಗಳನ್ನು ನಡೆಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ನೀಡಲಾಗುತ್ತದೆ.

ಇದನ್ನು ಓದಿ : free electricity in Punjab : ಪಂಜಾಬ್ ಜನತೆಗೆ ಗುಡ್​ನ್ಯೂಸ್​ ನೀಡಿದ ಆಪ್​ ಸರ್ಕಾರ

ಇದನ್ನೂ ಓದಿ : ಬಸ್ ಗಳಿಗೆ ಬೆಂಕಿ ಕಾಟ : MIDI BUSಗಳ ಓಡಾಟವನ್ನೇ ನಿಲ್ಲಿಸಿದ ಬಿಎಂಟಿಸಿ

five workers died in mangalore fish factory poisonous gas accident

Comments are closed.