ಕಲಾವಿದರಿಗೆ ಚಪ್ಪಲಿ ತೋರಿಸಿದ್ರಾ ರಕ್ಷಿತಾ? ಮಾತು ಬದಲಾಯಿಸಿದ ಅಶ್ವಿನಿ ಗೌಡಗೆ ಕಿಚ್ಚನ ಕ್ಲಾಸ್!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋನಲ್ಲಿ ಸದ್ಯ ಜಗಳದ್ದೇ ಸುದ್ದಿ. ಯಾವಾಗ ನೋಡಿದ್ರೂ ಸ್ಪರ್ಧಿಗಳು ಜಗಳ ಆಡ್ತಾನೇ ಇರ್ತಾರೆ. ಅದರಲ್ಲೂ ಅಶ್ವಿನಿ ಗೌಡ ಕಿರಿಕ್ ಜಾಸ್ತಿ. ರಕ್ಷಿತಾ ಶೆಟ್ಟಿಯನ್ನು ಕಂಡ್ರೆ ಅಶ್ವಿನಿಗೆ ಆಗಲ್ಲ. ಯಾವಾಗಲೂ ಇಬ್ಬರು ಜಗಳವಾಡ್ತಾನೆ ಇರ್ತಾರೆ. ಇನ್ನು ಕಳೆದ ವಾರ ರಕ್ಷಿತಾ ಹೇಳಿದ ಮಾತನ್ನು ಅಶ್ವಿನಿ ಗೌಡ ತಿರುಚಿದ್ದಾರೆ. ಅದಕ್ಕೆ ಇಂದು ವಾರದ ಕಥೆ ಕಿಚ್ಚನ ಜೊತೆಯಲ್ಲಿ ಸಂಚಿಕೆಯಲ್ಲಿ ಸುದೀಪ್ ಅಶ್ವಿನಿ ಗೌಡಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ರಕ್ಷಿತಾ ಹೇಳಿದ್ದೇನು
ಇನ್ನು ಕಳೆದ ವಾರ ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿ ಗೌಡಗೆ ಜಗಳವಾಗ್ತಾ ಇರುತ್ತೆ. ಆಗ ರಕ್ಷಿತಾ ನನಗೆ ನಿಮ್ಮ ವೋಟು ಬೇಡ. ನಿಮ್ಮ ವೋಟು ನನ್ನ ಚಪ್ಪಲಿಗೆ ಸಮಾನ. ಕಾಲ ಕೆಳಗೆ ಎಂದು ಹೇಳಿರ್ತಾರೆ. ಅದನ್ನು ಅಶ್ವಿನಿ ಗೌಡ ಇನ್ನೊಂದು ಸಲ ಹೇಳು ಹೇಳು ಅನ್ನುತ್ತಾರೆ.

ಕಲಾವಿದರಿಗೆ ಚಪ್ಪಲಿ ತೋರಿಸಿದ್ರು
ಇನ್ನು ಅಶ್ವಿನಿ ಗೌಡ ರಕ್ಷಿತಾ ಅವರ ಮಾತನ್ನು ತಿರುಚಿ, ರಕ್ಷಿತಾ ಕಲಾವಿದರಿಗೆ ಅವಮಾನ ಮಾಡಿದ್ಲು. ಚಪ್ಪಲಿ ತೋರಿಸಿದ್ಲು ಎಂದು ಹೇಳ್ತಾರೆ. ಈ ವಿಚಾರ ಹೊರಗಡೆಯೂ ಚರ್ಚೆ ಆಗುತ್ತದೆ. ರಕ್ಷಿತಾ ಅವರಿಗೆ ಸುದೀಪ್ ಏನು ಹೇಳಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದ್ವು.

ಸುದೀಪ್ ಕ್ಲಾರಿಟಿ
ಅದಕ್ಕೆ ಸುದೀಪ್ ಇಂದಿನ ಸಂಚಿಕೆಯಲ್ಲಿ ಅದಕ್ಕೆ ಕ್ಲಾರಿಟಿ ಕೊಟ್ಟಿದ್ದಾರೆ. ಕಲಾವಿದರಿಗೆ ಚಪ್ಪಲ ತೊರಿಸಿದ್ರಾ? ಇಲ್ಲ.. ಯಾರ್ಯಾರೋ ಏನೇನೋ ಮಾತನಾಡ್ತಾ ಇದ್ದಾರೆ. ಎಲ್ಲಾ ಕಲಾವಿದರಿಗೂ ನಾನು ಹೇಳ್ತಾ ಇದ್ದೇನೆ ರಕ್ಷಿತಾ ಆ ರೀತಿ ಮಾತನಾಡಿಲ್ಲ ಎಂದಿದ್ದಾರೆ. ನಾನು ಒಬ್ಬ ಕಲಾವಿದ ಎಂದು ಹೇಳಿದ್ದಾರೆ.

ಅಶ್ವಿನಿ ಗೌಡಗೆ ಕ್ಲಾಸ್
ಇನ್ನು ಮಾತು ತಿರುಚಿದ ಅಶ್ವಿನ ಗೌಡ ಅವರಿಗೆ ಸುದೀಪ್ ಅವರು ಮಾತಿನಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀವು ಏಕೆ ತಪ್ಪಾಗಿ ಹೇಳಿ ಎಲ್ಲರ ದಾರಿ ತಪ್ಪಿಸಬೇಡಿ ಎಂದಿದ್ದಾರೆ.

ಹಾಗಾದ್ರೆ ಇನ್ನು ಏನೇನು ಮಾತು ಕಥೆ ಆಯ್ತು? ಅಶ್ವಿನಿ ಗೌಡ ಹೇಳಿದ್ದು ಸುಳ್ಳ? ರಕ್ಷಿತಾ ಶೆಟ್ಟಿನಾ ಟಾರ್ಗೆಟ್ ಮಾಡ್ತಾ ಇದಾರಾ? ಎಲ್ಲವನ್ನೂ ನೋಡಬೇಕು ಅಂದ್ರೆ ನೀವು ಇವತ್ತಿನ ಸಂಚಿಕೆಯನ್ನು ಮಿಸ್ ಮಾಡ್ದೇ ನೋಡಬೇಕು. ಸುದೀಪ್ ಪಂಚಾಯಿತಿ ಸಖತ್ ಆಗಿ ಇದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories