ನಿರ್ದೇಶಕ ಉಮಾಪತಿ ರಾಕಿಂಗ್‌ ಸ್ಟಾರ್‌ ಯಶ್‌ ಜೊತೆ ಸಿನಿಮಾ ಮಾಡ್ತಾರಾ ? ಯಾವಾಗ

ಸ್ಯಾಂಡಲ್‌ವುಡ್‌ನ ದುಬಾರಿ ನಿರ್ದೇಶಕರಲ್ಲಿ ಉಮಾಪತಿ (Umapathy Srinivas Gowda)ಕೂಡ ಒಬ್ಬರು. ಈಗಾಗಲೇ ‘ಹೆಬ್ಬುಲಿ’, ‘ರಾಬರ್ಟ್’, ‘ಮದಗಜ’ ಅಂತಹ ನೂರಾರು ಕೋಟಿ ರೂ. ಸಿನಿಮಾಗಳನ್ನು ಮಾಡಿದ್ದಾರೆ. ಈಗ ಸ್ಯಾಂಡಲ್‌ವುಡ್‌ನ ಕಾಮಿಡಿ ಕಿಂಗ್ ಚಿಕ್ಕಣ್ಣ ನಟಿಸುತ್ತಿರುವ ‘ಉಪಾಧ್ಯಕ್ಷ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗ ಸಿನಿಮಾ, ರಾಜಕೀಯ ಅಂತ ಎರಡೂ ಕಡೆ ಕಾಲಿಟ್ಟಿರೋ ಸದ್ಯ ಉಮಾಪತಿ ಗಮನ ಚುನಾವಣೆ ಮೇಲಿದೆ. ಇದೇ ಸಂದರ್ಭದಲ್ಲಿ ನಿರ್ಮಾಪಕ ಉಮಾಪತಿ ಮತ್ತೊಂದು ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಕಿ ಭಾಯ್ (Director Umapathy – Actor Yash) ಜೊತೆ ಸಿನಿಮಾ ಮಾಡುವುದರ ಬಗ್ಗೆ ಯೂಟ್ಯೂಬ್ ಚಾನೆಲ್‌ಗೆ ಹೇಳಿಕೆ ಕೊಟ್ಟಿದ್ದಾರೆ.

ರಾಬರ್ಟ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂ. ಗಳಿಸಿದ ಬಳಿಕ ಮುಂದಿನ ಸಿನಿಮಾ ಬಗ್ಗೆ ಆಸೆ ವ್ಯಕ್ತಪಡಿಸಿದ್ದರು. ಈ ವೇಳೆ ರಾಕಿ ಭಾಯ್‌ ಯಶ್‌ಗೆ ಸಿನಿಮಾ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಉಮಾಪತಿ ಹಾಗೂ ಯಶ್ ಕಾಂಬಿನೇಷನ್ ಸಿನಿಮಾ ಮುಂದೇನಾಯ್ತು ಅನ್ನೋದು ಸುಳಿವೇ ಸಿಕ್ಕಿರಲಿಲ್ಲ. ಈಗ ಇದೇ ಸಿನಿಮಾ ಬಗ್ಗೆ ಯೂಟ್ಯೂಬ್‌ ಚಾನಲ್‌ವೊಂದಕ್ಕೆ ಮಾಹಿತಿ ರವಾನೆ ಮಾಡಿದ್ದಾರೆ.

‘ಈಗ ಅವರೂ ಬ್ಯುಸಿ ಇದ್ದಾರೆ. ನನ್ನ ಪ್ರಕಾರ, ಅಧಿಕೃತವಾಗಿ ಅವರ ಅಕೌಂಟ್‌ಗೆ ದುಡ್ಡು ಟ್ರಾನ್ಸ್‌ಫರ್ ಆದಾಗ ಮಾತ್ರ ನಾವೊಂದು ಸಿನಿಮಾ ಮಾಡುತ್ತಿದ್ದೇವೆ ಎಂದು ಅನೌನ್ಸ್ ಮಾಡಬಹುದು. ನಮ್ಮ ಮತ್ತು ಅವರ ನಡುವೆ ಕೆಲವು ಮಾತುಕತೆಗಳು ಆಗಿದೆ. ನಾನು ಹೇಳಿದ್ನಲ್ಲ ನಮ್ಮ ಅಕೌಂಟ್‌ನಿಂದ ಅಧಿಕೃತವಾಗಿ ಅವರ ಅಕೌಂಟ್‌ಗೆ ಹಣ ವರ್ಗಾವಣೆ ಆದಾಗ ಮಾತ್ರ ಆಫೀಶಿಯಲ್ ಆಗಿ ಅನೌನ್ಸ್ ಮಾಡುವುದಕ್ಕೆ ಸಾಧ್ಯ.’ ಎಂದು ಉಮಾಪತಿ ಹೇಳಿದ್ದಾರೆ.

ಇದನ್ನೂ ಓದಿ : ಜಾಕ್ವೆಲಿನ್, ನೋರಾ ಅಲ್ಲ, ‘ಕಬ್ಜ’ ಐಟಂ ಸಾಂಗ್‌ನಲ್ಲಿ ಕುಣಿಯೋದು ಯಾರು ಗೊತ್ತಾ?

ಇದನ್ನೂ ಓದಿ : ಕಬ್ಜದಲ್ಲಿ ಶಿವಣ್ಣ ಇದ್ದಾರೆಂದು ನಟಿ ಪ್ರಿಯಾಂಕಾ ಉಪೇಂದ್ರ ಮಾತಿಗೆ ಕುತೂಹಲಕಾರಿ ಉತ್ತರ ಕೊಟ್ಟ ಆರ್.ಚಂದ್ರು

ಇದನ್ನೂ ಓದಿ : ಪ್ರಶಾಂತ್‌ ನೀಲ್‌, ನಟ ಪ್ರಭಾಸ್‌ ಕಾಂಬಿನೇಷನ್‌ “ಸಲಾರ್‌” ಸಿನಿಮಾದ ಟೀಸರ್‌ ರಿಲೀಸ್‌ ಡೇಟ್‌ ಫಿಕ್ಸ್‌

ನಿರ್ಮಾಪಕ ಉಮಾಪತಿ ರಾಕಿ ಭಾಯ್ ಯಶ್ ಸಿನಿಮಾ ಮಾಡುತ್ತಾರಾ? ಯಾವಾಗ ಮಾಡುತ್ತಾರೆ? ಅನ್ನೋದನ್ನೂ ತಿಳಿಸಿದ್ದಾರೆ. ‘100 ಪರ್ಸೆಂಟ್ ಸತ್ಯ. ಯಶ್ ಅವರೇ ಕನ್ನಡ ನಿರ್ಮಾಪಕರಿಗೆ ಪ್ರಾಮುಖ್ಯತೆ ಕೊಡುತ್ತೇವೆ ಅಂತ ಹೇಳಿದ್ದಾರೆ. ಆ ಬಗ್ಗೆ ಅವರಿಗೆ ಬಹಳ ಅಭಿಮಾನವಿದೆ. ನನ್ನ ಬಗ್ಗೆ ವಿಶೇಷವಾದ ಪ್ರೀತಿನೂ ಇದೆ. ಗೌರವನೂ ಇದೆ. ಹಾಗಾಗಿ ಖಂಡಿತವಾಗಿಯೂ ಮಾಡೇ ಮಾಡುತ್ತೇವೆ.’ ಎಂದು ಕರ್ನಾಟಕ ಟಿವಿಗೆ ಉಮಾಪತಿ ಮಾಹಿತಿ ನೀಡಿದ್ದಾರೆ. ನಿರ್ಮಾಪಕ ಉಮಾಪತಿ ಸಿನಿಮಾ ಜೊತೆ ಚುನಾವಣಾ ಕಣಕ್ಕೆ ಇಳಿಯುತ್ತಾರೆ ಅನ್ನೋ ಮಾಹಿತಿ ಇದೆ. ಉಮಾಪತಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದು, ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

Director Umapathy – Actor Yash: Will director Umapathy do a movie with rocking star Yash? when

Comments are closed.