Sugar free food Benefits : ಒಂದು ತಿಂಗಳ ಕಾಲ ಸಕ್ಕರೆ ರಹಿತ ಆಹಾರದಿಂದ ಏನೆಲ್ಲಾ ಲಾಭ ಸಿಗುತ್ತೆ ಗೊತ್ತಾ ?

ನಾವು ದಿನನಿತ್ಯ ತಿನ್ನುವ ಹೆಚ್ಚಿನ ಆಹಾರ ಸಕ್ಕರೆಯಿಂದ (Sugar free food Benefits) ಕೂಡಿರುತ್ತದೆ. ಅದು ನಾವು ತಿನ್ನುವ ಸಿಹಿತಿಂಡಿಗಳು, ಪಾನೀಯಗಳು, ಕಾರ್ಬೊನೇಟೆಡ್ ಪಾನೀಯಗಳು ಅಥವಾ ಹಣ್ಣುಗಳು ಕೂಡ ಸಕ್ಕರೆ ಅಂಶದಿಂದ ಕೂಡಿರುತ್ತದೆ. ಕೆಲವು ವಿಧದ ಸಕ್ಕರೆ ದೇಹಕ್ಕೆ ಅವಶ್ಯಕವಾದರೂ, ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿಸಿದ ಸಕ್ಕರೆಯು ಹಲವಾರು ಆರೋಗ್ಯ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.

ಹಾಗಾಗಿ ನಾವು ತಿನ್ನುವ ಆಹಾರದ ಬಗ್ಗೆ ನಮಗೆ ಸದಾ ಎಚ್ಚರವಿರಬೇಕು. ಹೆಚ್ಚಾಗಿ ಸಕ್ಕರೆ ತಿನ್ನುವುದರಿಂದ ಮಧುಮೇಹ ಬರುವುದಿಲ್ಲ, ಬದಲಿಗೆ ನಾವು ತಿನ್ನುವ ಆಹಾರದಲ್ಲಿ ಇರುವ ಸಕ್ಕರೆ ಅಂಶದಿಂದಾಗಿ ಅಂತಹ ಖಾಯಿಲೆಗಳು ಬರುತ್ತದೆ. ಹಾಗಾಗಿ ಹೆಚ್ಚಾಗಿ ಸಕ್ಕರೆ ಅಂಶದಿಂದ ಕೂಡಿರುವ ಆಹಾರದಿಂದ ನಾವು ದೂರವಿರುವುದು ನಮ್ಮ ದೇಹಕ್ಕೆ ಉತ್ತಮವಾಗಿರುತ್ತದೆ.

ಕೆಲವು ಗುಪ್ತ ಸಕ್ಕರೆಯುಕ್ತ ಆಹಾರ ಸೇವನೆಯಿಂದ ನಮ್ಮ ದೇಹದಲ್ಲಿ ಕ್ಯಾಲೊರಿಗಳನ್ನು ಹೆಚ್ಚಿಸುತ್ತವೆ. ಇದ್ದರಿಂದಾಗಿ ನಮ್ಮ ದೇಹದಲ್ಲಿ ಬೇಡವಾದ ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗದಂತಹ ವಿವಿಧ ಚಯಾಪಚಯ ಅಸ್ವಸ್ಥತೆಗೊಳಿಸುವ ಖಾಯಿಲೆಗೆ ಕಾರಣವಾಗುತ್ತವೆ. ಹೆಚ್ಚುವರಿ ಸಕ್ಕರೆಯುಕ್ತ ಆಹಾರವನ್ನು ಕಡಿಮೆ ಮಾಡುವುದರಿಂದ ಅಥವಾ ಆಹಾರದ ಬದಲಾವಣೆಗಳು ತನ್ನದೇ ಆದ ಪ್ರಯೋಜನವನ್ನು ಹೊಂದಿವೆ.

ಒಂದು ತಿಂಗಳ ಕಾಲ ಸಕ್ಕರೆ ರಹಿತ ಆಹಾರದಿಂದ ಏನೆಲ್ಲಾ ಲಾಭ ಸಿಗುತ್ತೆ ಗೊತ್ತಾ ?
ಸತತವಾಗಿ ಒಂದು ತಿಂಗಳ ಕಾಲ ಸಕ್ಕರೆ ರಹಿತವಾಗಿ ಆಹಾರವನ್ನು ಸೇವಿಸುವುದರಿಂದ ತೂಕದಲ್ಲಿ ಗಮನಾರ್ಹವಾಗಿ ಇಳಿಕೆ ಕಾಣಬಹುದು. ಸಕ್ಕರೆ ಹಾಗೂ ಸಕ್ಕರೆ ರಹಿತ ಆಹಾರ ಸೇವೆನೆಯಿಂದ ನಮ್ಮ ದೇಹದಲ್ಲಿನ ಸಕ್ಕರೆ ಮಟ್ಟ ಕಡಿಮೆ ಆಗುತ್ತದೆ. ಹೆಚ್ಚಿನ ಸಕ್ಕರೆ ಅಂಶವಿರುವ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯ ನಿರ್ವಹಣೆಗೆ ಹಾನಿಯಾಗುತ್ತದೆ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸಬಹುದು.

ಇದನ್ನೂ ಓದಿ : Post workout nutrition: ವರ್ಕೌಟ್‌ನಿಂದ ಸ್ನಾಯುಗಳು ಬಲಗೊಳ್ಳುತ್ತಿಲ್ಲವೇ? ಹಾಗಿದ್ದರೆ ವ್ಯಾಯಾಮದ ನಂತರ ಈ ಆಹಾರಗಳನ್ನು ಸೇವಿಸಿ

ಇದನ್ನೂ ಓದಿ : Obesity: ಒಬೆಸಿಟಿಯಿಂದ ಕ್ಯಾನ್ಸರ್‌ ಬರತ್ತಾ; ದೇಹದ ತೂಕ ಹೆಚ್ಚಾದರೆ ಆಗುವುದಾದರೂ ಏನು…

ಇದನ್ನೂ ಓದಿ : Millet health benefits : ಮಧುಮೇಹ, ಹೃದಯರಕ್ತನಾಳ ಆರೋಗ್ಯಕ್ಕೆ ರಾಗಿ ರಾಮಬಾಣ

ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಬಹುದು ಎಂದು ತಜ್ಞರು ಹೇಳಿದ್ದಾರೆ. ಸಕ್ಕರೆ ರಹಿತ ಆಹಾರದಿಂದ ಚರ್ಮ ರೋಗಗಳನ್ನು ದೂರವಿಡಬಹುದಾಗಿದೆ. ನಮ್ಮ ದಿನನಿತ್ಯ ಜೀವನದ ಆಹಾರ ಕ್ರಮಗಳಲ್ಲಿ ಕಡಿಮೆ ಸಕ್ಕರೆ ರಹಿತ ಆಹಾರ ಅಥವಾ ಸಕ್ಕರೆ ಇಲ್ಲದ ಆಹಾರವನ್ನು ಸೇವಿಸುವುದರಿಂದ ನಮ್ಮ ಹೃದಯದ ಆರೋಗ್ಯ, ಬೊಜ್ಜು ಇನ್ನಿತರ ಖಾಯಿಲೆಗಳನ್ನು ದೂರವೀಡಬಹುದಾಗಿದೆ.

Sugar free food Benefits: Do you know the benefits of sugar free food for a month?

Comments are closed.